More

    ಕರೊನಾ ಸೇನಾನಿಗಳ ಹುದ್ದೆ ಕಾಯಂಗೊಳಿಸಲು ವಿವಿಧ ಸಂಘಗಳ ಒತ್ತಾಯ

    ಕಂಪ್ಲಿ: ಕರೊನಾ ಸೇನಾನಿಗಳಿಗೆ ಸುರಕ್ಷತಾ ಪರಿಕರ ವಿತರಿಸುವ ಜತೆಗೆ ಹುದ್ದೆ ಕಾಯಂಗೊಳಿಸುವಂತೆ ಒತ್ತಾಯಿಸಿ ಸಿಐಟಿಯು, ಅಕ್ಷರ ದಾಸೋಹ ನೌಕರರ ಸಂಘ, ರಾಜ್ಯ ಅಂಗನವಾಡಿ ನೌಕರರು ಹಾಗೂ ಸಹಾಯಕಿಯರ ಫೆಡರೇಷನ್ ಪದಾಧಿಕಾರಿಗಳು ತಹಸೀಲ್ದಾರ್ ಎಂ.ರೇಣುಕಾಗೆ ಶುಕ್ರವಾರ ಮನವಿ ಸಲ್ಲಿಸಿದರು.

    ಸಿಐಟಿಯು ತಾಲೂಕು ಸಂಚಾಲಕ ಬಂಡಿ ಬಸವರಾಜ್ ಮಾತನಾಡಿ, ಕರೊನಾ ಹಿನ್ನೆಲೆಯಲ್ಲಿ ಗ್ರಾಪಂ, ಆಶಾ, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿಯನ್ನು ಕಾಯಂಗೊಳಿಸಬೇಕು. ಬಾಕಿ ವೇತನ ನೀಡುವ ಜತೆಗೆ ಉಚಿತ ಪಡಿತರ, ವಿಮೆ ಸೌಲಭ್ಯ ಕಲ್ಪಿಸಬೇಕು. ಬಿಸಿಯೂಟ ನೌಕರರಿಗೆ ಎಲ್‌ಐಸಿ ಆಧಾರಿತ ಪೆನ್ಷನ್ ನಿಗದಿ ಸೇರಿ ಏಪ್ರಿಲ್‌ನಿಂದಲೂ ತಿಂಗಳಿಂದ ಶಾಲೆ ಆರಂಭಿಸುವವರೆಗೂ ವೇತನ ಪಾವತಿಸಬೇಕು ಎಂದು ಒತ್ತಾಯಿಸಿದರು.

    ಸಿಐಟಿಯು ತಾಲೂಕು ಸಹ ಸಂಚಾಲಕರಾದ ಡಿ.ಮುನಿಸ್ವಾಮಿ, ನಾಗರಾಜ, ರಾಜಭಕ್ಷಿ, ಮಾನ್ವಿ ಮಹೇಶ, ಅಕ್ಷರ ದಾಸೋಹ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಖುರ್ಷಿದ್ ಬೇಗಂ, ಪದಾಧಿಕಾರಿಗಳಾದ ವಿಜಯಲಕ್ಷ್ಮೀ, ಜಾಹಿರಾಬೀ, ಚಂದ್ರಮ್ಮ, ಲಕ್ಷ್ಮೀದೇವಿ, ಅಂಗನವಾಡಿ ನೌಕರರ ಹಾಗೂ ಸಹಾಯಕಿಯರ ಸಂಘದ ತಾಲೂಕು ಅಧ್ಯಕ್ಷೆ ಮಂಜುಳಾ, ಗಂಗಮ್ಮ, ಬಿ.ಗಿರಿಜಾ, ಮಾಬುನ್ನಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts