More

    ರಾಜ್ಯದಲ್ಲಿ ಕರೊನಾ ಆರ್​​ನಾಟ್​ ವ್ಯಾಲ್ಯೂ ಇಳಿಕೆ… ಹರಡುವಿಕೆ ಪ್ರಮಾಣ ಕುಸಿತ

    ಬೆಂಗಳೂರು: ರಾಜ್ಯದಲ್ಲಿ ಒಬ್ಬರಿಂದ ಒಬ್ಬರಿಗೆ ಕರೊನಾ ವೈರಸ್​ ಹರಡುವಿಕೆ ಪ್ರಮಾಣದಲ್ಲಿ ಇಳಿಮುಖವಾಗುತ್ತಿದೆ. ಕಳೆದ ಏ.10 ರಿಂದ ಮೇ.10 ರ ನಡುವಿನ ಅವಧಿಯಲ್ಲಿ ರಾಜ್ಯದಲ್ಲಿ ಕರೊನಾ ಆರ್​ ನಾಟ್​ (R-Naught ಅಥವಾ R0) ವ್ಯಾಲ್ಯೂ 1.66 ಇತ್ತು. ಅದು ಈಗ 1 ರ ಅಸುಪಾಸಿನಲ್ಲಿದ್ದು, ದಿನೇ ದಿನೇ ವೈರಸ್​ ಹರಡುವಿಕೆ ಪ್ರಮಾಣ ಕುಸಿಯುತ್ತಿದೆ ಎನ್ನಲಾಗಿದೆ.

    2020 ರ ಡಿಸೆಂಬರ್ 9 ರಂದು ದೇಶದಲ್ಲಿ ಆರ್​ ನಾಟ್​ ವ್ಯಾಲ್ಯೂ 0.91 ಕ್ಕಿಂತ ಕಡಿಮೆ ಇತ್ತು. ಆ ಸಂದರ್ಭದಲ್ಲಿ ಕರ್ನಾಟಕದಲ್ಲಿ 1.0 ಇತ್ತು. ಆದರೆ, 2021 ರ ಮಾರ್ಚ್​ 27 ರ ವೇಳೆಗೆ ದೇಶದಲ್ಲಿ ಆರ್​ ನಾಟ್​ ಮೌಲ್ಯ 1.53 ಇತ್ತು. ಅಲ್ಲದೆ, ದೇಶದ 19 ರಾಜ್ಯಗಳಲ್ಲಿ ಆರ್​ ನಾಟ್​ ಮೌಲ್ಯ 1 ಕ್ಕಿಂತ ಹೆಚ್ಚಿತು. ಕರ್ನಾಟಕದಲ್ಲಿ 1.0 ಯಿಂದ 1.66 ಕ್ಕೆ ಏರಿಕೆ ಆಯಿತು. ರಾಜ್ಯದಲ್ಲಿ ಒಬ್ಬರಿಂದ ಒಬ್ಬರಿಗೆ ವೇಗವಾಗಿ ವೈರಸ್​ ಪಸರಿಸುತ್ತಿತ್ತು ಎಂಬ ಸೂಚನೆ ಸಿಕ್ಕಿತು. ಜೊತೆಗೆ, ದೇಶದಲ್ಲಿ ಸರಾಸರಿ ನಾಲ್ಕು ಲಕ್ಷದವರೆಗೆ ಕರೊನಾ ಸೋಂಕಿತ ಪ್ರಕರಣಗಳು ದಾಖಲಾಯಿತು. ಕರೊನಾ ನಿಯಂತ್ರಿಸಲು ಕಠಿಣ ಲಾಕ್​ಡೌನ್​ ಹೇರಿದ್ದರಿಂದ ಇದೀಗ ಸೋಂಕು ಇಳಿಕೆಯಾಗುತ್ತಿದೆ ಎಂದು ಇಂಟಿಗ್ರೇಟೆಡ್​ ವೈದ್ಯ ಡಾ. ನಿರಂಜನ್​ ಯೆಲ್ಲೂರು ತಿಳಿಸಿದ್ದಾರೆ.

    ಇದನ್ನೂ ಓದಿ: ಕರೊನಾ ಲಸಿಕೆ ವಿರುದ್ಧ ಅಪಪ್ರಚಾರ ಮಾಡಿದ ಕಾಂಗ್ರೆಸ್ ದೇಶದ ಜನರ ಬಳಿ ಕ್ಷಮೆಯಾಚಿಸಲಿ

    ಏನಿದು ಆರ್​ ನಾಟ್​ ವ್ಯಾಲ್ಯೂ? : ಸಾಂಕ್ರಾಮಿಕ ರೋಗವು ಪಸರಿಸುವ ಪ್ರಮಾಣವನ್ನು ಅಳೆಯುವುದನ್ನು ವೈದ್ಯಕೀಯ ಭಾಷೆಯಲ್ಲಿ ಆರ್​ ನಾಟ್​ ವ್ಯಾಲ್ಯೂ ಎಂದು ಕರೆಯಲಾಗುತ್ತದೆ. ಒಟ್ಟಾರೆ ಜನಸಂಖ್ಯೆಯಲ್ಲಿ ಓರ್ವ ಸೋಂಕಿತನಿಂದ 2 ರಿಂದ 3 ಜನರಿಗೆ ಈ ಕರೊನಾ ಸೋಂಕು ಹರಡುತ್ತದೆ ಎಂಬುದು ಜಾಗತಿಕವಾಗಿ ಕರೊನಾದ ಆರ್​ ನಾಟ್​ ವ್ಯಾಲ್ಯೂ ಎಂದು ನಿರ್ಧರಿಸಲಾಗಿದೆ. ಆರ್​ ನಾಟ್​ ಮೌಲ್ಯ ಹೆಚ್ಚಾದಷ್ಟು ಮತ್ತಷ್ಟು ಜನರಿಗೆ ಸೋಂಕು ತಗಲುತ್ತದೆ ಎಂಬ ಸೂಚನೆ ಕಂಡುಬರುತ್ತದೆ.

    ಒಂದಕ್ಕಿಂತ ಕಡಿಮೆ ಆರ್​ ನಾಟ್​ ಕಂಡುಬಂದರೆ ವೈರಾಣು ಪಸರಿಸುವ ಪ್ರಮಾಣ ಕಡಿಮೆಯಾಗಿದೆ ಅಥವಾ ಸುರಕ್ಷಿತ ಎಂದರ್ಥ. ಒಂದಕ್ಕಿಂತ ಜಾಸ್ತಿ ಇದ್ದರೆ ವೈರಸ್​ ಹರಡುವಿಕೆ ಹೆಚ್ಚಾಗಿದೆ ಎಂದು ತಿಳಿಯುತ್ತದೆ. ದೇಶದ ಒಟ್ಟಾರೆ ಜನಸಂಖ್ಯೆ, ರೋಗ ಶರೀರದಲ್ಲಿ ಇರುವ ಅವಧಿ, ಸಾಮಾಜಿಕ ಸ್ಥಿತಿಗತಿ ಹಾಗೂ ರಾಜಕೀಯ ನಿರ್ಣಯ ಸೇರಿದಂತೆ ಇನ್ನಿತರ ಅಂಶಗಳನ್ನು ಪರಿಗಣಿಸಿ ಕರೊನಾ ಆರ್​ ನಾಟ್​ ವ್ಯಾಲ್ಯೂ ನಿರ್ಧರಿಸಲಾಗುತ್ತದೆ ಎನ್ನಲಾಗಿದೆ.

    ಇದನ್ನೂ ಓದಿ: ಡಿಎಲ್​ಎಫ್​ ಲಂಚ ಪ್ರಕರಣದಲ್ಲಿ ಲಾಲು ಪ್ರಸಾದ್​ ಯಾದವ್​​ಗೆ ಕ್ಲೀನ್​ ಚಿಟ್​

    ಅಮೆರಿಕದಲ್ಲಿ 2.30 ಇತ್ತು : ಕರೊನಾ ಮೊದಲನೇ ಅಲೆಗೆ ಅಮೆರಿಕ ತತ್ತರಿಸಿತ್ತು. ಲಕ್ಷಾಂತರ ಪ್ರಕರಣಗಳು ದಾಖಲಾಗಿದ್ದವು. ಚಿಕಿತ್ಸೆ ಫಲಕಾರಿಯಾಗದೆ ಸಾವಿರಾರು ಜನರು ಮೃತಪಟ್ಟಿದ್ದರು. ನ್ಯೂಯಾರ್ಕ್​ ಮತ್ತು ನ್ಯೂಜಸಿರ್ಯಲ್ಲಿ ಆಗ 2.30 ಆರ್​ ನಾಟ್​ ವ್ಯಾಲ್ಯೂ ಕಂಡುಬಂದಿತ್ತು. ಆ ಸಂದರ್ಭದಲ್ಲಿ ಒಬ್ಬರಿಂದ ಇನ್ನೊಬ್ಬರಿಗೆ ವೈರಸ್​ ಹರಡುವಿಕೆ ಪ್ರಮಾಣ ಹೆಚ್ಚಾಗಿತ್ತು. ಕ್ರಮೇಣ ಲಾಕ್​ಡೌನ್​ ಹಾಗೂ ಪರಿಣಾಮಕಾರಿ ಚಿಕಿತ್ಸೆ ಅಭಿಯಾನ ಜಾರಿಗೆ ತಂದಿರುವುದರಿಂದ ವೈರಸ್​ ಹರಡುವಿಕೆ ಪ್ರಮಾಣ ಕುಸಿಯಿತು ಎಂದು ಡಾ. ಯೆಲ್ಲೂರು ತಿಳಿಸಿದ್ದಾರೆ.

    17 ವರ್ಷದ ಬಾಲಕ ಬಲಿ… ಕರೊನಾಗಿಂತ ಮಾರಕವಾದ ಪೊಲೀಸರ ಲಾಠಿ !

    VIDEO | ಆ್ಯಂಜಲೀನಾ ಜೋಲಿ ‘ಜೇನುಹುಳಗಳ ದಿನ’ ಆಚರಿಸಿದ್ದು ಹೀಗೆ !

    ವಿವಾಹೇತರ ಸಂಬಂಧ ಬೆಳೆಸಿದ ಪೊಲೀಸ್​​ಗೆ ಇನ್​ಕ್ರಿಮೆಂಟ್ ಕಟ್ !

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts