More

    ಶೇ. 7.53ಕ್ಕೆ ಕುಸಿದ ಕರೊನಾ ಪಾಸಿಟಿವಿಟಿ; ಒಂದೂವರೆ ತಿಂಗಳ ಬಳಿಕ ಮರಣ ಪ್ರಮಾಣವೂ ಇಳಿಕೆ

    ಬೆಂಗಳೂರು: ರಾಜ್ಯದಲ್ಲಿ ಕರೊನಾ ಸೋಂಕು ಹಾಗೂ ಸಾವಿನ ಪ್ರಮಾಣ ಎರಡೂ ಇಳಿಕೆಯಾಗಿದ್ದು, ಕೊಂಚ ನಿರಾಳತೆ ಮೂಡಿಸಿದೆ. ಮಂಗಳವಾರ 9,808 ಹೊಸ ಪ್ರಕರಣ ವರದಿಯಾಗಿದ್ದು, ದಿನದ ಸೋಂಕು ಪ್ರಮಾಣ ದರ ಶೇ. 7.53ಕ್ಕೆ ಇಳಿಕೆಯಾಗಿದೆ. 179 ಮಂದಿ ಸಾವಿಗೀಡಾಗುವ ಮೂಲಕ ಒಂದೂವರೆ ತಿಂಗಳಲ್ಲಿ ಇದೇ ಮೊದಲ ಬಾರಿಗೆ ಮರಣ ಪ್ರಮಾಣ ದರ ಶೇ.2ಕ್ಕಿಂತ ಕಡಿಮೆ ವರದಿಯಾಗಿದೆ.

    ಏ.28ರಂದು 180 ಮಂದಿ ಸೋಂಕಿಗೆ ಬಲಿಯಾಗಿದ್ದರು. ಆಗಿನ ಮರಣ ಪ್ರಮಾಣ ದರ ಶೇ.0.56 ಇತ್ತು. ನಂತರದಲ್ಲಿ ಸಾವಿನ ಸಂಖ್ಯೆ ನಿತ್ಯ 500 ಗಡಿ ಮೀರಿತ್ತು. 40 ದಿನಗಳ ಬಳಿಕ ಸಾವಿನ ಸಂಖ್ಯೆ 200ಕ್ಕಿಂತ ಕೆಳಗೆ ಇಳಿದಿದೆ. ದಿನದ ಮರಣ ಪ್ರಮಾಣ ದರ ಶೇ.1.85ಕ್ಕೆ ಕುಸಿದಿದೆ. ಕಳೆದ 24 ಗಂಟೆಯಲ್ಲಿ 23,449 ಮಂದಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದು, ಈವರೆಗಿನ ಗುಣಮುಖರ ಸಂಖ್ಯೆ 24.60 ಲಕ್ಷ ಮೀರಿದೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆ 2.25 ಲಕ್ಷಕ್ಕೆ ಇಳಿಕೆಯಾಗಿದೆ.

    ಇದನ್ನೂ ಓದಿ: ಹೂತಿಟ್ಟ 20 ದಿನಗಳ ಬಳಿಕ ಶವ ಹೊರಕ್ಕೆ ತೆಗೆಸಿದ ಪೊಲೀಸರು!; ಅದು ಬರೀ ಸಾವಲ್ಲ, ಕೊಲೆ..

    ಬೆಂಗಳೂರು ನಗರ 2,028 ಪ್ರಕರಣಗಳು ವರದಿಯಾಗಿದ್ದು, ಉಳಿದಂತೆ 22 ಜಿಲ್ಲೆಗಳಲ್ಲಿ ಸೋಂಕಿತರ ಸಂಖ್ಯೆ ಮೂರಂಕಿ ಹಾಗೂ 7 ಜಿಲ್ಲೆಗಳಲ್ಲಿ ಒಂದಂಕಿಗೆ ಇಳಿಕೆಯಾಗಿದೆ. ಎರಡು ತಿಂಗಳಲ್ಲಿ ಇದೇ ಮೊದಲ ಬಾರಿಗೆ ಬೆಂಗಳೂರು ನಗರದಲ್ಲಿ ಮರಣದ ಸಂಖ್ಯೆ 50ಕ್ಕಿಂತ ಕಡಿಮೆ ವರದಿಯಾಗಿದ್ದು, 44 ಸೋಂಕಿತರು ಮೃತರಾಗಿದ್ದಾರೆ. ಮೈಸೂರಿನಲ್ಲಿ 15, ಹಾವೇರಿಯಲ್ಲಿ 11, ಶಿವಮೊಗ್ಗದಲ್ಲಿ 10 ಮಂದಿ ಸಾವಿಗೀಡಾಗಿದ್ದಾರೆ. ಉಳಿದಂತೆ 24 ಜಿಲ್ಲೆಗಳಲ್ಲಿ ಸಾವಿನ ಸಂಖ್ಯೆ ಒಂದಂಕಿಗೆ ಇಳಿಕೆಯಾಗಿದ್ದು, ಚಿತ್ರದುರ್ಗ ಮತ್ತು ರಾಯಚೂರು ಜಿಲ್ಲೆಗಳಲ್ಲಿ ಶೂನ್ಯ ಸಾವಿನ ಸಂಖ್ಯೆ ವರದಿಯಾಗುವ ಮೂಲಕ ನಿರಾಳತೆ ಮೂಡಿದೆ.

    ಈ ಮಧ್ಯೆ, ರಾಜ್ಯದಲ್ಲಿ ಮಂಗಳವಾರ 45,714 ರ‌್ಯಾಪಿಡ್ ಆ್ಯಂಟಿಜಿನ್ ಟೆಸ್ಟ್ ಮತ್ತು 84,510 ಆರ್‌ಟಿಪಿಸಿಆರ್ ಪರೀಕ್ಷೆ ಸೇರಿ 1,30,224 ಕೋವಿಡ್ ಪರೀಕ್ಷೆ ನಡೆಸಲಾಗಿದೆ. ಇದರೊಂದಿಗೆ ಈವರೆಗಿನ ಕೋವಿಡ್ ಪರೀಕ್ಷೆ ಸಂಖ್ಯೆ 3.08 ಕೋಟಿ ಮೀರಿದೆ.

    ಲಾಕ್‌ಡೌನ್ ವೇಳೆ ಜಪ್ತಿ ಮಾಡಿದ ವಾಹನಗಳ ಬಿಡುಗಡೆಗೆ ಹೈಕೋರ್ಟ್ ಆದೇಶ: ಠಾಣೆಯಲ್ಲೇ ದಂಡ ಕಟ್ಟಿದ್ರೆ ಸಾಕು..

    ‘ನಮ್ಮನೆಯವರೇ ಎಎಸ್​ಐ, ಫೋನ್ ಮಾಡ್ಲಾ?’ ಎಂದು ಪೊಲೀಸರೊಂದಿಗೇ ವಾಗ್ವಾದ ನಡೆಸಿದ ಮಹಿಳೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts