More

    ನಟಿ ತಮನ್ನಾ ಭಾಟಿಯಾ ಆಸ್ಪತ್ರೆಗೆ ದಾಖಲು

    ಹೈದ್ರಾಬಾದ್​: ಬಹುಭಾಷಾ ನಟಿ ತಮನ್ನಾ ಭಾಟಿಯಾ ಅವರಿಗೆ ಕರೊನಾ ಸೋಂಕು ದೃಢಪಟ್ಟಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ.

    ನಟಿ ತಮನ್ನಾ ಭಾಟಿಯಾ ಆಸ್ಪತ್ರೆಗೆ ದಾಖಲುಒಂದು ತಿಂಗಳ ಹಿಂದೆಯೇ ಮಿಲ್ಕಿಬ್ಯೂಟಿ ತಮನ್ನಾಗೆ ಕರೊನಾ ಸೋಂಕಿನ ಛಾಯೆ ಆವರಿಸಿತ್ತು. ಆಗಸ್ಟ್​ ಕೊನೇ ವಾರದಲ್ಲಿ ತಮನ್ನಾರ ತಂದೆ ಸಂತೋಷ್ ಭಾಟಿಯಾ ಹಾಗೂ ತಾಯಿ ರಜನಿ ಭಾಟಿಯಾಗೆ ಸೋಂಕು ದೃಢಪಟ್ಟಿತ್ತು. ಈ ಬಗ್ಗೆ ಸ್ವತಃ ನಟಿಯೇ ತನ್ನ ಟ್ವಿಟರ್​ನಲ್ಲಿ ಮಾಹಿತಿ ಹಂಚಿಕೊಂಡಿದ್ದರು. ‘ಅಪ್ಪ-ಅಮ್ಮನಿಗೆ ಕರೊನಾ ಸೋಂಕು ತಗುಲಿದೆ. ನನ್ನ ವರದಿ ನೆಗೆಟಿವ್​ ಬಂದಿದೆ. ನನ್ನ ಪಾಲಕರು ಶೀಘ್ರವೇ ಗುಣಮುಖರಾಗಲಿದ್ದಾರೆ. ನೀವು ದೇವರಲ್ಲಿ ಪ್ರಾರ್ಥಿಸಿ’ ಎಂದು ಬರೆದುಕೊಂಡಿದ್ದರು. ಲಕ್ಷಾಂತರ ಅಭಿಮಾನಿಗಳು ಕೂಡ ನೆಚ್ಚಿನ ನಟಿಯ ಪಾಲಕರು ಶೀಘ್ರ ಗುಣವಾಗಲೆಂದು ಹಾರೈಸಿದ್ದರು. ಇದನ್ನೂ ಓದಿರಿ ಎಲ್ಲ ಪ್ರಜೆಗಳಿಗೂ ಕೋವಿಡ್​ಗೆ ಉಚಿತ ಲಸಿಕೆ ಕೊಡಲಿದೆ ಈ ದೇಶ!

    ಇದಾದ ಒಂದು ತಿಂಗಳ ಬಳಿಕ ತಮನ್ನಾ ಅವರಲ್ಲಿ ಕರೊನಾ ರೋಗ ಲಕ್ಷಣ ಕಾಣಿಸಿಕೊಂಡುತ್ತು. ಈ ಹಿನ್ನೆಲೆಯಲ್ಲಿ ಟೆಸ್ಟ್​ ಮಾಡಿಸಿದ್ದು, ವರದಿಯು ಪಾಸಿಟಿವ್​ ಬಂದಿದೆ. ವೈದ್ಯರ ಸಲಹೆ ಮೇರೆಗೆ ಹೈದ್ರಾಬಾದ್​ನ ಖಾಸಗಿ ಆಸ್ಪತ್ರೆಯಲ್ಲಿ ಬಾಹುಬಲಿ ಖ್ಯಾತಿಯ ನಟಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಹೈದರಾಬಾದ್​ನಲ್ಲಿ ವೆಬ್ ಸರಣಿ ಚಿತ್ರಕ್ಕಾಗಿ ಇತ್ತೀಚಿಗೆ ಕೆಲ ದಿನಗಳಿಂದ ತಮನ್ನಾ ಶೂಟಿಂಗ್​ನಲ್ಲಿ ಭಾಗಿಯಾಗಿದ್ದರು.

    ಈ ಫ್ಲೆಕ್ಸ್​ನಲ್ಲಿ ಗಾಂಧಿ-ಶಾಸ್ತ್ರಿ ಭಾವಚಿತ್ರ ಹುಡುಕಿಕೊಟ್ಟವರಿಗೆ ಬಹುಮಾನ!

    PHOTO GALLERY| ಚಿರು ಫೋಟೋ ಇಟ್ಟುಕೊಂಡು ಸೀಮಂತ ಶಾಸ್ತ್ರ ಮಾಡಿಸಿಕೊಂಡ ಮೇಘನಾ ರಾಜ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts