More

    ರಾತ್ರಿಯೆಲ್ಲ ನರಳಾಡಿ ಆಸ್ಪತ್ರೆಯಲ್ಲೇ ನೇಣಿಗೆ ಕೊರಳೊಡ್ಡಿದ ಕರೊನಾ ಸೋಂಕಿತ

    ರಾಂಚಿ: ಕರೊನಾ ಸೋಂಕಿಗೆ ತುತ್ತಾದ ವ್ಯಕ್ತಿಯೊಬ್ಬ ರಾತ್ರಿಯೆಲ್ಲ ನರಳಾಡಿ, ಬೆಳಗ್ಗೆ ಎನ್ನುವಷ್ಟೊತ್ತರಲ್ಲಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಾರ್ಖಂಡ್​ನ ಗರ್ವಾದಲ್ಲಿ ನಡೆದಿದೆ.

    ವ್ಯಕ್ತಿಯೊಬ್ಬ ಸೋಂಕು ದೃಢವಾದ ಹಿನ್ನೆಲೆಯಲ್ಲಿ ಆತ ಏಪ್ರಿಲ್​ 14ರಂದು ಆಸ್ಪತ್ರೆಗೆ ದಾಖಲಾಗಿದ್ದ. ವಿಪರೀತ ಅನಾರೋಗ್ಯದಿಂದ ಬಳಲುತ್ತಿದ್ದ ಆತ ಪ್ರತಿದಿನ ರಾತ್ರಿಯೂ ನರಳಾಡುತ್ತಿದ್ದು, ಬೇರೆ ರೋಗಿಗಳು ನಿದ್ರೆ ಮಾಡದಂತಾಗಿತ್ತಂತೆ. ಅದರಂತೆ ಸೋಮವಾರ ರಾತ್ರಿಯೂ ಆತ ನರಳಾಡಿದ್ದಾನೆ. ನೋವೆಂದು ಕೂಗಿಕೊಂಡಿದ್ದಾನೆ. ಅದಾದ ನಂತರ ವಾರ್ಡ್​ನಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಮೃತ ರೋಗಿಗೆ ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿತ್ತು. ಆತ ನಿಧಾನವಾಗಿ ಚೇತರಿಕೆ ಕಾಣುತ್ತಿದ್ದ. ಆದರೆ ಇದ್ದಕ್ಕಿದ್ದಂತೆ ಆತ್ಮಹತ್ಯೆ ಮಾಡಿಕೊಂಡಿರುವುದಕ್ಕೆ ಕಾರಣವೇನು ಎನ್ನುವುದು ಗೊಂದಲಮಯವಾಗಿದೆ. ಈ ವಿಚಾರವಾಗಿ ಹೆಚ್ಚಿನ ತನಿಖೆ ನಡೆಸುವುದಾಗಿ ಅಲ್ಲಿನ ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್​)

    ಏರ್​ಪೋರ್ಟ್​ ಮೆಟ್ರೋ ಮಾರ್ಗಕ್ಕೆ ಕೇಂದ್ರದ ಅಸ್ತು!

    ಕೇಜ್ರಿವಾಲ್​ ಪತ್ನಿಗೆ ಕರೊನಾ ಸೋಂಕು; ಕ್ವಾರಂಟೈನ್​ಗೆ ಒಳಗಾದ ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts