More

    video/ ಆಸ್ಪತ್ರೆಯಿಂದ ಕರೊನಾ ಸೋಂಕಿತ ಎಸ್ಕೇಪ್​!

    ಹುಬ್ಬಳ್ಳಿ: ಜನರೇ, ಸ್ವಲ್ಪ ಜಾಗ್ರತೆ! ಕೋವಿಡ್ ವಾಡ್೯ನಿಂದ ಇಂದು ಮುಂಜಾನೆ ಸೋಂಕಿತನೊಬ್ಬ ಎಸ್ಕೇಪ್​ ಆಗಿದ್ದು, ಈತನ ಸುಳಿವು ಸಿಕ್ಕಲ್ಲಿ ಕೂಡಲೇ ಹತ್ತಿರದ ಪೊಲೀಸ್​ ಠಾಣೆಗೆ ಮಾಹಿತಿ ಕೊಡಿ.

    ಕಳ್ಳತನ ಪ್ರಕರಣದಲ್ಲಿ ಉಪನಗರ ಠಾಣೆ ಪೊಲೀಸರು ಬಂಧಿಸಿದ್ದ ಆರೋಪಿಗೆ ಕರೊನಾ ಸೋಂಕು ಪತ್ತೆಯಾಗಿತ್ತು. ಹಾಗಾಗಿ ಆರೋಪಿಯನ್ನು ಕಿಮ್ಸ್ ಆಸ್ಪತ್ರೆಯ ಕೋವಿಡ್​ ವಾರ್ಡ್​ಗೆ ಸೇರಿಸಲಾಗಿತ್ತು. ಇಂದು ಬೆಳಗ್ಗೆ 5.30ರ ಸುಮಾರಿನಲ್ಲಿ ಆಸ್ಪತ್ರೆಯಿಂದ ಈತ ಪರಾರಿಯಾಗಿದ್ದು, ಈ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇದನ್ನೂ ಓದಿರಿ ಜಿಲ್ಲಾಧಿಕಾರಿಗೂ ಕೋವಿಡ್​ ಸೋಂಕು, ಬೆಚ್ಚಿಬೀಳಿಸುತ್ತೆ ಟ್ರಾವೆಲ್​ ಹಿಸ್ಟರಿ!

    ಇಬ್ಬರು ಪೊಲೀಸ್ ಸಿಬ್ಬಂದಿ ಕಾವಲಿದ್ದರೂ ಅವರ ಕಣ್ತಪ್ಪಿಸಿ ಕರೊನಾ ಸೋಂಕಿತನು(P.no. 14537) ಎಸ್ಕೇಪ್​ ಆಗಿದ್ದಾನೆ. ಈತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ. ಸಾರ್ವಜನಿಕರು ಮಾತ್ರವಲ್ಲ, ಕಿಮ್ಸ್ ಸಿಬ್ಬಂದಿಯಲ್ಲೂ ಆತಂಕ ಶುರುವಾಗಿದೆ.

    ಕಳ್ಳತನ ಆರೋಪದಲ್ಲಿ ಈತನನ್ನು ಬಂಧಿಸಿದ್ದ ಪೊಲೀಸರಿಗೂ ಕರೊನಾ ಭೀತಿ ಕಾಡುತ್ತಿದ್ದು, ಇದೀಗ ಮತ್ತೊಂದು ಟೆನ್ಷನ್​ ತಂದೊಡ್ಡಿದ್ದಾನೆ. ಎರಡು ದಿನಗಳ‌ ಹಿಂದೆ ಕಳ್ಳತನ ಆರೋಪಿಯೂ ಆದ ಕರೊನಾ ಸೋಂಕಿತನನ್ನು ಕಿಮ್ಸ್​ಗೆ ಅಡ್ಮಿಟ್ ಮಾಡಲಾಗಿತ್ತು.

    ಕರೊನಾ ಸೋಂಕಿತರು ಆಸ್ಪತ್ರೆಗಳಿಂದ ಪರಾರಿ ಆಗುತ್ತಿರುವ ಪ್ರಕರಣಗಳು ರಾಜ್ಯದಲ್ಲಿ ಪದೇಪದೆ ಸಂಭವಿಸುತ್ತಿದ್ದು, ಜನರಲ್ಲಿ ಮತ್ತಷ್ಟು ಆತಂಕ ಮೂಡಿಸುತ್ತಿದೆ. ಕಳೆದ ವಾರ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯ ಐಸೋಲೇಷನ್​ ವಾರ್ಡ್​ನಲ್ಲಿದ್ದ ಸೋಂಕಿತನೊಬ್ಬ ಸೆಕ್ಯೂರಿಟಿಗಳಿಗೆ ಉಗಿದು ಎಸ್ಕೇಪ್​ ಆಗಿದ್ದ.

    ..ಡೇಂಜರ್! ಕೋವಿಡ್​ ಸೋಂಕಿತ ಪರಾರಿ

    ..ಡೇಂಜರ್! ಕೋವಿಡ್​ ಸೋಂಕಿತ ಪರಾರಿಕೋವಿಡ್​ ವಾರ್ಡ್​ನಿಂದ ಸೋಂಕಿತನೊಬ್ಬ ಎಸ್ಕೇಪ್​ ಆಗಿದ್ದು, ಸಿಸಿಟಿವಿಯಲ್ಲಿ ದೃಶ್ಯ ಸೆರೆಯಾಗಿದೆ. ಇಂದು(ಶುಕ್ರವಾರ) ಮುಂಜಾನೆ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಈ ಘಟನೆ ಸಂಭವಿಸಿದೆ. ಎಸ್ಕೇಪ್​ ಆದ ಸೋಂಕಿತನು(P.no. 14537) ಕಳ್ಳತನದ ಆರೋಪಿ. ಇತ್ತೀಚಿಗೆ ಈತನನ್ನು ಉಪನಗರ ಠಾಣೆ ಪೊಲೀಸರು ಬಂಧಿಸಿದ್ದರು. #KimsHospital #Corona #Escape

    Posted by Vijayavani on Friday, July 3, 2020

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts