More

    ಪ್ರಕೃತಿ ವಿಕೋಪಕ್ಕೆ ಗ್ರಹಣ ಕಾರಣ!

    ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
    ಕಳೆದ ಜುಲೈನಲ್ಲಿ ಸಂಭವಿಸಿದ್ದ ಚಂದ್ರಗ್ರಹಣ ಮತ್ತು ಡಿಸೆಂಬರ್‌ನಲ್ಲಿ ಕಂಡುಬಂದ ಸೂರ್ಯಗ್ರಹಣದ ಪ್ರಭಾವದಿಂದ ಕರೊನಾ, ಪ್ರವಾಹದಂತಹ ಆಪತ್ತು ಎದುರಾಗುತ್ತದೆ ಎಂಬ ಮಾಹಿತಿ ಅತ್ತೂರು ಬೈಲು ಮಹಾಗಣಪತಿ ಮಂದಿರದಿಂದ ಪ್ರಕಟಗೊಳ್ಳುವ ಉಡುಪಿ ಪಂಚಾಂಗದಲ್ಲಿ ಉಲ್ಲೇಖವಿದೆ.
    ಪ್ರತೀ ವರ್ಷದ ಯುಗಾದಿಯಿಂದ ಮುಂದಿನ ವರ್ಷದ ಯುಗಾದಿವರೆಗಿನ ಮಾಹಿತಿಯೊಳಗೊಂಡ ಈ ಪಂಚಾಂಗ 2018 ನವಂಬರ್‌ನಲ್ಲಿ ಮಾರುಕಟ್ಟೆಗೆ ಬಂದಿದ್ದು, ಇದರಲ್ಲಿ 2019 ಮಾರ್ಚ್‌ನಿಂದ 2020 ಮಾರ್ಚ್‌ವರೆಗಿನ ಸಂಪೂರ್ಣ ಮಾಹಿತಿ ಇದೆ. 2019 ಜುಲೈ 16 ರಂದು ಸಂಭವಿಸಿದ ಚಂದ್ರಗ್ರಹಣ ಮತ್ತು 2019 ಡಿಸೆಂಬರ್ 26 ರಂದು ಕಂಡುಬಂದ ಸೂರ್ಯಗ್ರಣದ ಪ್ರಭಾವದಿಂದಾಗಿ ಚೀನಾ, ಕಂಧಹಾರ್, ಕಾಶ್ಮೀರ ಮತ್ತಿತರ ಕಡೆಗಳಲ್ಲಿ ಮಹಾ ಆಪತ್ತು ಬರಲಿದೆ ಎಂಬ ಮಾಹಿತಿಯನ್ನು ಶ್ಲೋಕ ರೂಪದಲ್ಲಿ ವಿವರಿಸಲಾಗಿತ್ತು.

    ಉಡುಪಿ ಪಂಚಾಂಗ
    ಉಡುಪಿ ಪಂಚಾಂಗ 114 ವರ್ಷಗಳಿಂದ ಪ್ರಕಟವಾಗುತ್ತಿದೆ. ಶ್ರೀನಿವಾಸ ಅಡಿಗ ಸಾಲಿಗ್ರಾಮ ಅವರ ಮಾರ್ಗದರ್ಶನದಲ್ಲಿ ಮೂಲ್ಕಿ ಒಂಬತ್ತು ಮಾಗಣೆಗೆ ಸಂಬಂಧಿಸಿದ ಅತ್ತೂರು ಬೈಲು ಮಹಾಗಣಪತಿ ಮಂದಿರದ ಗಡಿಪ್ರಧಾನ ವೆಂಕಟರಾಜ ಉಡುಪ ಅವರಿಂದ ಈ ಪಂಚಾಂಗ ರಚಿತವಾಗಿದೆ. ಕರಾವಳಿಯಲ್ಲಿ ಹೆಚ್ಚಾಗಿ ಧಾರ್ಮಿಕ ಕಾರ್ಯಕ್ರಮಗಳ ಮೂಹೂರ್ತ ಮತ್ತಿತರ ಕಾರ್ಯಗಳಿಗೆ ಈ ಪಂಚಾಂಗ ಬಳಸುತ್ತಾರೆ.

    2019ರ ಪಂಚಾಂಗದಲ್ಲಿ ಸೂರ್ಯಗ್ರಹಣ ಮತ್ತು ಚಂದ್ರಗ್ರಹಣದ ಫಲವಾಗಿ ಆಪತ್ತು ಇದೆ ಎಂಬುದನ್ನು ಶ್ಲೋಕದ ಮೂಲಕ ಉಲ್ಲೇಖಿಸಲಾಗಿದೆ. ಕಳೆದ ಬಾರಿಯ ಮಹಾಮಳೆ ಮತ್ತು ಕರೊನಾ ಮಹಾಮಾರಿ ಇದನ್ನು ನಿಜವಾಗಿಸಿದೆ.
    -ಅತ್ತೂರು ಬೈಲು ವೆಂಕಟರಾಜ ಉಡುಪ
    ಉಡುಪಿ ಪಂಚಾಂಗ ರಚನೆಕಾರರು

    ಜ್ಯೋತಿಷ್ಯ ಶಾಸ್ತ್ರ ಮೂಢನಂಬಿಕೆಯಲ್ಲ. ಸುನಾಮಿ ಬಗ್ಗೆಯೂ ಮಂಗಳೂರು ಪಂಚಾಂಗದಲ್ಲಿ ಉಲ್ಲೇಖವಿತ್ತು. ಪ್ರಸಕ್ತ ಉಡುಪಿ ಪಂಚಾಂಗದ ಮಾತು ನಿಜವಾಗಿದೆ.
    – ಅನಂತಪದ್ಮನಾಭ ಆಸ್ರಣ್ಣ.
    ಪ್ರಧಾನ ಅರ್ಚಕ, ಶ್ರೀ ಕ್ಷೇತ್ರ ಕಟೀಲು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts