More

    ರೋಗ ತೊಲಗಲು ಭೂತಾಯಿಗೆ ಪೂಜೆ: ಬಳ್ಳಾರಿ ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಊರ ಸುತ್ತ ಅನ್ನ ಚೆಲ್ಲಿದ ಜನ

    ಬಳ್ಳಾರಿ: ಕರೊನಾ ತೊಲಗಲು ಕುರುಗೋಡು ತಾಲೂಕಿನ ಕೊಳಗಲ್ಲು ಗ್ರಾಮದಲ್ಲಿ ಮೌಢ್ಯಾಚರಣೆಗೆ ಗ್ರಾಮಸ್ಥರು ಮೊರೆ ಹೋಗಿದ್ದಾರೆ. ಗ್ರಾಮದಲ್ಲಿ 300ಕ್ಕೂ ಅಧಿಕ ಪ್ರಕರಣಗಳು ಪತ್ತೆಯಾಗಿದ್ದು, 30 ಮಂದಿ ಬಲಿಯಾಗಿದ್ದಾರೆ. ಹೀಗಾಗಿ, ಕರೊನಾ ಅಬ್ಬರಕ್ಕೆ ಹೇಗಾದರೂ ಮಾಡಿ ಕಡಿವಾಣ ಹಾಕಬೇಕೆಂಬ ನಿರ್ಧಾರಕ್ಕೆ ಬಂದ ಗ್ರಾಮಸ್ಥರು, ಮಂಗಳವಾರ ಬೆಳಗ್ಗೆ ಮಡೆಸ್ನಾನ ಮಾಡಿ ಅಂದಾಜು 5 ಕ್ವಿಂಟಾಲ್ ಅನ್ನ, ಒಂದು ಕ್ವಿಂಟಾಲ್ ಜೋಳದ ಅನ್ನ, ಎರಡು ಕ್ವಿಂಟಾಲ್ ಮೊಸರನ್ನು ತಯಾರಿಸಿಕೊಂಡು ಗ್ರಾಮದ ಹೊಲದ ಮೇರೆಯ ಸುತ್ತಲೂ ಕೊಡಲಿ-ಬಡಿಗೆ, ಕಟ್ಟಿಗೆ ಡೊಳ್ಳಿನ ವಾದ್ಯದೊಂದಿಗೆ ತೆರಳಿ ಮಡೆಸ್ನಾನದಿಂದ ತಯಾರಿಸಿ ತಂದಿದ್ದ ಅನ್ನವನ್ನು ಚೆಲ್ಲಿ ಕರೊನಾ ತೊಲಗಿಸುವಂತೆ ಭೂಮಿ ತಾಯಿಗೆ ಬೇಡಿಕೊಂಡಿದ್ದಾರೆ. ಹೊಲಕ್ಕೆ ಗ್ರಾಮಸ್ಥರು ತೆರಳುತ್ತಿದ್ದ ದೃಶ್ಯಾವಳಿಗಳು ಗ್ರಾಮದ ಪ್ರಮುಖ ರಸ್ತೆಯಲ್ಲಿ ಅಳವಡಿಸಿದ್ದ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts