More

    ಕರೊನಾ ಎಂಬುದು ವೈರಸ್ಸೇ ಅಲ್ಲ, ಅದೊಂದು ಬ್ಯಾಕ್ಟೀರಿಯಾ: ಏನು ಹೇಳುತ್ತೆ ಫ್ಯಾಕ್ಟ್‌ಚೆಕ್?

    ನವದೆಹಲಿ: ‘‘ವಿಶ್ವ ಆರೋಗ್ಯ ಸಂಸ್ಥೆ ಇಡೀ ಜಗತ್ತಿಗೆ ಸುಳ್ಳು ಹೇಳಿ ಮೋಸ ಮಾಡಿದೆ; ಕರೊನಾ ಎಂಬುದು ವೈರಸ್ಸೇ ಅಲ್ಲ, ಅದೊಂದು ಬ್ಯಾಕ್ಟೀರಿಯಲ್ ಇನ್‌ಫೆಕ್ಷನ್. ರೋಗಿಗಳನ್ನು ಒಂದೇ ದಿನದಲ್ಲಿ ಗುಣಪಡಿಸಬಹುದು….’’

    ಈ ರೀತಿಯ ಒಕ್ಕಣೆ ಇರುವ ಒಂದು ವಿಡಿಯೋ ನಿಮಗೂ ವಾಟ್ಸ್‌ಆ್ಯಪ್‌ನಲ್ಲಿ ಬಂದಿರಬಹುದು. ಈಗಾಗಲೇ ಇದು ಸಿಕ್ಕಾಪಟ್ಟೆ ವೈರಲ್ ಆಗಿದೆ. ಲಕ್ಷಾಂತರ ಜನ ಅದನ್ನು ವೀಕ್ಷಿಸಿದ್ದಾರೆ. ‘ಅರೆ! ಹೌದಾ’ ಎಂದು ಹುಬ್ಬೇರಿಸಿದ್ದಾರೆ.

    ಆ ಮೆಸೇಜ್‌ನಲ್ಲಿರುವ ಬರಹ ಮತ್ತು ವಿಡಿಯೋದಲ್ಲಿರುವ ವಾದ ಎಂಥವರೂ ‘ಸರಿ’ ಎಂದು ತಲೆದೂಗುವಂತಿದೆ. ಕೇಂದ್ರ ಸರ್ಕಾರದ ಪ್ರೆಸ್ ಇನ್‌ಫಾರ್ಮೇಶನ್ ಬ್ಯೂರೊ ಈ ವಿಡಿಯೋ ಕುರಿತು ಫ್ಯಾಕ್ಟ್‌ಚೆಕ್ ಮಾಡಿದೆ. ಅದರ ವಿವರ ಇಲ್ಲಿದೆ.

    ‘‘ಕರೊನಾ ಬಂದರೆ ಆಸ್ಪಿರಿನ್‌ನಂತಹ ಎಲ್ಲರ ಕೈಗೆಟಕುವ ಮಾತ್ರೆಗಳಿಂದಲೇ ಗುಣಪಡಿಸಬಹುದು ಎಂದು ಆ ವೈರಲ್ ವಿಡಿಯೋದಲ್ಲಿ ವಾದಿಸಲಾಗಿದೆ. ಅದರೆ ಅದು ನಿಜವಲ್ಲ, ಕರೊನಾ ಒಂದು ವೈರಸ್. ಅದಕ್ಕೆ ಇನ್ನೂ ನಿರ್ದಿಷ್ಟ ಚಿಕಿತ್ಸೆಯಾಗಲಿ, ಮಾತ್ರೆಯಾಗಲಿ, ಲಸಿಕೆಯಾಗಲಿ ಬಂದಿಲ್ಲ’’ ಎನ್ನುತ್ತದೆ ಫ್ಯಾಕ್ಟ್‌ಚೆಕ್ ತಂಡ.

    ‘‘ಆದರೆ ಕರೊನಾ ಪಾಸಿಟಿವ್ ಆಗಿ ಆಸ್ಪತ್ರೆಗೆ ದಾಖಲಾಗುವ ರೋಗಿಗಳಿಗೆ ಆ್ಯಂಟಿಬಯಾಟಿಕ್ಸ್‌ಗಳನ್ನೇ ವೈದ್ಯರು ನೀಡುತ್ತಿದ್ದಾರೆ. ಯಾಕೆಂದರೆ ಕರೊನಾ ಸೋಂಕಿತ ವ್ಯಕ್ತಿಗಳಿಗೆ ಅದರ ಜತೆಗೇ ಬ್ಯಾಕ್ಟೀರಿಯಲ್ ಇನ್‌ಫೆಕ್ಷನ್ ಕೂಡ ಆಗುವ ಸಾಧ್ಯತೆ ಇರುತ್ತದೆ. ಆ್ಯಂಟಿಬಯಾಟಿಕ್ಸ್ ನೀಡಿ ಆ ಸೈಡ್ ಎಫೆಕ್ಟ್‌ನ ಪರಿಣಾಮವನ್ನು ತಗ್ಗಿಸುವುದು ವೈದ್ಯರ ಪ್ರಯತ್ನವಾಗಿರುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಮಿಥ್ ಬಸ್ಟರ್ಸ್‌ ವಿಭಾಗದಲ್ಲಿಯೂ ಇದನ್ನು ಸ್ಪಷ್ಟಪಡಿಸಲಾಗಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವೆಬ್‌ಸೈಟ್‌ನಲ್ಲಿಯೂ ಈ ಮಾಹಿತಿ ಇದೆ’’ ಎಂಬದು ಪಿಐಬಿ ಫ್ಯಾಕ್ಟ್‌ಚೆಕ್ ತಂಡದ ವಾದ.

    ಮತ್ತೆ ಲಾಕ್‌ಡೌನ್ ಹೇರಿಕೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆಯೇ ಪ್ರಧಾನಿ ಮೋದಿ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts