More

    ಕರೊನಾ ತಡೆಗೆ ಸಹಕರಿಸಿ

    ಮುನವಳ್ಳಿ: ಪಟ್ಟಣದಲ್ಲಿ ಶಾಸಕರ, ಸಂಸದರ ಅನುದಾನ ಹಾಗೂ ಭಕ್ತರ ನೆರವಿನಿಂದ ನಿರ್ಮಾಣವಾದ ಪಾಗಾದ ಶ್ರೀ ಕರೆಮ್ಮದೇವಿ ನೂತನ ದೇವಸ್ಥಾನದ ಸಮುದಾಯ ಭವನದ ಉದ್ಘಾಟನೆ ಹಾಗೂ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವನ್ನು ಬುಧವಾರ ವಿಧಾನಸಭಾ ಉಪಸಭಾಧ್ಯಕ್ಷ ಆನಂದ ಮಾಮನಿ ನೆರವೇರಿಸಿದರು.

    ನಂತರ ಮಾತನಾಡಿದ ಅವರು, ರಾಜ್ಯ ಹಾಗೂ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಕಳೆದ ವರ್ಷ ಸಂಭವಿಸಿದ ಪ್ರವಾಹ ಸೇರಿ ಪ್ರಸಕ್ತ ಕೊರೊನಾ ಹಾವಳಿ ಮಧ್ಯೆಯೂ ಜನರ ಕಷ್ಟಗಳಿಗೆ ಸ್ಪಂದಿಸುತ್ತಿವೆ. ಜನರು ಕೂಡ ಸಹಕರಿಸಬೇಕು ಎಂದರು. ಸೋಮಶೇಖರಮಠದ ಮುರುಘೇಂದ್ರ ಸ್ವಾಮೀಜಿ ಮಾತನಾಡಿ, ದೇವಸ್ಥಾನಗಳು ನಮ್ಮ ಸಂಸ್ಕೃತಿ, ಪರಂಪರೆಯ ಪ್ರತೀಕ. ಹಾಗಾಗಿ ಭಕ್ತಿ ಇರಬೇಕು ಎಂದರು. ಪ್ರಕಾಶ ಮಾನೆ ಅಧ್ಯಕ್ಷತೆ ವಹಿಸಿದ್ದರು. ರಮೇಶ ಗೋಮಾಡಿ, ಸುನೀಲ ಕದಂ, ವಿಜಯ ಅಮಠೆ, ಚಂದ್ರು ಜಂಬ್ರಿ, ಶ್ರೀಕಾಂತ ಮಿರಜಕರ, ಪುರಸಭೆ ಮುಖ್ಯಾಧಿಕಾರಿ ಮಹೇಂದ್ರ ತಿಮ್ಮಾಣಿ, ಅಶೋಕ ಕದಂ, ಸೋಮು ಮುರಗೋಡ, ಬಸವರಾಜ ಪವಾರ, ಭೀಮಣ್ಣ ಹೊನ್ನಳ್ಳಿ, ರಾಜು ಕಿಲ್ಲೇದಾರ, ಹನುಮಂತ ಕದಂ, ಉಪಸ್ಥಿತರಿದ್ದರು. ಸುಧೀರ ವಾಘೇರಿ ಸ್ವಾಗತಿಸಿದರು. ನಾಗಪ್ಪ ಹೊನ್ನಳ್ಳಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts