More

    ವಹಿವಾಟು ಸ್ಥಗಿತದಿಂದ ಅತಂತ್ರರಾದ ರಾಯಚೂರು ಎಪಿಎಂಸಿ ಹಮಾಲರು

    ರಾಯಚೂರು: ಕರೊನಾ ಸೋಂಕು ವ್ಯಾಪಕವಾಗಿ ಹರಡುತ್ತಿರುವುದರಿಂದ ಸ್ಥಳೀಯ ಎಪಿಎಂಸಿಯಲ್ಲಿ ವ್ಯಾಪಾರ, ವಹಿವಾಟು ಸ್ಥಗಿತಗೊಳಿಸಿದ್ದರಿಂದ ಹಮಾಲರು ಶುಕ್ರವಾರ ಕೆಲಸವಿಲ್ಲದೆ ಚೌಕಾಬಾರಾ ಆಟ ಆಡಿದರೆ, ಕೆಲವರು ಪ್ರಾಂಗಣದಲ್ಲಿಯೇ ವಿಶ್ರಾಂತಿಗೆ ಮೊರೆ ಹೋಗಿದ್ದರು.

    ಎಪಿಎಂಸಿಯಲ್ಲಿ ಮಹಿಳೆಯರು ಸೇರಿದಂತೆ 200ಕ್ಕೂ ಹೆಚ್ಚು ಹಮಾಲರು ಕಾರ್ಯನಿರ್ವಹಿಸುತ್ತಿದ್ದು, ನಿತ್ಯ ದುಡಿದ ಹಣದಲ್ಲೇ ಜೀವನ ಸಾಗಿಸುತ್ತಾರೆ. ಅವರ ಕುಟುಂಬಗಳು ಇವರ ನಿತ್ಯದ ದುಡಿಮೆಯ ಮೇಲೆ ಅವಲಂಬಿತವಾಗಿವೆ.

    ವಹಿವಾಟು ಸ್ಥಗಿತಗೊಂಡಿದ್ದರಿಂದ ಹಮಾಲರು ಮನೆಯಲ್ಲಿ ಇರಲು ಆಗದೆ ಸಣ್ಣಪುಟ್ಟ ಕೆಲಸಗಳು ದೊರೆತರೆ ಅಲ್ಪ ಮಟ್ಟಿಗೆ ಹಣ ದೊರೆಯಬಹುದೆಂದು ಕೊಂಡು ಎಪಿಎಂಸಿಗೆ ಆಗಮಿಸಿದ್ದು, ಕೆಲಸವಿಲ್ಲದ ಕಾರಣ ಮಹಿಳೆಯರು ಚೌಕಾಬಾರಾ ಆಟದಲ್ಲಿ ಮಗ್ನರಾಗಿದ್ದರೆ, ಪುರುಷರು ಪ್ರಾಂಗಣದಲ್ಲೇ ನಿದ್ರೆಗೆ ಜಾರಿದ್ದಾರೆ.

    ಕೆಲವು ದಿನಗಳ ಹಿಂದೆ ಬೆಳಗಿನ ಅವಧಿಯಲ್ಲಿ ವಹಿವಾಟಿಗೆ ಅವಕಾಶ ನೀಡಿದ್ದರಿಂದ ಹಮಾಲರಿಗೆ ಅಲ್ಪಮಟ್ಟಿಗೆ ಆರ್ಥಿಕ ಸಹಾಯ ದೊರೆಯುತ್ತಿತ್ತು. ಈಗ ಸಂಪೂರ್ಣ ವಹಿವಾಟು ಸ್ಥಗಿತಗೊಂಡಿರುವುದರಿಂದ ಹಮಾಲರು ಕುಟುಂಬ ನಿರ್ವಹಣೆ ಹೇಗಪ್ಪ ಎನ್ನುವ ಚಿಂತೆಯಲ್ಲಿದ್ದಾರೆ.

    ಕಳೆದ ಲಾಕ್‌ಡೌನ್ ಅವಧಿಯಲ್ಲಿ ಹಮಾಲರಿಗೆ ಎಪಿಎಂಸಿ ಹಾಗೂ ಸಂಘ ಸಂಸ್ಥೆಗಳಿಂದ ನೆರವು ದೊರತಿತ್ತು. ಅಗತ್ಯ ವಸ್ತುಗಳನ್ನು ನೀಡುವ ಮೂಲಕ ಅವರ ಕುಟುಂಬ ನಿರ್ವಹಣೆಗೆ ಅನುಕೂಲ ಕಲ್ಪಿಸಲಾಗಿತ್ತು. ಈಗ ಯಾವುದೇ ನೆರವು ಕೂಡಾ ದೊರೆಯದಿರುವುದರಿಂದ ಹಮಾಲರು ಸಂಕಷ್ಟ ಎದುರಿಸುವಂತಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts