More

    ಸುಪ್ರೀಂ ಕೋರ್ಟ್​ನಲ್ಲಿ ಕರೊನಾ ಅಲೆ! ನ್ಯಾಯಮೂರ್ತಿಗಳಿಗೆ ವರ್ಕ್​ ಫ್ರಂ ಹೋಂ!

    ನವದೆಹಲಿ : ಉಲ್ಬಣಿಸುತ್ತಿರುವ ಕರೊನಾ ಸೋಂಕಿನ ಬಿಸಿ ಇದೀಗ ಸುಪ್ರೀಂ ಕೋರ್ಟ್​​ನಲ್ಲೂ ಆವರಿಸಿದ್ದು, ಪರೀಕ್ಷಿಸಲ್ಪಟ್ಟ ಕೋರ್ಟ್​ ಸಿಬ್ಬಂದಿಯಲ್ಲಿ ಅರ್ಧದಷ್ಟು ಜನರಿಗೆ ಪಾಸಿಟೀವ್ ಬಂದಿದೆ. ಈ ಹಿನ್ನೆಲೆಯಲ್ಲಿ ಇಂದಿನಿಂದ ಕೇಸುಗಳ ವಿಚಾರಣೆಯನ್ನು ನ್ಯಾಯಮೂರ್ತಿಗಳು ಮನೆಯಿಂದಲೇ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಮಾಡಲಿದ್ದಾರೆ ಎನ್ನಲಾಗಿದೆ.

    ಶನಿವಾರದಂದು 90 ಜನ ಕೋರ್ಟ್ ಸಿಬ್ಬಂದಿಗೆ ಕರೊನಾ ಪರೀಕ್ಷೆ ನಡೆಸಲಾಗಿದ್ದು, 44 ಜನಕ್ಕೆ ಸೋಂಕು ದೃಢಪಟ್ಟಿತ್ತು. ಇದರಿಂದ ನ್ಯಾಯಮೂರ್ತಿಗಳು ಆತಂಕಕ್ಕೆ ಒಳಗಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇಂದು ಇಡೀ ನ್ಯಾಯಾಲಯದ ಆವರಣವನ್ನು ಸ್ಯಾನಿಟೈಸ್​ ಮಾಡಲಾಗುತ್ತಿದ್ದು, ವಿಚಾರಣೆಯ ಸಮಯವನ್ನು ಒಂದು ಗಂಟೆಯ ಅವಧಿಗೆ ಮುಂದಕ್ಕೆ ಹಾಕಲಾಗಿದೆ ಎನ್ನಲಾಗಿದೆ.

    ಇದನ್ನೂ ಓದಿ: ಕರೊನಾ ರೋಗಿ ಸತ್ತಿದ್ದಕ್ಕೆ ಕೂಗಾಡಿದ ರಾಜಕಾರಣಿಗಳು… ರಾಜೀನಾಮೆ ಸಲ್ಲಿಸಿದ ವೈದ್ಯರು

    ಸುಪ್ರೀಂ ಕೋರ್ಟ್ ಅಡಿಷನಲ್ ರಿಜಿಸ್ಟ್ರಾರ್​ ಅವರ ಸೂಚನೆ ಮೇರೆಗೆ 10.30 ಕ್ಕೆ ಆರಂಭವಾಗಬೇಕಿದ್ದ ವಿಚಾರಣೆಗಳನ್ನು 11.30 ಕ್ಕೆ ನಿಗದಿಪಡಿಸಲಾಯಿತು. 11 ಗಂಟೆಗೆ ಆರಂಭವಾಗಬೇಕಿದ್ದ ವಿಚಾರಣೆಗಳು 12 ಗಂಟೆಗೆ ಆರಂಭವಾದವು. ದ್ವಿಸದಸ್ಯ ಮತ್ತು ತ್ರಿಸದಸ್ಯ ನ್ಯಾಯಪೀಠಗಳನ್ನು ವಿಡಿಯೋ ಲಿಂಕ್​ಗಳ ಮೂಲಕ ಸಂಯೋಜಿಸಲಾಗುತ್ತಿದೆ ಎನ್ನಲಾಗಿದೆ. (ಏಜೆನ್ಸೀಸ್)

    ಹೀಗೊಂದು ಹ್ಯಾಪಿ ಬರ್ತ್​ ಡೇ… ಬಂಧುಬಳಗಕ್ಕೆ ರಕ್ತದಾನ ಮಾಡಲು ಪ್ರೇರೇಪಿಸಿದ ಬಾಲಕಿ !

    ಕ್ವಾರೆಂಟೈನ್​ನಲ್ಲಿ ತೆಲುಗು ನಟ, ಜನಸೇನಾ ಪಕ್ಷದ ಅಧ್ಯಕ್ಷ ಪವನ್ ಕಲ್ಯಾಣ್​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts