More

    ಹಾನಗಲ್ಲನಲ್ಲಿ ಆಶಾಗಳಿಗೆ ಕಾಡಿದ ಕರೊನಾ

    ಹಾನಗಲ್ಲ: ತಾಲೂಕಿನಲ್ಲಿ ಮಂಗಳವಾರ ಮತ್ತೆ ಮೂವರು ಮಹಿಳೆಯರು, ಇಬ್ಬರು ಪುರುಷರು ಸೇರಿ ಐವರಲ್ಲಿ ಕರೊನಾ ಸೋಂಕು ದೃಢಪಟ್ಟಿದ್ದು, ಒಟ್ಟು ಸೋಂಕಿತರ ಸಂಖ್ಯೆ 11ಕ್ಕೇರಿದೆ.

    ಕಳೆದ ನಾಲ್ಕು ದಿನಗಳ ಹಿಂದಷ್ಟೇ ಕುಂಟನಹೊಸಳ್ಳಿ, ಶಿವಪುರ, ಚಿಕ್ಕೇರಿಹೊಸಳ್ಳಿಯಲ್ಲಿ ಸೋಂಕಿತರು ಪತ್ತೆಯಾಗಿದ್ದರು. ಅದರ ಮರುದಿನವೇ ಇಬ್ಬರು ಆಶಾ ಕಾರ್ಯಕರ್ತೆಯರೂ ಸೇರಿ ಮೂವರಲ್ಲಿ ಸೋಂಕು ಕಾಣಿಸಿತ್ತು. ಮತ್ತೆ ಎರಡೇ ದಿನದಲ್ಲಿ ಐವರಲ್ಲಿ ಸೋಂಕು ಕಂಡುಬಂದಿದೆ.

    ಮಂಗಳವಾರ ಪಾಸಿಟಿವ್ ಬಂದ್ ಆಶಾ ಕಾರ್ಯಕರ್ತೆ, ಎರಡು ದಿನದ ಹಿಂದೆ ಪಟ್ಟಣದ ಕಲ್ಲಹಕ್ಕಲ ಬಡಾವಣೆಯ ಆಶಾ ಕಾರ್ಯಕರ್ತೆಯರಲ್ಲಿ ಸೋಂಕು ಕಾಣಿಸಿಕೊಂಡಿದ್ದರಿಂದ ತನ್ನ ಸಂಬಂಧಿಕರ ಮನೆಗೆ ತೆರಳಿ 3 ದಿನ ಉಳಿದಿದ್ದರು. ಈ ಸಂದರ್ಭದಲ್ಲೇ ಸೋಂಕು ಪತ್ತೆಯಾಗಿದೆ. ಈ ಮಹಿಳೆಯ ಪ್ರಾಥಮಿಕ ಸಂಪರ್ಕದಲ್ಲಿದ್ದ ಪತಿ, ಇಬ್ಬರು ಮಕ್ಕಳು ಸೇರಿ ಒಟ್ಟು 8 ಜನರನ್ನು ಕ್ವಾರಂಟೈನ್​ಗೆ ಒಳಪಡಿಸಲಾಗಿದೆ. ಸೀಲ್​ಡೌನ್ ಪ್ರದೇಶ ಮತ್ತಷ್ಟು ವಿಸ್ತರಿಸಲಾಗಿದೆ.

    ಪಟ್ಟಣದ ರಾಘವೇಂದ್ರ ಸ್ವಾಮಿ ಮಠದ ಸಮೀಪದ 62 ವರ್ಷದ ಮಹಿಳೆ, 70 ವರ್ಷದ ಪುರುಷ ವೃದ್ಧ ದಂಪತಿಯಲ್ಲಿ ಸೋಂಕು ಪತ್ತೆಯಾಗಿದೆ. ಇವರಿಬ್ಬರಿಗೂ ನಾಲ್ಕಾರು ದಿನಗಳಿಂದ ಸೋಂಕಿನ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ ಶನಿವಾರ ಹುಬ್ಬಳ್ಳಿಗೆ ತೆರಳಿ ಕಿಮ್ಸ್​ನಲ್ಲಿ ತಪಾಸಣೆಗೊಳಪಡಿಸಿದಾಗ ಸೋಂಕು ದೃಢಪಟ್ಟಿದೆ. ಸೋಂಕಿತ ವೃದ್ಧೆ ಹಾನಗಲ್ಲಿನ ಮನೆಯ ಸುತ್ತಲೂ ಸಂಚರಿಸಿದ ವಾಣಿಜ್ಯ ಮಳಿಗೆಗಳು ಹಾಗೂ ಪರಿಸರ ಸೀಲ್​ಡೌನ್ ಮಾಡಲಾಗಿದೆ.

    ಮಹಾರಾಷ್ಟ್ರದ ಕೊಲ್ಲಾಪುರದಿಂದ ಆಗಮಿಸಿದ್ದ ತಾಲೂಕಿನ ತಿಳವಳ್ಳಿ ಗ್ರಾಮದ ಒಂದೇ ಕುಟುಂಬದ ನಾಲ್ವರು ಪುರುಷರಲ್ಲಿ ಓರ್ವ ವ್ಯಕ್ತಿಯಲ್ಲಿ ಸೋಂಕು ಪತ್ತೆಯಾಗಿದ್ದು, ಇನ್ನುಳಿದ ಮೂವರನ್ನೂ ತಪಾಸಣೆಗೊಳಪಡಿಸಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts