More

    ಎನ್ನೆಸ್ಸೆಸ್ ಸಕಾರಾತ್ಮಕ ವ್ಯಕ್ತಿತ್ವ ರೂಪಿಸುವ ವೇದಿಕೆ

    ಸಿಂಧನೂರು: ಯುವಜನರಲ್ಲಿ ಎನ್ಎಸ್ ಎಸ್ ಸಕಾರಾತ್ಮಕ ವ್ಯಕ್ತಿತ್ವ ರೂಪಿಸುತ್ತದೆ. ಉತ್ತಮ ಪ್ರಜೆಗಳನ್ನಾಗಿಸುವಲ್ಲಿ ಹೆಚ್ಚಿನ ಸಹಕಾರಿಯಾಗಿದ್ದು. ಇಂಥ ಭಾವೈಕ್ಯತಾ ಶಿಬಿರಗಳು ನಡೆಯುತ್ತಿರುವುದು ಒಳ್ಳೆಯ ಬೆಳವಣಿಗೆ ಎಂದು ಮಾಜಿ ಶಾಸಕ ವೆಂಕಟರಾವ ನಾಡಗೌಡ ಹೇಳಿದರು.

    ಇದನ್ನೂ ಓದಿ: ಸಕಾರಾತ್ಮಕ ಮನೋಭಾವ ಬೆಳೆಸಿಕೊಳ್ಳಿ

    ತಾಲೂಕಿನ ಭೂತಲದಿನ್ನಿ ಗ್ರಾಮದ ಶ್ರೀ ಹಳ್ಳಿ ಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಆಯೋಜಿಸಿದ್ದ ರಾಯಚೂರು ವಿಶ್ವವಿದ್ಯಾಲಯ, ಶ್ರೀ ಶಂಕರ್ ಟ್ರಸ್ಟ್ ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಶಿಬಿರದ ಸಮಾರೋಪದಲ್ಲಿ ಮಾತನಾಡಿದರು.

    ಇಂದಿನ ದಿನಮಾನಗಳಲ್ಲಿ ಮಾನವೀಯ ಮೌಲ್ಯಗಳು ಮರೆಯಾಗುತ್ತಿವೆ. ದೇಶದ ಅಭಿವೃದ್ಧಿಗೆ ಧಕ್ಕೆಯಾಗುತ್ತಿದ್ದು. ಈ ಹಿನ್ನೆಲೆಯಲ್ಲಿ ಮನಸ್ಸುಗಳನ್ನು ಬೆಸೆತು ತಾರತಮ್ಯವನ್ನು ದೂರ ಮಾಡುತ್ತೆ ಎಂದು ಭಾವಿಸಿರುವೆ.

    ಗ್ರಾಮೀಣ ಜನರ ಬದುಕಿನ ಮೌಲ್ಯ, ಅಲ್ಲಿನ ವೈವಿಧ್ಯತೆಗಳನ್ನು ಶಿಬಿರಾರ್ಥಿಗಳಿಗೆ ಪರಿಚಯವಾಗುತ್ತೆ. ಶಿಬಿರದಲ್ಲಿ ನೀರಿನ ಮಿತ ಹಾಗೂ ಸದ್ಬಳಕೆ ಬಗ್ಗೆ ಅರಿವು ಮೂಡಿಸುವುದರ ಜತೆಗೆ ಉಪನ್ಯಾಸ ಇರಬೇಕು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts