More

    ದೌರ್ಬಲ್ಯ ಶಕ್ತಿಯಾಗಿ ಪರಿವರ್ತನೆಯಾಗಲಿ

    ಹುಣಸೂರು: ನಿಮ್ಮ ವ್ಯಕ್ತಿತ್ವದಲ್ಲಿನ ದೌರ್ಬಲ್ಯಗಳನ್ನು ಸಕಾರಾತ್ಮಕವಾಗಿ ಪರಿವರ್ತಿಸಿಕೊಳ್ಳುವ ಮೂಲಕ ಮುಖ್ಯವಾಹಿನಿಯಲ್ಲಿ ನಿಮ್ಮನ್ನು ಗುರುತಿಸಿಕೊಂಡು ಪ್ರಾಬಲ್ಯ ಮೆರೆಯಿರಿ ಎಂದು ಕಾಲೇಜು ಶಿಕ್ಷಣ ಇಲಾಖೆಯ ನಿರ್ದೇಶಕ ಅಪ್ಪಾಜಿಗೌಡ ವಿದ್ಯಾರ್ಥಿನಿಯರಿಗೆ ಸಲಹೆ ನೀಡಿದರು.


    ನಗರದ ಮಹಿಳಾ ಸರ್ಕಾರಿ ಕಾಲೇಜಿನಲ್ಲಿ ಅಂತಿಮ ವರ್ಷದ ವಿದ್ಯಾರ್ಥಿನಿಯರಿಗೆ ಆಯೋಜಿಸಿದ್ದ ಅನುಜ್ಞಾ -2023 ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು. ಮಹಿಳಾ ಸಬಲೀಕರಣ ಇಂದಿನ ಅಗತ್ಯವಾಗಿದೆ. ಕಾಲೇಜು ಶಿಕ್ಷಣದ ಒಂದು ಹಂತವನ್ನು ಪೂರ್ಣಗೊಳಿಸಿಕೊಂಡಿದ್ದೀರಿ. ಇದೀಗ ಮುಂದಿನ ಶಿಕ್ಷಣದೊಂದಿಗೆ ನಿಮ್ಮನ್ನು ನೀವು ಸಮಾಜದಲ್ಲಿ ಗುರುತಿಸಿಕೊಳ್ಳುವ ಜವಾಬ್ದಾರಿಯನ್ನು ಹೊಂದಿದ್ದೀರಿ. ನಿಮ್ಮಲ್ಲಿನ ದೌರ್ಬಲ್ಯಗಳನ್ನು ನೀವು ಗುರುತಿಸಿಕೊಂಡು ಅದನ್ನು ಶಕ್ತಿಯನ್ನಾಗಿ ಪರಿವರ್ತಿಸಿಕೊಳ್ಳಿ. ಆಂಗ್ಲಭಾಷೆ ಮೇಲೆ ಹಿಡಿತ ಸಾಧಿಸಿ. ಮೊಬೈಲ್ ಬಳಕೆ ಸಕಾರಣ ಮತ್ತು ಅವಶ್ಯಕತೆಯ ಸಾಧನವಾಗಲಿ. ಮೊಬೈಲ್‌ನ ಮಾಹಿತಿ ನಿಮ್ಮ ಜ್ಞಾನಬುತ್ತಿಯಾಗಿ ಪರಿವರ್ತಿತವಾಗಲಿ. ನಮ್ಮ ಹೆಣ್ಣುಮಕ್ಕಳಲ್ಲಿ ಸಾಮರ್ಥ್ಯವಿದ್ದು, ಅದನ್ನು ಹೊರತರಲು ಅಗತ್ಯ ವೇದಿಕೆಯನ್ನು ನಾವು ಒದಗಿಸಬೇಕಿದೆ ಎಂದರು.
    ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಪುಟ್ಟಶೆಟ್ಟಿ ವಿದ್ಯಾರ್ಥಿನಿಯರಿಗೆ ಶುಭ ಹಾರೈಸಿದರು. ಸಿಡಿಸಿ ಸದಸ್ಯ ಶಿವಕುಮಾರ್.ವಿ.ರಾವ್ ಮಾತನಾಡಿದರು. ಇದೇ ವೇಳೆ ವಿದ್ಯಾರ್ಥಿನಿಯರಿಗೆ ನೆನಪಿನ ಕಾಣಿಕೆ ವಿತರಿಸಿ ಶುಭ ಕೋರಲಾಯಿತು. ವಿದ್ಯಾರ್ಥಿನಿಯರು ತಮ್ಮ ಅನುಭವ ಹಂಚಿಕೊಂಡರು.


    ನಗರದ ಡಿ.ದೇವರಾಜ ಅರಸು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ವೆಂಕಟೇಶಯ್ಯ, ಪ್ರಾಧ್ಯಾಪಕರಾದ ಡಾ.ಟಿ.ಕೆ.ಬೋಪಯ್ಯ, ಡಾ.ದೀಪುಕುಮಾರ್, ಡಾ.ಪ್ರತಿಭಾ ಜೆನ್ನಿಫರ್ ಅಂದ್ರಾದೆ, ಡಾ.ನಂಜುಂಡಸ್ವಾಮಿ, ಎಚ್.ಬಿ.ರಜಿಯಾ ಸುಲ್ತಾನ, ಡಾ.ಆರ್.ಶ್ರೀನಿವಾಸ್, ಡಾ.ಪ್ರಸನ್ನಕುಮಾರ್ ಹಾಗೂ ವಿದ್ಯಾರ್ಥಿನಿಯರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts