More

    ಇಲ್ನೋಡಿ, ಒಂದೇ ಕುಟುಂಬದ 15 ಜನರಿಗೂ ವಕ್ಕರಿಸಿದೆ ಕರೊನಾ ಹೆಮ್ಮಾರಿ!

    ಯಾದಗಿರಿ: ಕರೊನಾ​ ಸೋಂಕು ದಿನೇದಿನೆ ತನ್ನ ಜಾಲವನ್ನು ಯಾವ ಮಟ್ಟಿಗೆ ವಿಸ್ತರಿಸಿಕೊಳ್ಳುತ್ತಿದೆ ಎಂದರೆ ಇಡೀ ಕುಟುಂಬವೇ ಸೋಂಕಿನಿಂದ ಬಳಲುವಂತೆ. ಹೌದು, ಇದಕ್ಕೊಂದು ಉದಾಹರಣೆ ಇತ್ತೀಚೆಗೆ ಬಿಡುಗಡೆಯಾದ ಕರೊನಾ ಹೆಲ್ತ್ ಬುಲೆಟಿನ್​.

    ಹೌದು, ಶನಿವಾರ ಯಾದಗಿರಿ ಜಿಲ್ಲೆಯಲ್ಲಿ ಒಟ್ಟು 103 ಕರೊನಾ ಪಾಸಿಟಿವ್​ ಪ್ರಕರಣಗಳು ದೃಢಪಟ್ಟಿತ್ತು. ಆ ಪೈಕಿ ಇಲ್ಲಿನ ತಪ್ಪಡಗೇರಾ ಬಡಾವಣೆಯಲ್ಲಿ ಒಂದೇ ಮನೆಯ 15 ಮಂದಿಗೆ ಸೋಂಕು ತಗುಲಿದೆ! ಇದರಲ್ಲಿ ಹತ್ತು ವರ್ಷದೊಳಗಿನ 6 ಮಕ್ಕಳು, ಇಬ್ಬರು ಪುರುಷರು, 7 ಮಹಿಳೆಯರಿದ್ದಾರೆ. ಇವರೆಲ್ಲರೂ ಇಡೀ ಏರಿಯಾವನ್ನು ಸುತ್ತಾಡಿದ್ದು, ಸ್ಥಳೀಯರಲ್ಲಿ ಆತಂಕ ಮನೆ ಮಾಡಿದೆ.

    ಇದನ್ನೂ ಓದಿರಿ ರಕ್ತಸ್ರಾವದಿಂದ ಕರೊನಾ ಸೋಂಕಿತ ಗರ್ಭಿಣಿ ನರಳಾಡಿದರೂ ಚಿಕಿತ್ಸೆ ವಿಳಂಬ… ಮಗು ಬದುಕಲಿಲ್ಲ!

    ಕರೊನಾ ಸೋಂಕಿಗೆ ಒಳಗಾದ ಒಂದೇ ಮನೆಯ 15 ಮಂದಿ ಇತ್ತೀಚೆಗಷ್ಟೆ ಮುಂಬೈನಿಂದ ರಾಜ್ಯಕ್ಕೆ ಬಂದಿದ್ದರು. ಆಗ 17 ದಿನದ ಕ್ವಾರಂಟೈನ್​ಗೆ ಒಳಪಟ್ಟಿದ್ದರು. ಆ ವೇಳೆ ನಡೆಸಿದ ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ವರದಿ ನೆಗೆಟಿವ್​ ಬಂದಿತ್ತು. ಬಳಿಕ ಇವರನ್ನು ಮನೆಗೆ ಕಳಿಸಲಾಗಿತ್ತು. ಮತ್ತೊಮ್ಮೆ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಇಡೀ ಕುಟುಂಬಕ್ಕೆ ಸೋಂಕು ಇರುವುದು ದೃಢಪಟ್ಟಿದೆ.

    ‘ತೊಗಲಾಗಿನ ಬಲ್ಲ ತಿಮ್ಮಣ್ಣ’ ಅಂತೆ ಡಿಸಿಎಂ ಕಾರಜೋಳ! ಉದ್ಯೋಗದ ಬಗ್ಗೆ ಏನೂ ಗೊತ್ತಿಲ್ಲ…

    ಇದೀಗ ತಪ್ಪಡಗೇರಾ ಬಡಾವಣೆಯನ್ನು ಸ್ಥಳೀಯರ ವಿರೋಧದ ನಡುವೆಯೂ ಜಿಲ್ಲಾಡಳಿತ ಸೀಲ್​ಡೌನ್ ಮಾಡಿದೆ. ಬಡಾವಣೆಯಲ್ಲಿ ಬಹುತೇಕ ಕುಟುಂಬಗಳು ಕೃಷಿಕರು, ಕೂಲಿಗಾರರು ಇದ್ದಾರೆ. ಬಿತ್ತನೆ ಕಾರ್ಯಕ್ಕೆ ಸಿದ್ಧತೆಯಲ್ಲಿದ್ದ ಜನರು ಏರಿಯಾ ಸೀಲ್​ಡೌನ್ ಮಾಡಿದರೆ ಕೆಲಸಕ್ಕೆ ತೊಂದರೆ ಆಗಲಿದೆ. ಮುಂದೆ ನಮ್ಮ ಹೊಟ್ಟೆಪಾಡಿನ ಗತಿಯೇನು? ಎಂದು ವಿರೋಧಿಸಿದರು. ಕೊನೆಗೂ ಸೀಲ್​ಡೌನ್​ ಮಾಡುವಲ್ಲಿ ಜಿಲ್ಲಾಡಳಿತ ಯಶಸ್ವಿಯಾಗಿದೆ.

    ಇದನ್ನೂ ಓದಿರಿ ಸೆಸ್ಕ್ ಸಿಬ್ಬಂದಿ ಹೀಗಾ ಮಾಡೋದು? ಕೆಲಸ ಮಾಡುವಲ್ಲೇ ಆತ ಹೆಣವಾದ…

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts