More

    ಕರೊನಾ ಸೇನಾನಿಗಳಿಗೆ ಕೊಡೆ ವಿತರಣೆ

    ಚಿಕ್ಕೋಡಿ: ಲೋಕಸಭಾ ವ್ಯಾಪ್ತಿಯಲ್ಲಿ ಕರೊನಾ ವೈರಸ್ ನಿಯಂತ್ರಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸೂಪರ್‌ವೈಸರ್‌ಗಳಿಗೆ ಜೊಲ್ಲೆ ಉದ್ಯೋಗ ಸಮೂಹದಿಂದ 7 ಸಾವಿರ ಕೊಡೆ ವಿತರಿಸಲಾಗುತ್ತಿದೆ ಎಂದು ಸಂಸದ ಅಣ್ಣಾಸಾಹೇಬ ಜೊಲ್ಲೆ ಹೇಳಿದ್ದಾರೆ.

    ಪಟ್ಟಣದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಕೊಡೆ ವಿತರಿಸಿ ಮಾತನಾಡಿದ ಅವರು, ಕರೊನಾ ವೈರಸ್ ನಿಯಂತ್ರಿಸುವ ನಿಟ್ಟಿನಲ್ಲಿ ಕರೊನಾ ಸೇನಾನಿಗಳು ಮಾಡುತ್ತಿರುವ ಕಾರ್ಯ ಶ್ಲಾಘನೀಯ. ಅವರಿಗೆ ಜನರು ಸಹಕರಿಸಬೇಕು ಎಂದರು.
    ಉಪವಿಭಾಗಾಧಿಕಾರಿ ರವೀಂದ್ರ ಕರಲಿಂಗನವರ ಮಾತನಾಡಿ, ಚಿಕ್ಕ ಮಕ್ಕಳಲ್ಲೂ ಕರೊನಾ ನಿಯಂತ್ರಣಕ್ಕಾಗಿ ಅವರಿಗೆ ಪೌಷ್ಟಿಕ ಆಹಾರಯುಕ್ತ ಪೌಡರ್ ಹಾಗೂ ಕರೊನಾ ಸೇನಾನಿಗಳಿಗೆ ಬಿಸಿಲಿನ ತಾಪದಿಂದ ಪಾರಾಗಲು ಕೊಡೆ ನೀಡಿರುವುದು ಮಾದರಿ ಕೆಲಸವಾಗಿದೆ ಎಂದರು.

    ರಾಜ್ಯ ಸೌಹಾರ್ದ ಸಹಕಾರಿ ಉಪಾಧ್ಯಕ್ಷ ಜಗದೀಶ ಕವಟಗಿಮಠ, ತಹಸೀಲ್ದಾರ್ ಸುಭಾಷ ಸಂಪಗಾವಿ, ಸಿಪಿಐ ಅರ್.ಆರ್.ಪಾಟೀಲ, ಜಯಾನಂದ ಜಾಧವ, ಸಿದ್ರಾಮ ಗಡದೆ, ಸಂಜು ಅರಗೆ, ಮಹೀಂದ್ರಾ ಕಂಪನಿಯ ಸಿದ್ಧಾರ್ಥ, ಸಂಜಯ ಅಡಕೆ ಇದ್ದರು. ಬಸವಪ್ರಸಾದ ಜೊಲ್ಲೆ ಸ್ವಾಗತಿಸಿದರು. ಬಸವರಾಜ ವರವಟ್ಟಿ ನಿರೂಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts