More

    ಕರೊನಾ ಎಫೆಕ್ಟ್​ ಪರಿಣಾಮ ತಲೆಕೆಳಗಾದ ಲೆಕ್ಕಾಚಾರ!: ಯಾವ ಚಿತ್ರ ಯಾವಾಗ ಬಿಡುಗಡೆಯೋ ಗೊತ್ತಿಲ್ಲ

    ಬೆಂಗಳೂರು: ಈ ವರ್ಷ ಪ್ರಾರಂಭವಾದಾಗ ಕನ್ನಡ ಚಿತ್ರರಂಗ ಮತ್ತು ಕನ್ನಡ ಸಿನಿಮಾ ಪ್ರೇಕ್ಷಕರಲ್ಲಿ ಸಾಕಷ್ಟು ಕುತೂಹಲ ಮತ್ತು ನಿರೀಕ್ಷೆ ಇತ್ತು. ಕಾರಣ, ಈ ವರ್ಷ ಹಲವು ನಿರೀಕ್ಷಿತ ಚಿತ್ರಗಳು ಬಿಡುಗಡೆಯಾಗುವುದರಲ್ಲಿದ್ದವು. ಅದರಲ್ಲೂ ಮೊದಲ ಆರು ತಿಂಗಳ ಕಾಲ ಹಲವು ಚಿತ್ರಗಳು ಲೈನ್‌ಅಪ್ ಆಗಿದ್ದವು. ಕರೊನಾ ಎಫೆಕ್ಟ್‌ನಿಂದಾಗಿ ಅವೆಲ್ಲಾ ಮುಂದಕ್ಕೆ ಹೋಗಿವೆ.

    ಪ್ರಮುಖವಾಗಿ ಯುಗಾದಿ ಹಬ್ಬಕ್ಕೆ ‘ದುನಿಯಾ’ ವಿಜಯ್ ಅಭಿನಯದ ಮತ್ತು ನಿರ್ದೇಶನದ ‘ಸಲಗ’ ಚಿತ್ರ ಬಿಡುಗಡೆ ಎಂದು ಹೇಳಲಾಗಿತ್ತು. ಆ ನಂತರ ಏಪ್ರಿಲ್ 9ಕ್ಕೆ ದರ್ಶನ್ ಅಭಿನಯದ ‘ರಾಬರ್ಟ್’ ಬಿಡುಗಡೆಯಾಗಬೇಕಿತ್ತು. ಅಲ್ಲಿಂದ ಮುಂದಿನ ವಾರಗಳಲ್ಲಿ ಪುನೀತ್ ರಾಜಕುಮಾರ್ ಅಭಿನಯದ ‘ಯುವರತ್ನ’, ಸುದೀಪ್ ಅಭಿನಯದ ‘ಕೋಟಿಗೊಬ್ಬ 3’, ಧ್ರುವ ಸರ್ಜಾ ಅಭಿನಯದ ‘ಪೊಗರು’, ಶರಣ್ ಅಭಿನಯದ ‘ಅವತಾರ್ ಪುರುಷ’, ರಮೇಶ್ ಅರವಿಂದ್ ಅಭಿನಯದ ‘100’, ಪ್ರೇಮ್ ಅಭಿನಯದ ‘ಪ್ರೇಮಂ ಪೂಜ್ಯಂ’, ಪ್ರಜ್ವಲ್ ಅಭಿನಯದ ‘ಇನ್‌ಸ್ಪೆಕ್ಟರ್ ವಿಕ್ರಂ’, ರಾಜ್ ಬಿ ಶೆಟ್ಟಿ ಅಭಿನಯದ ‘ಗರುಡ ಗಮನ ರಿಷಭ ವಾಹನ’ ಹೀಗೆ ಹಲವು ಸಿನಿಮಾಗಳು ಬಿಡುಗಡೆಯಾಗುವ ಸೂಚನೆ ನೀಡಿದ್ದವು.

    ಆದರೆ, ಕರೊನಾ ಎಫೆಕ್ಟ್‌ನಿಂದಾಗಿ ಎಲ್ಲಾ ಲೆಕ್ಕಾಚಾರಗಳು ತಲೆ ಕೆಳಗಾಗಿವೆ. ಪ್ರಮುಖವಾಗಿ ಭಾರತ ಸರ್ಕಾರವು ಮಾರ್ಚ್ 25ರಿಂದ ಏಪ್ರಿಲ್ 14ರವರೆಗೆ 21 ದಿನಗಳ ಲಾಕ್‌ಡೌನ್ ೋಷಿಸಿದೆ. ಈ ಸಂದರ್ಭದಲ್ಲಿ ಚಿತ್ರ ಪ್ರದರ್ಶನ, ಬಿಡುಗಡೆ, ಚಿತ್ರೀಕರಣ ಯಾವುದೂ ಸಾಧ್ಯವಿಲ್ಲ. ಆ ನಂತರ ಪರಿಸ್ಥಿತಿ ಸರಿಹೋಗಬಹುದು ಎಂಬ ನಂಬಿಕೆ ಸದ್ಯಕ್ಕೆ ಯಾರಲ್ಲೂ ಇಲ್ಲ. ಈ ಕರ್ಫ್ಯೂ ಇನ್ನಷ್ಟು ದಿನಗಳ ಕಾಲ ಮುಂದುವರೆದರೆ ಅದರಲ್ಲಿ ಆಶ್ಚರ್ಯವಿಲ್ಲ. ಹಾಗಾಗಿ ಬಿಡುಗಡೆಯಾಗಬೇಕಿದ್ದ ನಿರೀಕ್ಷಿತ ಸಿನಿಮಾಗಳೆಲ್ಲಾ ಅನಿರ‌್ಷ್ಟಾವ ಮುಂದಕ್ಕೆ ಹೋಗಿವೆ. ಈ ಪೈಕಿ ಕೆಲವು ಚಿತ್ರಗಳು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದ್ದರೆ, ಇನ್ನೂ ಕೆಲವು ಸಿನಿಮಾಗಳ ಕೊನೆಯ ಹಂತದ ಚಿತ್ರೀಕರಣ ಮುಗಿಯಬೇಕಿದೆ. ಲಾಕ್‌ಡೌನ್ ಮುಗಿದ ನಂತರವಷ್ಟೇ ಎಲ್ಲಾ ಕೆಲಸಗಳು ಪ್ರಾರಂಭವಾಗಲಿವೆ.
    ಒಮ್ಮೆ ಕೆಲಸಗಳು ಪ್ರಾರಂಭವಾದ ನಂತರವಷ್ಟೇ, ಯಾವ ಸಿನಿಮಾಗಳು ಯಾವಾಗ ಬರುತ್ತವೆ ಎಂಬುದು ಸ್ಪಷ್ಟವಾಗಲಿದೆ. ಅಲ್ಲಿಯವರೆಗೂ ಪ್ರೇಕ್ಷಕರು ಕಾಯದೇ ಬೇರೆ ದಾರಿ ಇಲ್ಲ.

    ಸಾಯಲಿ ಕರೊನಾ; ಸ್ವಲ್ಪ ಹೊತ್ತು ನಗೋಣ: ಫೇಸ್‍ಬುಕ್ ಲೈವ್‍ನಲ್ಲಿ ನಗಿಸಿದ ಗುರುಪ್ರಸಾದ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts