More

    ಹಸಿದವರ ಹೊಟ್ಟೆ ತುಂಬಿಸಲು ತುರ್ತುಕಾರ್ಯಕ್ರಮ ಘೋಷಣೆಗೆ ಆಗ್ರಹಿಸಿದ ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರಿಂದ ಮುಖ್ಯಮಂತ್ರಿ ಅವರಿಗೆ ಬಹಿರಂಗ ಪತ್ರ: ಬರೆದವರಾರು ಇಲ್ಲಿದೆ ವಿವರ…

    ಬೆಂಗಳೂರು: ಕರೊನಾ ಸೋಂಕಿನ ಕಾರಣಕ್ಕೆ ಲಾಕ್​ಡೌನ್ ಆಗಿದ್ದು, ಇಂದಿರಾ ಕ್ಯಾಂಟೀನ್ ಮೂಲಕ ವಿತರಿಸುತ್ತಿದ್ದ ಉಚಿತ ಊಟದ ತೀರ್ಮಾನವನ್ನು ಸರ್ಕಾರ ಹಿಂಪಡೆದುದು ಸರಿಯಲ್ಲ ಎಂದು ಸಾಮಾಜಿಕ ಕಾರ್ಯಕರ್ತರು, ಹೋರಾಟಗಾರರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಸರ್ಕಾರ ಈ ಕೂಡಲೇ ಹಸಿದ ಜನರ ಹೊಟ್ಟೆ ತುಂಬಿಸಲು ಕೆಲವು ತುರ್ತುಕಾರ್ಯಕ್ರಮಗಳನ್ನು ಜಾರಿಗೊಳಿಸುವಂತೆಯೂ ಅವರು ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರಬರೆದು ಆಗ್ರಹಿಸಿದ್ದಾರೆ.

    ಕೇರಳ ಸರ್ಕಾರ ಘೋಷಿಸಿರುವ ಮಾದರಿಯಲ್ಲೇ ಬಡವರಿಗೆ ಅನುಕೂಲವಾಗುವಂತೆ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿರುವ ಹೋರಾಟಗಾರರು, ಸಾಮಾಜಿಕ ಕಾರ್ಯಕರ್ತರ ಬಳಗ ಆರು ಅಂಶಗಳ ಹಕ್ಕೊತ್ತಾಯವನ್ನೂ ಇದರ ಜತೆಗೆ ಮಂಡಿಸಿದೆ. ಈ ಬಹಿರಂಗ ಪತ್ರದ ಯಥಾವತ್ ಬರೆಹ ಈ ಕೆಳಗಿನಂತೆ ಇದೆ –

    ದಿನಾಂಕ :25-03-2020
    ಇವರಿಗೆ,
    ಶ್ರೀ ಯಡಿಯೂರಪ್ಪನವರು
    ಮಾನ್ಯ ಮುಖ್ಯಮಂತ್ರಿಗಳು
    ಕರ್ನಾಟಕ ಸರ್ಕಾರ, ವಿಧಾನಸೌಧ, ಬೆಂಗಳೂರು.

    ಒಂದು ಬಹಿರಂಗ ಪತ್ರ
    ಮಾನ್ಯರೇ.
    ವಿಷಯ: ಹಸಿದ ಜನರ ಹೊಟ್ಟೆ ತುಂಬಿಸಲು ಈ ಕೆಳಕಂಡ ತುರ್ತು ಕಾರ್ಯಕ್ರಮಗಳಿಗಾಗಿ ಆಗ್ರಹಿಸಿ

    ರಾಜ್ಯದ ಹಿರಿಯ ಚಿಂತಕರು, ಬರಹಗಾರರು, ಕಲಾವಿದರು, ರಂಗಕರ್ಮಿಗಳು, ಹಿರಿಯ ಪತ್ರಕರ್ತರು, ವಕೀಲರು, ಅದ್ಯಾಪಕರು, ಕಾರ್ಮಿಕ, ರೈತ ಸಂಘಗಳ ಧುರೀಣರು, ಸಾಮಾಜಿಕ ಕಾರ್ಯಕರ್ತರು, ಮಹಿಳಾ, ವಿದ್ಯಾರ್ಥಿ – ಯುವಜನ ಮುಖಂಡರುಗಳು ಸಹಮತದಿಂದ ರೂಪಿಸಿ ಸಲ್ಲಿಸಲಾಗುತ್ತಿರುವ ಮನವಿ.

    ಮಾನ್ಯ ಯಡಿಯೂರಪ್ಪನವರೇ ಇಂದಿರಾ ಕ್ಯಾಂಟೀನ್ ಮೂಲಕ ಬಡವರಿಗೆ ಊಟ ಕೊಡಲು ನಿನ್ನೆ ತಮ್ಮ ಸರಕಾರ ತೀರ್ಮಾನಿಸಿದ್ದ ನಿರ್ಧಾರವನ್ನು ವಾಪಸ್ ಪಡೆದಿರುವುದಾಗಿ ಇಂದು ಮಾಧ್ಯಮಗಳಲ್ಲಿ ಪ್ರಕಟಗೊಂಡಿದೆ. ರಾಜ್ಯದ ಜನರ ಜೀವನ ಮತ್ತು ಅಭಿವೃದ್ಧಿ ದೃಷ್ಟಿಯಿಂದಲೂ ನಿಮ್ಮ ನಿರ್ಧಾರ ಸರಿಯಲ್ಲ ಎನ್ನುವುದು ನಮ್ಮ ಭಾವನೆ.
    ರಾಜ್ಯದಲ್ಲಿ ಗ್ರಾಮೀಣ ಪ್ರದೇಶದ ಕೃಷಿಕೂಲಿಕಾರರು ಸೇರಿ 3 ಕೋಟಿ ಕಾರ್ಮಿಕರು ಅಸಂಘಟಿತ ವಲಯದಲ್ಲಿ ದುಡಿಯುತ್ತಿದ್ದಾರೆ. ಅದರಲ್ಲಿ ಬಹುಮುಖ್ಯವಾಗಿ ಕಟ್ಟಡ ನಿರ್ಮಾಣ ವಲಯ, ಎಪಿಎಂಸಿ ಮಾರುಕಟ್ಟೆ ಸೇರಿ ವಿವಿಧ ನಗರ ಪ್ರದೇಶಗಳಲ್ಲಿ ಹಮಾಲಿ ಕಾರ್ಮಿಕರು ಆಟೋ, ಟ್ಯಾಕ್ಸಿ, ಬೀದಿ ಬದಿ, ಮನೆಕೆಲಸ, ಬೀಡಿ, ಅಗರ ಬತ್ತಿ, ಅಂಗನವಾಡಿ, ಆಶಾ, ಬಿಸಿಯೂಟ ಹಾಗೂ ವಿವಿಧ ಸರಕಾರ ಹಾಗೂ ಖಾಸಗಿ ವಲಯದ ಹತ್ತಾರು ವಿಭಾಗಗಲ್ಲಿ ಈ ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ.

    ಇದ್ದಕ್ಕಿದ್ದಂತೆ ದಾಳಿ ನಡೆಸಿರುವ ಕರೋನಾ ವೈರಸ್ ಈ ಕೋಟ್ಯಾಂತರ ಶ್ರಮಜೀವಿಗಳ ಉದ್ಯೋಗ ಮತ್ತು ಅನ್ನ ಎರಡನ್ನೂ ಕಸಿದುಕೊಂಡಿರುವ ಬಗ್ಗೆ ಈಗಾಗಲೇ ಮಾಧ್ಯಮಗಳು ಬೆಳಕು ಚೆಲ್ಲಿ ವಿಶೇಷ ವರದಿಗಳನ್ನು ಪತ್ರಿಕೆಗಳಲ್ಲಿ ಪ್ರಕಟ ಮಾಡಿವೆ. ಹಾಗೂ ಸುದ್ದಿವಾಹಿನಿಗಳು ಕೂಡ ವಿಶೇಷ ವರದಿಗಳನ್ನು ಬಿತ್ತರಿಸಿವೆ.

    ತಮ್ಮ ಸರಕಾರದ ಆಹಾರ ಸರಬರಾಜು ಇಲಾಖಾ ಸಚಿವರಾದ ಶ್ರೀ ಗೋಪಾಲಯ್ಯನವರು ಸೋಮವಾರದಿಂದ ಎಲ್ಲರಿಗೂ ಎರಡು ತಿಂಗಳ ರೇಷನ್ ನೀಡುವುದಾಗಿ ಪ್ರಕಟಿಸಿದ್ದರು. ಆದರೆ ಇದುವರೆಗೂ ಎಲ್ಲೂ ಸರಕಾರಿ ರೇಷನ್ ಅಂಗಡಿಗಳು ಬಾಗಿಲು ತೆರೆದಿಲ್ಲ. ಈಗ ಏಪ್ರಿಲ್ ಮೊದಲವಾರದಿಂದ ಎಂದು ಘೋಷಿಸಲಾಗಿದೆ. ಮನೆಮಂದಿಯಲ್ಲ ಈಗ ಕೂತು ತಿನ್ನುವ ಹೊತ್ತು ಬಂದಿದೆ, ಇಂತಹ ಸಮಯದಲ್ಲಿ ಅಗತ್ಯ ಸಾಮಗ್ರಿಗಳ ತುರ್ತು ಅಗತ್ಯವಿದೆ. ಈಗ ನೀವು ಇಂದಿರಾ ಕ್ಯಾಂಟೀನ್ ನಲ್ಲಿ ಊಟ ವಿತರಿಸಲು ಸಾಧ್ಯವಿಲ್ಲ ಎಂದು ತೀರ್ಮಾನಿಸಿದ್ದೀರಿ.

    ಹಾಗಾದರೆ ಈ ಬಡಜನರ ಹಸಿವನ್ನು ನಿವಾರಿಸಲು ನಿಮ್ಮ ಸರಕಾರ ಕೈಗೊಂಡ ನಿರ್ದಿಷ್ಟ ಯೋಜನೆ ಮತ್ತು ಕಾರ್ಯಕ್ರಮಗಳೇನು? ಇದನ್ನು ನೀವು ಕೂಡಲೇ ಸ್ಪಷ್ಟಪಡಿಸಬೇಕಾಗುತ್ತದೆ. ಈಗಂತೂ ಮತ್ತೆ ಮಾನ್ಯ ಪ್ರಧಾನ ಮಂತ್ರಿಗಳು ಏಪ್ರಿಲ್ 14 ರವರೆಗೂ ಕರ್ಫ್ಯೂ ಘೋಷಿಸಿದ್ದಾರೆ. ಆದರೆ ಅವರು ಯಾವುದೇ ಕಲ್ಯಾಣ ಕಾರ್ಯಕ್ರಮಗಳನ್ನು ಬಡವರು ಮತ್ತು ಅಸಂಘಟಿತರಿಗೆ ಪ್ರಕಟಿಸದಿರುವುದು ಖೇದಕರ. 21 ದಿನಗಳೆಂದರೆ ಕರ್ಫ್ಯೂ ಎಂದರೆ ಶ್ರಮಜೀವಿಗಳ ಪಾಲಿಗೆ ಅದೊಂದು ದೀರ್ಘಾವಧಿ. ಇಂತಹ ಸಂಕಷ್ಟದ ಸಮಯದಲ್ಲಿ ಪ್ರತಿಯೊಂದು ಸರಕಾರಗಳು ಜನತೆಯ ಬದುಕನ್ನು ಸಂರಕ್ಷಣೆ ಮಾಡುವ ಕರ್ತವ್ಯವನ್ನು ಪ್ರಜ್ಞಾಪೂರ್ವಕವಾಗಿ ನಿರ್ವಹಿಸಲೇಬೇಕು. ಕರೋನಾ ವೈರಸ್ ಸೋಂಕು ನಿಯಂತ್ರಿಸುವುದೆಂದರೆ ಬಡಜನರಿಗೆ ಅಗತ್ಯವಿರುವ ಪೌಷ್ಟಿಕ ಆಹಾರ ನೀಡಿ ಅವರಿಗೆ ಸೋಂಕು ತಗುಲದಂತೆ ಕ್ರಮ ವಹಿಸುವುದು ಕೂಡ ಒಂದು ಪ್ರಮುಖ ಹಾಗೂ ಆದ್ಯತೆಯ ಕೆಲಸವಾಗಬೇಕು. ಇದರಲ್ಲಿ ನಾವು ವಿಫಲವಾದಲ್ಲಿ ಹಸಿವಿನಿಂದ ನೂರಾರು ಜನರು ಸಾಯಬಹುದಾದ ಸ್ಥಿತಿಯನ್ನು ಕಣ್ಣಾರೆ ನೋಡಬೇಕಾದ ಪರಿಸ್ಥಿತಿ ಬರಬಹುದು.

    ಶ್ರೀಮಂತರು ಹಾಗೂ ಮಧ್ಯಮ ವರ್ಗದ ಜನರು ಹೇಗೋ ಆನ್ ಲೈನ್ ಹಾಗೂ ಹೋಟೆಲ್ ಗಳನ್ನು ಬಳಸಿ ಆಹಾರ ಧಾನ್ಯ, ಊಟ ತರಿಸಿ ಬದುಕುತ್ತಾರೆ ಅಲ್ಲದೆ ಅದರಲ್ಲಿ ಕೆಲವರಿಗೆ ಮನೆಯಿಂದಲೂ ಕೆಲಸ ಮಾಡುವ ಅವಕಾಶ ಇರುವುದರಿಂದ ಜೀವನ ಮಾಡಲು ಆರ್ಥಿಕ ಸಮಸ್ಯೆ ಕೂಡ ಅಷ್ಟೊಂದು ಕಾಡದು. ಆದರೆ ಲಕ್ಷಾಂತರ ಸಂಖ್ಯೆಯಲ್ಲಿರುವ ಅಸಂಘಟಿತ ಶ್ರಮಜೀವಗಳ ಬದುಕಿನ ಮೇಲೆ ಈಗಾಗಲೇ ಕರೋನಾ ಪರಿಣಾಮ ಗಾಢವಾಗಿ ತಟ್ಟಿದೆ. ಇನ್ನು ಮುಂದೆ ಅದು ಇನ್ನಷ್ಟು ಬೇಸಿಗೆಯ ಬಿಸಿಲಿಗಿಂತಲೂ ತೀವ್ರಗೊಳ್ಳಲಿದೆ.

    ಬರಗಾಲದಲ್ಲಿ ಹಸಿವು ಜಾಸ್ತಿ ಎನ್ನುವಂತೆ ಬಡವರು ತಮ್ಮ ದುಡಿತದ ಬಹುಪಾಲು ಆದಾಯವನ್ನು ಊಟಕ್ಕಾಗಿಯೇ ವಿನಿಯೋಗಿಸುತ್ತಿರುವುದು ವಾಸ್ತವ. ಆದರೆ ಈಗ ದುಡಿಮೆ ಎನ್ನುವ ಆದಾಯವೇ ನಿಂತು ಹೋಗಿದೆ. ಇರೋ ಬರೋ ಹಣ ಖರ್ಚು ಮಾಡಿ ಸಾಲ ಶೂಲ ಮಾಡಿ ಇನ್ನೊಂದು ವಾರ ಅವರು ಬದುಕು ದೂಡಬಹುದು, ಆದರೆ ಮುಂದೇನು?
    ಬಡವರ ಇಂತಹ ಹಸಿವನ್ನು ಕುರಿತೇ ಕನ್ನಡದ ಖ್ಯಾತ ಕವಿ ದ.ರಾ ಬೇಂದ್ರೆ ದೇವರನ್ನು ಕುರಿತು ಹೀಗೊಂದು ಕವನ ಬರೆದಿದ್ದರು.
    ದೇವರೆ ದೇವರೇ
    ಎಂತಹ ಕೆಲಸ ಮಾಡಿದೆ
    ಹುಟ್ಟಿಸುವಾಗ ಅನ್ನ ಒಳಗಿಟ್ಟು
    ಹಸಿವನ್ನಾ ಹೊರಗಿಡಬಾರದಿತ್ತೇ?
    ಈ ನಾಲ್ಕು ಕವನದ ಸಾಲುಗಳೇ ಬಡವರು ಹಾಗೂ ಶ್ರಮಜೀವಿಗಳ ಹಸಿವಿನ ಚಿತ್ರಣವನ್ನು ಹಾಗೂ ಅವರಿಗೆ ಅನ್ನದ ಅವಶ್ಯಕತೆಯನ್ನು ಪರಿಣಾಮಕಾರಿಯಾಗಿ ನಮಗೆಲ್ಲ ಮನಗಾಣಿಸುತ್ತಿವೆ.

    ನಿಮ್ಮ ಸರಕಾರ ಕರೋನಾ ವೈರಸ್ ಸೋಂಕು ಹರಡದಂತೆ ಕೈಗೊಂಡಿರುವ ಕ್ರಮಗಳನ್ನು ನಾವೆಲ್ಲ ಮನಃಪೂರ್ವಕವಾಗಿ ಒಪ್ಪುತ್ತೇವೆ, ಮತ್ತು ಈ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ನಿಮ್ಮ ಜೊತೆ ಕೈ ಜೋಡಿಸಿದ್ದೇವೆ ಕೂಡ.

    ಆದರೆ, ರಾಜ್ಯದಲ್ಲಿರುವ ಲಕ್ಷಾಂತರ ಬಡವರು ವಿಶೇಷವಾಗಿ ಒಂದು ನಿಗದಿತ ಆದಾಯದಿಂದ ವಂಚಿತರಾಗಿರುವ ಅಸಂಘಟಿತ ವಲಯದ ಕಾರ್ಮಿಕರು ಹಾಗೂ ಅವರ ಕುಟುಂಬಗಳನ್ನು ಹಸಿವುನಿಂದ ಪಾರು ಮಾಡಲು ಒಂದು ವೇಳೆ ಇಂದಿರಾ ಕ್ಯಾಂಟೀನ್ ಮೂಲಕ ಊಟ ವಿತರಿಸಲು ಸಾಧ್ಯವಾಗದಿದ್ದಲ್ಲಿ ಕೆಳಕಂಡ ಕಾರ್ಯಕ್ರಮಗಳನ್ನು ಜಾರಿ ಮಾಡಬೇಕೆಂದು ಆಗ್ರಹಪೂರ್ವಕವಾಗಿ ವಿನಂತಿಸುತ್ತೇವೆ.

    ತುರ್ತಾದ ಹಕ್ಕೋತ್ತಾಯಗಳು

    1. ಎಲ್ಲಾ ಅಸಂಘಟಿತ ಕಾರ್ಮಿಕ ಕುಟುಂಬಗಳಿಗೆ ಆಯಾ ಜಿಲ್ಲಾಧಿಕಾರಿಗಳ ಮೂಲಕ ಕೂಡಲೇ ಅವರ ಬ್ಯಾಂಕ್ ಖಾತೆಗೆ ರೂ 5000 ಹಣ ಜಮಾ ಮಾಡಬೇಕು, ಈಗಾಗಲೇ ಕಟ್ಟಡ ನಿರ್ಮಾಣ ಕಾರ್ಮಿಕರಿಗೆ ತಾವು ಮಂಡಳಿಯ ನಿಧಿಯಿಂದ ಮಾಸಿಕ ರೂ. 1000 ನೆರವನ್ನು ಘೋಷಿಸಿರುವುದು ಸ್ವಾಗತಾರ್ಹ, ಆದರೆ ಅದನ್ನು ಕೂಡಲೇ ರೂ. 3000 ಕ್ಕೆ ಹೆಚ್ಚಿಸಲು ಕ್ರಮವಹಿಸಬೇಕು. ಇತರೆ ಅಸಂಘಟಿತ ಕಾರ್ಮಿಕರಿಗೂ ಇದೇ ರೀತಿಯ ಆರ್ಥಿಕ ನೆರವು ಸರಕಾರದ ಅನುದಾನದಲ್ಲಿ ಕೂಡಲೇ ಪ್ರಕಟಿಸಬೇಕು.

    2. ಎಲ್ಲಾ ಅಸಂಘಟಿತ ಕಾರ್ಮಿಕರಿಗೆ ಮತ್ತು ಕೃಷಿಕೂಲಿಕಾರರಿಗೆ BPL-APL ಎನ್ನುವ ತಾರತಮ್ಯ ವಿಲ್ಲದಂತೆ ಕೇರಳದ ಮಾದರಿಯಲ್ಲಿ 16 ಅಗತ್ಯ ಆಹಾರ ಧಾನ್ಯಗಳ ಕಿಟ್ ಗಳನ್ನು ಅವರ ಮನೆಗಳಿಗೆ ತಲುಪಿಸಬೇಕು. ಮತ್ತು ವಾರಕ್ಕೊಮ್ಮೆ ತರಕಾರಿ ಹಾಗೂ ಹಣ್ಣುಗಳನ್ನು ನೀಡಬೇಕು ಜೊತೆಗೆ ರೋಗ ನಿಯಂತ್ರಣಕ್ಕಾಗಿ ಎಲ್ಲಾ ಕುಟುಂಬಗಳಿಗೆ ಅಗತ್ಯವಿರುವ ಸ್ಯಾನೀಟೈಜರ್ಸ್ (Sanitizer) ಗಳನ್ನು ಉಚಿತವಾಗಿ ಕೂಡಲೇ ವಿತರಿಸಬೇಕು

    3. ಬಹುಪಾಲು ಈ ಶ್ರಮಜೀವಿಗಳು ಸಾಲದಲ್ಲೆ ಬದುಕು ಸಾಗಿಸುವಂತಹವರು. ಹಾಗಾಗಿ ಸಹಕಾರ ಸಂಘ, ಬ್ಯಾಂಕ್ ಹಾಗೂ ವಿವಿಧ ಸ್ವಸಹಾಯ ಸಂಘಗಳಿಂದ ಪಡೆದಿರುವ ಸಾಲಗಳ ಕಂತುಗಳು ಹಾಗೂ ನೀರು, ವಿದ್ಯುತ್ ಬಿಲ್ಲುಗಳ ಪಾವತಿಗೂ ಮೂರು ತಿಂಗಳ ಸಮಯ ವಿಸ್ತರಿಸಬೇಕು.

    4. ಬಡವರು ಮತ್ತು ಅಸಂಘಟಿತ ಕಾರ್ಮಿಕರು ಹಾಗೂ ಬಡವರ ಮನೆಗಳಲ್ಲಿ ಇರುವ ಮತ್ತು ಈ ಕರೋನಾ ವೈರಸ್ ದಾಳಿಗೆ ಸಿಲುಕುವ ಸಾಧ್ಯತೆ ಇರುವ 60 ವರ್ಷ ದಾಟಿದ ಹಾಗೂ 10 ವರ್ಷದೊಳಗಿನ ಎಲ್ಲಾ ಮಕ್ಕಳಿಗೂ ಹಾಲು, ಮೊಳಕೆ ಕಾಳು ಮೊದಲಾದ ಪೌಷ್ಟಿಕಾಂಶ ಆಹಾರ ನೀಡಲು ಕ್ರಮವಹಿಸಬೇಕು

    5. ಈ ಕರೋನಾ ಸೋಂಕು ನಿಯಂತ್ರಣಕ್ಕಾಗಿ ಹಗಲಿರುಳು ದುಡಿಯುತ್ತಿರುವ ಆರೋಗ್ಯ ಹಾಗೂ ಪಂಚಾಯತ್ ರಾಜ್, ಮಹಿಳಾ ಮಕ್ಕಳ ಇಲಾಖೆ, ಶಿಕ್ಷಣ, ಕಂದಾಯ ಇಲಾಖೆ, ಮಹಾನಗರ, ನಗರ ಪಾಲಿಕೆ, ಪುರಸಭೆ ಮೊದಲಾದ ಕಡೆಗಳಲ್ಲಿ ಗುತ್ತಿಗೆ ಹೊರಗುತ್ತಿಗೆ ಆಧಾರದಲ್ಲಿ ಸಾವಿರಾರು ವೈದ್ಯರು ಅಧಿಕಾರಿಗಳು ಹಾಗೂ ನೌಕರರು ದುಡಿಯುತ್ತಿದ್ದಾರೆ. ಅವರಿಗೆಲ್ಲಾ ಹಲವು ತಿಂಗಳುಗಳ ಸಂಬಳವೇ ಬಂದಿಲ್ಲ, ಕೂಡಲೇ ತಮ್ಮ ಸರಕಾರ ಅವರಿಗೆ ಬಾಕಿ ಸಂಬಳದ ಜೊತಗೆ ವಿಶೇಷ ಭತ್ಯೆಯನ್ನು ಪ್ರಕಟಿಸಿ ಅವರು ಈ ನಾಡಿಗೆ ಸಲ್ಲಿಸುತ್ತಿರುವ ಸೇವೆಯನ್ನು ಗೌರವಿಸಬೇಕು

    6. ರಾಜ್ಯದಲ್ಲಿ ವಸತಿ ರಹಿತರು ಸಾವಿರಾರು ಸಂಖ್ಯೆಯಲ್ಲಿ ಬೀದಿಗಳಲ್ಲಿ ವಾಸಿಸುತ್ತಿದ್ದಾರೆ. ಅಂತಹವರನ್ನು ಸಮೀಪದ ಶಾಲೆ ಮತ್ತು ಕಲ್ಯಾಣ ಮಂಟಪಗಳಿಗೆ ಸ್ಥಳಾಂತರಿಸಿ ಅವರಿಗೆ ಈ ಕರೋನಾ ವೈರಸ್ ಹರಡದಂತೆ ರಕ್ಷಣೆ ಒದಗಿಸಬೇಕು ಹಾಗೂ ಅವರಿಗೆ ಅಗತ್ಯ ಊಟ ಅಥವಾ ಆಹಾರ ಸಾಮಗ್ರಿಗಳನ್ನು ಆಯಾ ಜಿಲ್ಲಾಡಳಿತದ ಮೂಲಕ ತಲುಪಿಸುವಂತಾಗಬೇಕು.
    ಮೇಲ್ಕಂಡ ಅಂಶಗಳ ಕುರಿತು ಅಗತ್ಯ ಕ್ರಮ ವಹಿಸುತ್ತೀರೆಂದು ಭಾವಿಸುತ್ತೇವೆ.

    ವಂದನೆಗಳೊಂದಿಗೆ
    ತಮ್ಮ ವಿಶ್ವಾಸಿಗಳು

    ಡಾ ಜಿ.ರಾಮಕೃಷ್ಣ (ಜಿ.ಆರ್) ಬೆಂಗಳೂರು, ಚಿದಂಬರ್ ರಾವ್ ಜಂಬೆ ರಂಗ ನಿರ್ದೇಶಕರು, ರಹಮತ್ ತರಿಕೆರೆ, ಚಿಂತಕರು ಹಂಪಿ ವಿವಿ, ಕಾತ್ಯಾಯಿನಿ ಚಾಮರಾಜ್, ಸಿವಿಕ್ ಬೆಂಗಳೂರು, ರೇಣುಕಾ ನಿಡುಗುಂದಿ, ಬರಹಗಾರರು ನವದಹೆಲಿ, ಡಿ.ಎಸ್ ಚೌಗಲೆ, ರಂಗಕರ್ಮಿ ಬೆಳಗಾವಿ, ರಂಜಾನ್ ದರ್ಗಾ, ಹಿರಿಯ ಪತ್ರಕರ್ತರು, ಸನತ್ ಕುಮಾರ್ ಬೆಳಗಲಿ, ಹಿರಿಯ ಪತ್ರಕರ್ತರು, ದಿನೇಶ ಅಮ್ಮಿನಮಟ್ಟು, ಹಿರಿಯ ಪತ್ರಕರ್ತರು, ಆರ್.ಜಿ. ಹಳ್ಳಿ ನಾಗರಾಜ್, ಹಿರಿಯ ಪತ್ರಕರ್ತರು, ಶಿವ ಸುಂದರ್, ಚಿಂತಕರು ಅಂಕಣಕಾರರು, ಹಸನ್ ನಯೀ ಸುರಕೋಡ, ಬರಹಗಾರರು ರಾಮದುರ್ಗ, ವಿನಯ್ ಶ್ರೀನಿವಾಸ್, ವಕೀಲರು ಬೆಂಗಳೂರು, ಡಾ. ವಾಸು, ಜನಶಕ್ತಿ ಬೆಂಗಳೂರು, ಕೆ.ನೀಲಾ, ಮಹಿಳಾ ಹೋರಾಟಗಾರರು ಕಲುಬುರಗಿ, ಡಾ ಮೀನಾಕ್ಷಿ ಬಾಳಿ, ಪ್ರಾದ್ಯಾಪಕರು ಕಲುಬರುಗಿ, ಕೆ .ಶರೀಫಾ, ಕವಿಯತ್ರಿ ಬೆಂಗಳೂರು, ಎಸ್.ಸತ್ಯಾ, ಸಾಮಾಜಿಕ ಕಾರ್ಯಕರ್ತೆ ಹಾಗೂ ಹಿರಿಯ ಪತ್ರಕರ್ತರು, ಪ.ಸ ಕುಮಾರ್ ಹಿರಿಯ ಕಲಾವಿದರು ಬೆಂಗಳೂರು, ಡಾ ಶ್ರೀಪಾದ್ ಭಟ್ ಚಿಂತಕರು, ಜಿ.ಎನ್ ನಾಗರಾಜ್ ಚಿಂತಕರು ಬೆಂಗಳೂರು, ಡಾ ಎಂ.ಡಿ.ಒಕ್ಕುಂದ ಪ್ರಾಧ್ಯಾಪಕರು ಧಾರವಾಡ, ಡಾ ವಿನಯ ಒಕ್ಕುಂದ ಪ್ರಾಧ್ಯಾಪಕರು, ನಭ, ಡಾ ಅಶೋಕ ಶೆಟ್ಟರ್ ಪ್ರಾಧ್ಯಪಕರು ಧಾರವಾಡ, ಡಾ ಬಂಜೆಗೆರೆ ಜಯಪ್ರಕಾಶ್ ಸಾಹಿತಿಗಳು ಬೆಂಗಳೂರು, ನಿತ್ಯಾನಂದ ಸ್ವಾಮಿ ಸಂಪಾದಕರು ಜನಶಕ್ತಿ ವಾ ಪತ್ರಿಕೆ, ಡಾ : ವಡ್ಡಗೆರೆ ನಾಗರಾಜಯ್ಯ ಸಂಸ್ಕೃತಿ ಚಿಂತಕರು, ಡಾ ಮಲ್ಲಿಕಾರ್ಜುನ ಮಾನ್ಪಡೆ ಅಲೆಮಾರಿ ಒಕ್ಕೂಟ, ಬಸವರಾಜ್ ಸೂಳಿಭಾವಿ ಲಡಾಯಿ ಪ್ರಕಾಶನ ಗದಗ, ಡಾ ವಿಠ್ಠಲ ಭಂಡಾರಿ ಪ್ರಾಧ್ಯಾಪಕರು ಹೊನ್ನಾವರ, ಅಕ್ಷತಾ ಹುಂಚದ ಕಟ್ಟೆ ಅಹರ್ನಿಶಿ ಪ್ರಕಾಶನ ಶಿವಮೊಗ್ಗ, ವಿಠಲ ಹೆಗೆಡೆ ಕಲ್ಕುಳಿ ಚಿಂತಕರು ಶೃಂಗೇರಿ, ಸುಕನ್ಯಾ ಕನವಳ್ಳಿ ಕವಿಯತ್ರಿ, ಕೆ.ಎಸ್ ವಿಮಲ ಮಹಿಳಾ ಹೋರಾಟಗಾರರು, ಕೋಡಿಹಳ್ಳಿ ಚಂದ್ರಶೇಖರ್ ರೈತ ಮುಖಂಡರು, ಜಿ.ಸಿ ಬಯ್ಯಾರೆಡ್ಡಿ ಅಧ್ಯಕ್ಷರು ಪ್ರಾಂತ ರೈತ ಸಂಘ, ಜಿ.ಎಂ ವೀರಸಂಗಯ್ಯ ರೈತ ಮುಖಂಡರು, ದಿವಾಕರ್ ಕೆ.ಆರ್ ಎಸ್ ಮುಖಂಡರು, ಕವಿತಾ ಕರಿಗುಂಟೆ ರೈತ ಹೋರಾಟಗಾರರು, ಯು ಬಸವರಾಜ್ ಪ್ರ.ಕಾರ್ಯದರ್ಶಿ ಕೆಪಿಆರ್ ಎಸ್., ಸುನಂದ ಕಡೆಮೆ, ಪ್ರಕಾಶ ಕಡೆಮೆ, ನವ್ಯ ಕಡೆಮೆ, ಡಾ ಬಿ.ಆರ್ ಮಂಜುನಾಥ್ ಬರಹಗಾರರು, ಡಾ ಜಯಲಕ್ಷ್ಮೀ ವೈದ್ಯರು ಹಾಗೂ ಮಹಿಳಾ ಹೋರಾಟಗಾರ್ತಿ, ಶಿವಾನಂದ ಸಾಸ್ವೀಹಳ್ಳಿ ಬರಹಗಾರರು, ಡಾ ಅರುಣ್ ಜೋಳದ ಕೂಡ್ಲಿಗಿ ಹಂಪಿ ವಿವಿ, ಕಿರಣ್ ಭಟ್ ರಂಗಕರ್ಮಿ ಹೊನ್ನಾವರ, ದೀಪ ಹಿರೇಗುತ್ತಿ ಬರಹಗಾರರು ಶಿವಮೊಗ್ಗ, ರಂಗನಾಥ ಕಂಟನಕುಂಟೆ ಉಪನ್ಯಾಸಕರು, ನಟರಾಜ್ ಹೊನ್ನಾವಳ್ಳಿ ಬರಹಗಾರರು, ಹಲ್ಕರಿಕೆ ಶಿವಶಂಕರ್ ರಂಗ ನಿರ್ದೇಶಕ, ಡಾ ಎ.ಬಿ.ರಾಮಚಂದ್ರಪ್ಪ ಪ್ರಾದ್ಯಾಪಕರು ದಾವಣಗೆರೆ, ರೇಣುಕಾ ಚಿತ್ರದುರ್ಗ, ಜಗದೀಶ ಭಟ್, ಪ್ರದೀಪ, ಮೀನಾಕ್ಷಿ ಸುಂದರಂ ಸಿಐಟಿಯು ಪ್ರ ಕಾರ್ಯದರ್ಶಿ, ಕೆ.ಎನ್ ಉಮೇಶ್ ಸಿಐಟಿಯು ಬೆಂಗಳೂರು, ಕೆ.ಮಹಾಂತೇಶ ಸಿಐಟಿಯು ಬೆಂಗಳೂರು, ಟಿ.ಸುರೇಂದ್ರರಾವ್ ಸಮುದಾಯ ಬೆಂಗಳೂರು, ವಿಜಯ ಬಾಸ್ಕರ್ ಪ್ರ.ಕಾರ್ಯದರ್ಶಿ ಎಐಟಿಯುಸಿ, ನಾಗರಾಜ್ ಶೆಟ್ಟಿ ಚಿಂತಕರು ಬೆಂಗಳೂರು, ವಸಂತರಾಜ್ ಎನ್ಕೆ ಬರಹಗಾರರು ಬೆಂಗಳೂರು, ಯೋಗಿಶ್ ಮಾಸ್ಟರ್ ಬರಹಗಾರರು ರಾಮನಗರ, ಪ್ರದೀಪ ಮಾಲ್ಗುಡಿ ಹಿರಿಯ ಪತ್ರಕರ್ತರು, ಹೆ.ಆರ್ ನಟರಾಜ್ ಹಿರಿಯ ಪತ್ರಕರ್ತರು, ಡಾ ಚಂದ್ರಶೇಖರ ಆರ್.ವಿ.ರಾ. ಕಾನೂನು ಶಾಲೆ, ಡಾ ಬಿ.ಪಿ ಮಹೇಂದ್ರ ಕುಮಾರ್ ದಾಂಡೇಲಿ, ಮಹೇಶ ಪತ್ತಾರ್ ಹುಬ್ಬಳ್ಳಿ, ಡಾ ; ಅನಿಲ್ ಕುಮಾರ್ ಬಾಗೆಪಲ್ಲಿ, ಈ ಬಸವರಾಜ್ ಖಜಾಂಚಿ ಕರಾವಿಪ, ಎನ್.ವೀರಸ್ವಾಮಿ ಅಧ್ಯಕ್ಷರು CWFI, ಇಮ್ತಿಯಾಜ್ ಹುಸೇನ್ ಬರಹಗಾರರು ದಾವಣಗೆರೆ, ಜೈ ಕುಮಾರ್ ಅ.ಕ ಸ.ನೌಕರರ ಒಕ್ಕೂಟ, ಸೈಯದ್ ಮುಜೀಬ್ ಬೀದಿಬದಿ ವ್ಯಾಪಾರಿಗಳ ಸಂಘ, ಕೆ.ಇ ಸಿದ್ದಯ್ಯ ಪತ್ರಕರ್ತರು ತುಮಕೂರು, ಬಿ.ಉಮೇಶ್ ಕಟ್ಟಡ ಕಾರ್ಮಿಕ ಸಂಘ ತುಮಕೂರು, ರಂಗರಾಜು ಪತ್ರಕರ್ತರು ತುಮಕೂರು, ಆರ್ ರಾಮಕೃಷ್ಣ ಬಿಜಿವಿಎಸ್ ಬೆಂಗಳೂರು, ಕೆ.ಎಸ್ ಲಕ್ಷ್ಮೀ ಜೆಎಂಎಸ್ ಬೆಂಗಳೂರು, ಸುಧಾ ರೆಡ್ಡಿ ಬೆಂಗಳೂರು, ಟಿ.ಎಲ್ ಕೃಷ್ಣೇಗೌಡ ತಳಗವಾದಿ ಮಂಡ್ಯ, ಸುರೇಶ ಕಲ್ಲಾಗಾರ್ cwfi ಕುಂದಾಪುರ, ಪ್ರಭಾ ಬೆಳವಂಗಲ ವಿಜ್ಞಾನ ಕಾರ್ಯಕರ್ತೆ ಬೆಂ., ಬಾಲಕೃಷ್ಣ ಶೆಟ್ಟಿ ಸಿಐಟಿಯು ಉಡುಪಿ, ಗಾಂಧಿನಗರ ನಾರಾಯಣಸ್ವಾಮಿ cituಕೋಲಾರ, ಸುನಂದ ವೇದರಾಜ್, AIDWA ಬೆಂಗಳೂರು, ಸಿದ್ದಯ್ಯ ಚಿಕ್ಕ ಮಾದಯ್ಯ Cwfi ಬೆಂಗಳೂರು, ನಜ್ಮಾ ನಜೀರ್ ಚಿಕ್ಕನೇರಳೆ ಚಿಂತಕಿ, ಭೀಮ ಮಿಷನ್ ಬೆಂಗಳೂರು, ರಮಾಕಾಂತ ಪುರಾಣಿಕ, ಮೆಹರಾಜ್ ಪಾಟೀಲ ತಾವರಕೆರೆ, ಸತೀಶ ಕುಮಾರ ಬೆಂಗಳೂರು, ಕೆ.ಎಚ್ ಪಾಟೀಲ್ ವಕೀಲರು ಧಾರವಾಡ, ಎಲ್.ಹೆಚ್.ಅರುಣ್ ಕುಮಾರ್ ವಕೀಲರು ದಾವಣಗೆರೆ, ಐ.ಆರ್.ಪ್ರಮೋದ್ ವಕೀಲರು ವಿರಾಜಪೇಟೆ, ಶ್ರೀಧರ ಮಾತನವರ್ ವಕೀಲರು ದಾವಣಗೆರೆ, ಲಿಂಗರಾಜ್ ಸಿಐಟಿಯು ಬೆಂಗಳೂರು, ಯಶೋದ ಮುನ್ನಡೆ, ಯಮುನಾ ಗಾಂವ್ಕರ್ ಸಿಐಟಿಯು ಕಾರವಾರ, ಹನುಮಂತ ಪೂಜಾರಿ cwfi ಕಲುಬುರಗಿ, ಶಬರೀಶ್ ಕುಮಾರ್ citu ಮೈಸೂರು, ಕೆ.ಪಿ ಜಾನಿ Cwfi ಸುಳ್ಯ, ಕೆ.ಪ್ರಭಾಕರನ್ ಶಿವಮೊಗ್ಗ ಸಮುದಾಯ, ರಮೇಶ ಹೆಚ್.ಆರ್ ರಂಗನಿರ್ದೇಶಕರು ಮೈಸೂರು, ಶ್ರೀಧರ ಮೂರ್ತಿ ಗ್ರಾಮೀಣ ಸಂಸ್ಕೃತಿ ಚಿಂತಕರು, ಟ.ಎನ್.ಷಣ್ಮುಖ ಹಿರಿಯ ಪತ್ರಕರ್ತರು, ಶಶಿಧರ ಸಮುದಾಯ ಬೆಂಗಳೂರು, ಪಂಡಿತಾರಾಧ್ಯ ಮೈಸೂರು, ಸಿ.ಕೆ ಗುಂಡಣ್ಣ ರಂಗ ಕಲಾವಿದರು, ಸಿರಾಜ್ ಬಿಸರಳ್ಳಿ ಕವಿಗಳ, ಪಿ.ಕೆ ಮಲ್ಲನಗೌಡರ್, ಎಂ.ಜಿ ವೆಂಕಟೇಶ ರಂಗ ಸಂಘಟಕರು ಬೆಂಗಳೂರು, ಶಾಂತರಾಂ ನಾಯಕ್ KPRS ಉ.ಕ, ಶ್ರೀನಿವಾಸ ಕುಮಾರ್, ಲಕ್ಷ್ಮಣ್ ಕುಮಾರ್ ಎಲ್ ಬೆಂಗಳೂರು, ಭೀಮರಾಜ್ cwfi. ಕೋಲಾರ, ಚಿಕ್ಕರಾಜು ಬಿಜೆವಿಎಸ್ ಬೆಂಗಳೂರು, ಅಂಬರೀಶ್ Sfi ಕೇಂದ್ರ ಸಮಿತಿ ಸದಸ್ಯರು, ವಾಸುದೇವ ರೆಡ್ಡಿ SFI ರಾಜ್ಯ ಕಾರ್ಯದರ್ಶಿ, ಗುರುರಾಜ್ ದೇಸಾಯಿ ಜನಶಕ್ತಿ ಮೀಡಿಯ, ಬಸವರಾಜ್ ಪೂಜಾರಿ ಕಾರ್ಯದರ್ಶಿ Dyfi ಹಾವೇರಿ, ಹನುಮೇಗೌಡ ಕೃಷಿಕೂಲಿಕಾರರ ಸಂಘ ಬೆಂಗಳೂರು, ಶಮೀಮ ಮುಜೀಬ್ ಉಪನ್ಯಾಸಕರು ತುಮಕೂರು, ಸುಬ್ರಹ್ಮಣ್ಯ ಎನ್.ಕೆ.ಗ್ರಾಮ ಪಂಚಾಯ್ತಿ ನೌ ಸಂಘ, ಲೋಕೇಶ್ citu ತುಮಕೂರು, ಸುಬ್ರಹ್ಮಣ್ಯ BSNLEU ಮೈಸೂರು, ಈರಣ್ಣ BSNLEU ದಾವಣಗೆರೆ, ನಾಗರಾಜ್ ಧನ್ ಪೌಂಡೇಷನ್ ಬೆಂಗಳೂರು, ಮನೋಹರ ಕೇರ್ ಬೆಂಗಳೂರು, ಅಶ್ರಫ್ ಎಂ ಸಾಲೆತ್ತೂರು, ನಾಗಯ್ಯಸ್ವಾಮಿ Cwfi ಕಲುಬುರಗಿ, ಪ್ರಭು ಡಿ, ಮಂಜುನಾಥ್, ವಿನಾಯಕ ಕುರುಬರ citu ಹಾವೇರಿ, ಸ್ಟೀವನ್ ಜೇಕಬ್ ಕುಂದಾಪುರ, ಇಬ್ರಾಹಿಂ ಖಲೀಲ Cwfi ತುಮಕೂರು, ನವೀನಕುಮಾರ್, ಮೊಹಮ್ಮದ್ ರಾಮನಗರ, ಮಂಜುನಾಥ ಎಂಜೆ., ಚಂದ್ರು ನಡುಕಿನಮನಿ, ವಿನೋದ ಶ್ರೀರಾಮಪುರ, ಸುರೇಶ ತಾಳೆವಾಡ, ಜಾನ್ಸಿ ಆಚಾರಿ ಕಲುಬರಗಿ, ರುದ್ರಮ್ಮ ಅಮರೇಶ ಹಾಸಿನಾಳ, ನಂದಕುಮಾರ್ ಉಬ್ಬು, ಸಿದ್ದೇಶ ಚಂದ್ರ ಪೆಂಡಾರನಹಳ್ಳಿ, ಶೃತಿ ಬಿ.ಆರ್., ಲಕ್ಷ್ಮಣ ಮೂಡಲಗೇರಿ, ಬಿವಿ ಕಮೋಜಿ, ಪ್ರಕಾಶ ಚೌದ್ರಿ ಬೆಂಗಳೂರು, ಚಂದ್ರಶೇಖರ ಬೆಂಗಳೂರು, ಬಾಲು ರಾಥೋಡ್ ಗಜೇಂದ್ರಗಡ, ರವೀಂದ್ರ ಹೊನವಾಡ ಚಿಂತಕರು ಗಜೇಂದ್ರಗಡ, ಅರವಿಂದ citu ಹಾಸನ, ಪ್ರಕಾಶ ಪೌರ ಕಾರ್ಮಿಕರ ಸಂಘ ಹಾಸನ, ಗಂಗಾರಾಜ್ ಬಿ.ವಿ, ಕೃಷ್ಣಮೂರ್ತಿ, ಎ.ಲೋಕೇಶ್, ಯೋಗೇಶ್ ರಾಮನಗರ, ಜೆ ಶಿವಕುಮಾರ್, ದಯಾನಂದ ಬೆಂಗಳೂರು., ವಿಜಯ ಅಪ್ಪಾಜಿಗೌಡ ಬೆಂಗಳೂರು, ಪಾಂಡುರಂಗ ಕೊಂಚಾಡಿ, ಶಿವಣ್ ಕೆಂಸಿ, ಶಿವಶಂಕರ್ Ardu, ಶ್ರೀನಿವಾಸ ಕೃಷ್ಣ ಮೈಸೂರು, ಅಶೋಕ Cwfi ಮಾಲೂರು, ಅರುಣ್ ಕುಮಾರ್ ಘೋಷ್, ರೋಹಿತ್, ಲಿಂಗಣ್ಣ ಮಕಾಶಿ, ತುಳಸಿದಾಸ್ ವಿಟ್, ಸಂತೋಷ ಮಳವಳ್ಳಿ, ಡಾ ರವಿ ಎಂ ಸಿದ್ಲೀಪುರ, ರಾಜು ಕತ್ತಿ ತುಮಕೂರು, ಜಿ.ವಿ.ಕುಲಕರ್ಣಿ ಬೆಳಗಾವಿ, ಬಿ.ಎನ್ ಪೂಜಾರಿ ಧಾರವಾಡ, ಎ.ಎಂ ಖಾನ್ ಧಾರವಾಡ, ಎ.ಎಸ್ ಮೂರ್ತಿ ಬೆಂಗಳೂರು, ನಾಗರಾಜ್ ರಾವ್ ಬೆಂಗಳೂರು, ಹರೀಶ್ Ardu, ನವೀನ ಆರಾಧ್ಯ, ಮೀನಾ ಚಾಮರಾಜನಗರ, ನಂದೀಶ, ಸಿದ್ದಲಿಂಗಪ್ಪ, ಶಿವಕುಮಾರ್ ಸ್ವಾಮಿ, ಜ್ಯೋತಿ ಸ್ವಾಮಿ, ವೆಂಕಟೇಶ ಜನಾದ್ರಿ, ಎಂ ಲಿಂಗರಾಜ ಪ್ರಜಾಸಮರ ಹಟ್ಟಿ, ಸಿಂಹಾದ್ರಿ ಎಸ್ ಬೆಂಗಳೂರು, ಎಚ್.ಎಸ್ ಪ್ರಕಾಶ ಬೆಂಗಳೂರು, ಜಾಹೀರಾ ಶೀರನ್ ಬೆಂಗಳೂರು, ಮಹಾದೇವಯ್ಯ ಮಳವಳ್ಳಿ, ಮಹೇಶ ಬೆಳ್ತಂಗಡಿ, ಹನುಂತರಾವ್ ಹವಾಲ್ದಾರ್ ಬೆಂಗಳೂರು, ರಮಾನಾಥ್ ಬೆಂಗಳೂರು, ರಾಜಾ ಹುಣಸೂರು, ಹೆಚ್.ಎಸ್ ಮಂಜುನಾಥ citu ಹಾಸನ, ಬಿ.ಶ್ರೀನಿವಾಸ ಕುಂದಾಪುರ, ಸೈಯದ್ ಖಾದರ್ ವಕೀಲರು ದಾವಣಗೆರೆ, ಬಸವರಾಜ್ ಕಮ್ಮಾರ್ ಸಮುದಾಯ ಹ.ಬೋ ಹಳ್ಳಿ, ಹುಳ್ಳಿ ಪ್ರಕಾಶ ಸಮುದಾಯ ಹ.ಬೋ ಹಳ್ಳಿ, ಮೋಹಿದ್ದೀನ್ ಅಧ್ಯಕ್ಷರು SDMCCF, ಕೆ.ರಾಮಮೂರ್ತಿ ಜನಾಧಿಕಾರ ಸಮಿತಿ, ಹೆಚ್.ಚಂದ್ರಪ್ಪ ನೀಲಗುಂದ ಶಿಕ್ಷಕರು ದಾವಣಗೆರೆ, ಹರಿಪ್ರಸಾದ್ ನಾಯ್ಡು ಬೆಂಗಳೂರು, ಲೋಕೇಶ್ ಮುನಿಯಪ್ಪ, ಜ್ಯೋತಿ ವಡ್ಡರ್ ಹುಬ್ಬಳ್ಳಿ, ರಜನಿ ಗರುಡ ಧಾರವಾಡ, ಬಸವರಾಜ್ ಬಿ.ಎಸ್, ಬಸವರಾಜ್, ಕಮಲಾಕರ ಕಡವೆ, ಶ್ರೀಧರ ನಾಯ್ಕ, ಆರ್. ಎಚ್.ಬಾಗವಾನ, ಕೋಟ್ರೇಶ ಕೊಟ್ಟೂರು, ಪ್ರೊ ಎಂ ಶಿವನಂಜಯ್ಯ, ಪ್ರದೀಪ ಮರವಂಜಿ, ಸೋಮಶೇಖರ ಸಿರಾ, ಭಾರತಿದೇವಿ, ಸಂಧ್ಯಾ ಹೆಚ್.ಎಸ್., ಸತೀಶ ತಿಪಟೂರು, ವೆಂಕಟೇಶ ಬಾಬು, ರಾಘವೇಂದ್ರ ಅಪೂರ, ಮಂಜುನಾಥ ಎಸ್, ಪೂರ್ಣಿಮ, ನರಸಿಂಹ ಮೂರ್ತಿ ಹಳೆಕಟ್ಟೆ, ನಸ್ರೀನ್ ಮಿಠಾಯಿ, ಸಂಧ್ಯಾ ದೇವಿ, ಸ್ವರ್ಣಭಟ್ ಗ್ರಾಮೀಣ ಕೂಲಿಕಾರ ಸಂಘಟನೆ, ಶ್ರೀಹರಿ ಧುಪರ, ನರಸಿಂಹಮೂರ್ತಿ ವಿ.ಎಲ್, ಹನುಮಂತ ಚಂದಲಾಪುರ, ಕಾತ್ಯಾಯಿನಿ ಬಿಜೆ ಶ್ರೀರಂಗಪಟ್ಟಣ, ಗೋವಿಂದ ರಾಜು ಎಂ ಕಲ್ಲೂರು, ಶಾಂತರಾಂ ಮಾದರ, ಚಾರ್ವಕ ರಾಘು ಸಾಗರ, ಮಧುಸೂದನ, ಮಂಜುನಾಥ ಲತಾ, ಮುತ್ತು ಹಳಕೇರಿ, ಮಧುಕುಮಾರ್ ಸಿ.ಎಚ್, ಚಾಂದ್ ಕವಿಚಂದ್ರ, ಎಂ.ಎಸ್ ಪ್ರಕಾಶ ಬಾಬು, ಚಿಕ್ಕ ವಿರೇಶ ಎಸ್.ಎನ್., ಜಬೀರಾಖಾನಂ ದಾವಣಗೆರೆ, ವಸಂತ ಮೈಸೂರು, ಇಸ್ಮಾಯಿಲ್ ಜಬೀರ್, ಯೂಸುಫ್ ಎಚ್.ಬಿ, ಡಾ ಅಣ್ಣಾಜಿ ಕೃಷ್ಣಾರೆಡ್ಡಿ ಬಳ್ಳಾರಿ, ಎನ್.ಎ ದಿವಾಕರ ಮೈಸೂರು, ಪರಿಮಳ ಜಿ ಕಮತರ, ಲತಾ ಕೆ.ಜಿ ಕೆಂಚೇನಹಳ್ಳಿ, ನೂರ್ ಅಹ್ಮದ್ ಎಸ್.ಎ, ಭೀಮನಗೌಡ ಪರಗೊಂಡ, ನೂರ್ ಅಹ್ಮದ್ ಮಕಾನಾದಾರ, ಅಜ್ಮೀರನಂದಾಪುರ, ವೀರಣ್ಣಾ ಮಂಠಾಳಕರ್ ಸಾಹಿತಿಗಳು ಬ.ಕಲ್ಯಾಣ, ಸಾಗರ ಕೂಡಗಿ Sfi, ನಾಗಪ್ಪ ನಾಯ್ಕ ಹಮಾಲಿ ಕಾರ್ಮಿಕ ಸಂಘ ಶಿರಸಿ, ಎಲ್ ಮಂಜುನಾಥ ವಿಮಾ ಏಜೆಂಟರ ಸಂಘ, ವಿಠ್ಠಲ ನಾಯ್ಕ ವಕೀಲರು, ರಮೇಶ Aituc ದಾವಣಗೆರೆ, ಪುರಂದರ ಲೋಕಿಕೆರೆ ಇಷ್ಟಾ ದಾವಣಗೆರೆ, ಬಿ.ಕೆ ಇಮ್ತೀಯಾಜ್ ಬಂದರು ಶ್ರಮಿಕರ ಸಂಘ ಮಂ, ಸೋಮಶೇಖರ Sfi ಬಾಗೇಪಲ್ಲಿ, ರಾಘವೇಂದ್ರ ಬಿಬಿ, ಕೈದಾಳ ಉಮೇಶ್ citu ದಾವಣಗೆರೆ, ಸಿದ್ದಪ್ಪ Sfi ಕೊಪ್ಪಳ, ಪೀರು ರಾಥೋಡ್ citu ಗದಗ, ಮಾಲತೇಶ ಮರೆಗೌಡರ್, ರೇಣುಕಾ ರಾಜ್ KPRS, ಚಂದ್ರು Dyfi, ಅನೂಡಿ ನಾಗರಾಜ್ ಪತ್ರಕರ್ತರು ಗೌರಿಬಿದನೂರು, ಮುರುಘೇಶ ಕರ್ಕಿಕಟ್ಟೆ ವಿಜ್ಞಾನ ಕಾರ್ಯಕರ್ತ, ಗೌಡಹಳ್ಳಿ ಮಹೇಶ ಪತ್ರಕರ್ತರು ಚಾ.ನಗರ, ನಾಗರಾಜ್ ಪೂಜಾರ್ ಸಿಂಧನೂರು, ರಾಜಶೇಖರ ಬಡಿಗೇರ, ನೂರಜಹಾನ್ ಬೇಗಂ, ಡಾ ಬಾನು ಪ್ರಕಾಶ್ ಬೆಂಗಳೂರು, ಕಮಲ ಶಿರಾ, ಈರಣ್ಶಶಿರಾ, ಯರ್ರಿಸ್ವಾಮಿ ಕುಡಿತಿನಿ ಬಳ್ಳಾರಿ, ಸಂತೋಷ ಶಿಕ್ಷಕರು ಕುಂದೂರು ಹೊನ್ನಾಳಿ.

    20,000ದ ಗಡಿ ದಾಟಿತು ಜಾಗತಿಕ ಮಟ್ಟದಲ್ಲಿ COVID19 ಸಾವಿನ ಸಂಖ್ಯೆ: ಚೀನಾವನ್ನು ಹಿಂದಿಕ್ಕಿತು ಸ್ಪೇನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts