More

    ಕರೊನಾ ಸ್ಫೋಟ: ಒಂದೇ ದಿನ ಸಾವಿರದ ಸನಿಹ ಕೇಸ್ ದೃಢ- ಬೆಂಗಳೂರಿನಲ್ಲೆ ಗರಿಷ್ಠ 596

    ಬೆಂಗಳೂರು: ರಾಜ್ಯದಲ್ಲಿ ಇದುವರೆಗೂ 300-500ರ ಆಸುಪಾಸಿನಲ್ಲೇ ಇದ್ದ ಕರೋನಾ ಸೋಂಕು ಪ್ರಕರಣ ಶನಿವಾರ ಸ್ಫೋಟಗೊಂಡಿದ್ದು ನಿನ್ನೆ ಸಂಜೆ 5 ಗಂಟೆಯಿಂದ ಇಂದು ಸಂಜೆ 5 ಗಂಟೆ ತನಕದ 24 ಗಂಟೆ ಅವಧಿಯಲ್ಲಿ 918 ಹೊಸ ಪ್ರಕರಣಗಳು ಖಚಿತವಾಗಿವೆ. ಈ ಸ್ಫೋಟದ ಬಹುಪಾಲು ರಾಜ್ಯ ರಾಜಧಾನಿ ಬೆಂಗಳೂರಿನದ್ದೇ ಆಗಿದ್ದು ಒಂದೇ ದಿನ 596 ಪ್ರಕರಣ ದೃಢಪಟ್ಟಿದೆ. ಇದರೊಂದಿಗೆ ರಾಜ್ಯದಲ್ಲಿ ಕೋವಿಡ್ ಸೋಂಕಿತರ ಒಟ್ಟು ಪ್ರಕರಣ 11,923ಕ್ಕೆ ತಲುಪಿದೆ.

    ಇಂದು ಆಸ್ಪತ್ರೆಯಿಂದ 371 ಜನ ಸೋಂಕು ಮುಕ್ತರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಇದುವರೆಗೆ ಒಟ್ಟು 7,287 ಜನ ಸೋಂಕು ಮುಕ್ತರಾಗಿದ್ದಾರೆ. ಸಕ್ರಿಯವಾಗಿರುವ ಸೋಂಕಿತರ ಸಂಖ್ಯೆ 4441 ಆಗಿದೆ. ಇಂದು ಸೋಂಕಿನಿಂದ ಮೃತಪಟ್ಟವರ ಸಂಖ್ಯೆ 11 ಆಗಿದ್ದು ಒಟ್ಟು ಮರಣ ಪ್ರಮಾಣ 191 ಆಗಿದೆ. ಈ ಪೈಕಿ ನಾಲ್ವರು ಸೋಂಕುಪೀಡಿತರು ಅನ್ಯಕಾರಣಗಳಿಗೆ ಮೃತಪಟ್ಟಿದ್ದಾರೆ. ಇಂದಿನ ಮರಣ ಸಂಖ್ಯೆಯಲ್ಲಿ ಬೆಂಗಳೂರು ನಗರದಲ್ಲಿ 3, ಬೀದರ್ 3, ಕಲಬುರಗಿ 2, ಬಳ್ಳಾರಿ, ಗದಗ, ಧಾರವಾಡಗಳಲ್ಲಿ ತಲಾ 1 ಪ್ರಕರಣಗಳಿವೆ. ಸದ್ಯ ಐಸಿಯುನಲ್ಲಿ 197 ಸಕ್ರಿಯ ಸೋಂಕು ಪೀಡಿತರು ಚಿಕಿತ್ಸೆಯುತ್ತಿದ್ದಾರೆ.

    ಇದನ್ನೂ ಓದಿ: ಲಡಾಖ್​ನಲ್ಲಿ ಆಕ್ರಮಣಕಾರಿ ಮನೋಭಾವ ತೋರುತ್ತಿರುವುದಕ್ಕೆ ಚೀನಾ ಭಾರಿ ಬೆಲೆ ತೆರಬೇಕಾಗುತ್ತೆ

    ಜಿಲ್ಲಾವಾರು ಪಟ್ಟಿ ಗಮನಿಸಿದರೆ ಇಂದು ಕೂಡ ಬೆಂಗಳೂರು ನಂ.1 ಸ್ಥಾನದಲ್ಲಿದ್ದು ಗರಿಷ್ಠ 596 ಪ್ರಕರಣ ದೃಢವಾಗಿದೆ. ಇನ್ನುಳಿದಂತೆ, ದಕ್ಷಿಣ ಕನ್ನಡ 49, ಕಲಬುರಗಿ 33, ಬಳ್ಳಾರಿ, ಗದಗ 24 ಕೇಸ್​ಗಳೊಂದಿಗೆ ಟಾಪ್ 5ರ ಪಟ್ಟಿಯಲ್ಲಿವೆ. ಒಟ್ಟು ಪ್ರಕರಣಗಳ ಡೇಟಾ ಗಮನಿಸಿದರೆ ಬೆಂಗಳೂರು 2,531, ಕಲಬರುಗಿ 1364, ಉಡುಪಿ 1139, ಯಾದಗಿರಿ 929, ಬಳ್ಳಾರಿ 626 ಕೇಸ್​ಗಳೊಂದಿಗೆ ಟಾಪ್ 5ರ ಪಟ್ಟಿಯಲ್ಲಿವೆ.

    VIDEO: ಚಿನ್ನದ ಚೆಂಡಿನಂತೆ ಕಾಣುವ ಸೂರ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts