More

    ಒಂದೇ ಒಂದು ಕಟ್ಟು ಕೊತ್ತಂಬರಿಯ ಬೆಲೆ 90 ರೂ.!

    ಹುಬ್ಬಳ್ಳಿ: ಇಲ್ಲಿನ ಮಾರುಕಟ್ಟೆಯಲ್ಲಿ ಕೊತ್ತಂಬರಿ ಕಟ್ಟು ಶನಿವಾರ ದಾಖಲೆಯ ದರಕ್ಕೆ ಮಾರಾಟವಾಗಿದೆ! ಇದೇ ಮೊದಲ ಬಾರಿಗೆ ಕೊತ್ತಂಬರಿಯ ಬೆಲೆ ಪ್ರತಿ ಕಟ್ಟಿಗೆ 80-90 ರೂ.ವರೆಗೂ ಏರಿಕೆಯಾಗಿದೆ.

    ಕೆಲ ದಿನಗಳ ಹಿಂದೆ ಸುರಿದ ಧಾರಾಕಾರ ಮಳೆಗೆ ಕೊತ್ತಂಬರಿ ಸೇರಿ ಇತರ ಸೊಪ್ಪು ಹಾಗೂ ತರಕಾರಿ ಬೆಳೆ ಹಾನಿಗೀಡಾಗಿದೆ. ಹೀಗಾಗಿ ಮಾರುಕಟ್ಟೆಗೆ ಅತಿ ಕಡಿಮೆ ಪ್ರಮಾಣದಲ್ಲಿ ಸೊಪ್ಪು ಬರುತ್ತಿದೆ. ಈ ಮಧ್ಯೆ ಸೋಂಕಿನ ಭೀತಿಯಿಂದಾಗಿ ಭಾನುವಾರ ಕರ್ಫ್ಯೂ ಕರೆ ನೀಡಲಾಗಿದೆ.

    ಇದನ್ನೂ ಓದಿ ಒಡಿಶಾ ಕಾರ್ಮಿಕನಿಗೆ ಚಿಕಿತ್ಸೆ ನೀಡಿದ ಸಚಿವ ಡಾ.ಸುಧಾಕರ್

    ರಂಜಾನ್ ಆಚರಣೆಗೆ ಕೊತ್ತಂಬರಿ ಹಾಗೂ ಇತರ ತರಕಾರಿ ಸಿಗುವುದೋ ಇಲ್ಲವೋ ಎಂಬ ಕಾರಣಕ್ಕೆ ಜನರು ಶನಿವಾರವೇ ಅಗತ್ಯ ವಸ್ತುಗಳನ್ನು ಖರೀದಿಸಿದ್ದಾರೆ. ರಂಜಾನ್ ಹಬ್ಬದ ಅಡುಗೆ ತಯಾರಿಯಲ್ಲಿ ಕೊತ್ತಂಬರಿಗೆ ಪ್ರಮುಖ ಪಾತ್ರ.

    ಶನಿವಾರ ಬೆಳಗ್ಗೆ ಪ್ರತಿ ಕಟ್ಟಿಗೆ 90 ರೂ.ಗಳವರೆಗೆ ಮಾರಾಟಗೊಂಡಿತ್ತು. ಮಧ್ಯಾಹ್ನದ ನಂತರ ಜನತಾ ಬಜಾರ, ಎಂ.ಜಿ. ಮಾರುಕಟ್ಟೆ ಹಾಗೂ ಬಡಾವಣೆಗಳಲ್ಲಿ ತರಕಾರಿ ಮಾರುತ್ತಿದ್ದವರ ಬಳಿ ಕೊತ್ತಂಬರಿ ಖಾಲಿಯಾಗಿತ್ತು.

    ಇದನ್ನೂ ಓದಿ ಎರಡ್ಮೂರು ವರ್ಷದ ಮಗುವನ್ನೂ ಬಿಡಲಿಲ್ಲ ಕರೊನಾ…

    ಪುದಿನಾ ಸೊಪ್ಪು ಸಹ ಪ್ರತಿ ಕಟ್ಟಿಗೆ 60-70 ರೂ.ಗಳಂತೆ ಮಾರಾಟವಾಗಿದೆ. ಬೀನ್ಸ್ ಪ್ರತಿ ಕೆಜಿಗೆ 120 ರೂ.ಗಳಂತೆ, ಕ್ಯಾಬೇಜ್ 40-50 ರೂ.ಗೆ ಒಂದರಂತೆ, ಹೀರೆಕಾಯಿ 60 ರೂ.ಗೆ ಪ್ರತಿ ಕೆಜಿಯಂತೆ ಮಾರಾಟವಾಗಿವೆ.

    ಸುರಕುಂಬ ತಯಾರಿಕೆಗೆ ಬೇಕಾದ ಶಾವಿಗೆ, ಏಲಕ್ಕಿ, ಲವಂಗ, ಗೋಡಂಬಿ, ಒಣ ದ್ರಾಕ್ಷಿಯ ಬೆಲೆಗಳೂ ಹೆಚ್ಚಿದ್ದವು. ಸೋಮವಾರ ಬೆಳಗ್ಗೆ ಹಾಲು ಸಿಗುವುದೋ ಅಥವಾ ಇಲ್ಲವೋ ಎಂಬ ಆತಂಕದಿಂದ ಅನೇಕರು ಶನಿವಾರವೇ ಸಾಕಷ್ಟು ಹಾಲು ಖರೀದಿಸಿದ್ದಾರೆ.

    ಇದನ್ನೂ ಓದಿರಿ ರಾಮತೀರ್ಥ ಹೊಂಡದಲ್ಲಿ ಸಾವಿರಾರು ಮೀನುಗಳ ಮಾರಣಹೋಮ!

    ಮೂರ‌್ನಾಲ್ಕು ದಿನಗಳಲ್ಲಿ ಸಂಪೂರ್ಣ ಸಡಿಲವಾಗಲಿದೆ ಲಾಕ್‌ಡೌನ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts