More

    ಪ್ರತಿ ಭಾರತೀಯ ಸಂವಿಧಾನ ತಿಳಿಬೇಕು

    ಯಲಬುರ್ಗಾ: ವಿದ್ಯಾರ್ಥಿಗಳಿಗೆ ಕಾನೂನಿನ ಸಾಮಾನ್ಯ ಜ್ಞಾನ ಅವಶ್ಯ ಎಂದು ಜಿಲ್ಲಾ ಹಿರಿಯ ಸಿವಿಲ್ ನ್ಯಾಯಾಧೀಶ ದೇವೇಂದ್ರ ಪಂಡಿತ್ ಹೇಳಿದರು.

    ಇದನ್ನೂ ಓದಿ:ಶಾಲಾ ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿಕೆ; ಎಲ್ಲ ಶಾಲೆಗಳಲ್ಲಿ ಸಂವಿಧಾನ ವಾಚನ ಸೆ. 5ರಂದು

    ತಾಲೂಕಿನ ಹಿರೇವಂಕಲಕುಂಟಾ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜು (ಪ್ರೌಢ ವಿಭಾಗ)ನಲ್ಲಿ ಕಾನೂನು ಸೇವಾ ಸಮಿತಿ, ವಕೀಲರ ಸಂಘ ಮಂಗಳವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಸಂವಿಧಾನ ಬಗ್ಗೆ ಹೇಳಲಾಗುವುದು. ಡಾ.ಅಂಬೇಡ್ಕರ ನೀಡಿರುವ ಸಂವಿಧಾನವನ್ನು ಪ್ರತಿಯೊಬ್ಬರೂ ಓದಿ. ಸಂವಿಧಾನದ ಮೂಲಭೂತ ಹಕ್ಕುಗಳು ಮತ್ತು ಕರ್ತವ್ಯಗಳ ಬಗ್ಗೆ ತಿಳಿಯಿರಿ.

    ನೂನಿನ ಮುಂದೆ ಎಲ್ಲರೂ ಸರಿಸಮಾನರು. ಯಾವುದೇ ಬೇಧ, ಭಾವ, ತಾರತಮ್ಯ ವಿಲ್ಲದೇ ಎಲ್ಲರಿಗೂ ನ್ಯಾಯ ಒದಗಿಸುವ ವ್ಯವಸ್ಥೆ ಭಾರತದ ನ್ಯಾಯಾಂಗದಲ್ಲಿದೆ. ವಿದ್ಯಾರ್ಥಿಗಳು ರಸ್ತೆ ನಿಯಮ ಕಡ್ಡಾಯವಾಗಿ ಪಾಲಿಸಬೇಕು ಎಂದರು.

    ಹಿರಿಯ ವಕೀಲ ಮಲ್ಲನಗೌಡ ಪಾಟೀಲ್, ನಿವೃತ್ತ ಉಪಪ್ರಾಚಾರ್ಯ ಚಂದ್ರಕಾಂತಯ್ಯ ಕಲ್ಯಾಣಮಠ, ಉಪಪ್ರಾಚಾರ್ಯ ಬಾಬುಸಾಬ್ ಲೈನದಾರ, ಎಎಸ್‌ಐ ಶರಣಪ್ಪ, ಕಾ ಸೇವಾ ಪ್ರಾಧಿಕಾರ ಸಿಬ್ಬಂದಿ ವೆಂಕಟೇಶ, ರಾಘವೇಂದ್ರ ಕೊಳಿಹಾಳ, ಶಿಕ್ಷಕರಾದ ಬಾಳಪ್ಪ ಕಲ್ಮನಿ, ತಿಮ್ಮಣ್ಣ ಜಗ್ಗಲ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts