More

    ನಾಳೆ ಮೂರ್ಖರನ್ನಾಗಿ ಮಾಡುವುದಕ್ಕೆ ಹೊರಟು ಮೂರ್ಖರಾಗಬೇಡಿ- ಮಹಾ ಪೊಲೀಸರ ಎಚ್ಚರಿಕೆ

    ಪುಣೆ: ಕರೊನಾ COVID19 ಸೋಂಕು ಮತ್ತು ಅದಕ್ಕೆ ಸಂಬಂಧಿತ ವಿಷಯಗಳನ್ನು ಮುಂದಿಟ್ಟುಕೊಂಡು ಏಪ್ರಿಲ್ 1ರಂದು ಯಾರನ್ನೂ ಮೂರ್ಖರನ್ನಾಗಿ ಮಾಡಲು ಹೊರಡಬೇಡಿ. ಸಾಮಾಜಿಕ ಜಾಲತಾಣಗಳಲ್ಲೂ ಸುಳ್ಳು ಸುದ್ದಿಗಳನ್ನು ಹರಡಬೇಡಿ. ಇದು ಮೂರ್ಖರನ್ನಾಗಿಸುವ ಸಂದರ್ಭವಲ್ಲ ಎಂದು ಮಹಾರಾಷ್ಟ್ರ ಪೊಲೀಸರು ಎಚ್ಚರಿಸಿದ್ದಾರೆ.

    ಈ ಸಂಬಂಧ ಪುಣೆ ಗ್ರಾಮಾಂತರ ಪೊಲೀಸರು ಪ್ರಕಟಣೆಯನ್ನು ಹೊರಡಿಸಿದ್ದು, ಒಂದೊಮ್ಮೆ ಸಾಮಾಜಿಕ ಜಾಲತಾಣಗಳಲ್ಲಿ ಏಪ್ರಿಲ್ ಒಂದು ಎಂದುಕೊಂಡು ಜನರನ್ನು ಮೂರ್ಖರನ್ನಾಗಿಸಲು ಸುಳ್ಳು ಸುದ್ದಿ ಹಬ್ಬಿಸಿದರೆ ಐಪಿಸಿ ಸೆಕ್ಷನ್​ 188ರ ಪ್ರಕಾರ ಅಂಥ ವ್ಯಕ್ತಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಎಚ್ಚರಿಸಿದ್ದಾರೆ.

    ಸೆಕ್ಷನ್ 188ರ ಪ್ರಕಾರ, ಸರ್ಕಾರಿ ಅಧಿಕಾರಿ ಹೊರಡಿಸಿರುವ ಯಾವುದೇ ಆದೇಶವನ್ನು ಉಲ್ಲಂಘಿಸಿದರೆ ನೀಡಬಹುದಾದ ಶಿಕ್ಷೆಯ ವಿವರ ಇದರಲ್ಲಿದೆ. ಇದರಂತೆ, ಗರಿಷ್ಠ 6 ತಿಂಗಳು ಸಜೆ ಅಥವಾ 1,000 ರೂಪಾಯಿ ದಂಡ ಅಥವಾ ಎರಡನ್ನೂ ವಿಧಿಸುವ ಅವಕಾಶವಿದೆ.

    ಸಾಮಾನ್ಯವಾಗಿ ಏಪ್ರಿಲ್ 1ರಂದು ಜನ ತಮ್ಮ ಸ್ನೇಹಿತರು, ಕುಟುಂಬ ವರ್ಗವನ್ನು ಮೂರ್ಖರನ್ನಾಗಿಸುವುದು ವಾಡಿಕೆ. ಇಂಥ ಆಟಗಳು ಈ ಸಂದರ್ಭದಲ್ಲಿ ಅತಿರೇಕಕ್ಕೆ ಹೋಗುವ ಸಾಧ್ಯತೆ ಇದೆ. ಹೀಗಾಗಿ ಈ ಬಾರಿ ಅದಕ್ಕೆ ಅವಕಾಶವಿಲ್ಲ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. (ಏಜೆನ್ಸೀಸ್)

    ವಾವ್​… ನನ್ನ ಟೀ-ಶರ್ಟ್​ ಮೇಲೇಕೆ ನಿಮ್ಮ ಲುಕ್​ : ಸನ್ನಿ ಲಿಯೋನ್​ ಅವರ ಒಗಟಿನ ಮಾತಿಗೂ ಲಾಕ್​ಡೌನ್​ಗೂ ಇದೆ ಲಿಂಕ್!​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts