More

    ಕೆಂಡ ಹಾಯ್ದ ಪೊಲೀಸ್​ ಸಿಬ್ಬಂದಿಗೆ ಎದುರಾಯ್ತು ಸಂಕಷ್ಟ! ಉನ್ನತ ಅಧಿಕಾರಿಗಳ ಹೇಳಿಕೆಯಿಂದ ನಿಟ್ಟುಸಿರು

    ಹೈದರಾಬಾದ್​: ಹಬ್ಬಗಳ ಆಚರಣೆ ಭಾಗವಾಗಿ ಭಕ್ತರು ಬರಿಗಾಲಲ್ಲಿ ಕೆಂಡ ಹಾಯುವುದು ಅಥವಾ ಕೊಂಡ ಹಾಯುವುದನ್ನು ನಾವೆಲ್ಲರು ನೋಡಿರುತ್ತೇವೆ. ಇಂತಹ ಆಚರಣೆಯ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪೊಲೀಸ್ ಅಧಿಕಾರಿಗಳು ಕೆಂಡ ಹಾಯುತ್ತಿರುವ ದೃಶ್ಯ ಭಾರಿ ಚರ್ಚೆಗೆ ಗ್ರಾಸವಾಗಿದೆ. ಈ ಘಟನೆ ತೆಲಂಗಾಣದ ನಲ್ಗೊಂಡ ಜಿಲ್ಲೆಯಲ್ಲಿ ನಡೆದಿದೆ.

    ವೈರಲ್​ ಆಗಿರುವ ವಿಡಿಯೋದಲ್ಲಿ ಪೊಲೀಸ್ ಸಮವಸ್ತ್ರದಲ್ಲಿರುವ ಅಧಿಕಾರಿಗಳು ಸುಡುವ ಕೆಂಡಗಳ ಮೇಲೆ ಬರಿಗಾಲಲ್ಲಿ ನಡೆಯುವುದನ್ನು ಕಾಣಬಹುದು. ನಾರ್ಕೆಟ್‌ಪಲ್ಲಿ ರಾಮಲಿಂಗೇಶ್ವರ ಸ್ವಾಮಿ ದೇವಸ್ಥಾನದಲ್ಲಿ ‘ಶ್ರೀ ಪಾರ್ವತಿ ಜಡಲ’ ಕಾರ್ಯಕ್ರಮ ನಡೆಯಿತು. ಇದರ ಅಂಗವಾಗಿ ನಡೆದ ಕೊಂಡೊತ್ಸವದಲ್ಲಿ ಪೊಲೀಸ್​ ಸಿಬ್ಬಂದಿ ಕೆಂಡ ಹಾಯ್ದಿದ್ದಾರೆ. ಬುಧವಾರ ವಿಡಿಯೋ ಬಿಡುಗಡೆಯಾದ ಬಳಿಕ ಹಲವು ಟೀಕೆಗಳು ವ್ಯಕ್ತವಾಗಿವೆ. ಆದರೆ, “ಮೂಢನಂಬಿಕೆಗಳ” ಬಗ್ಗೆ ಜಾಗೃತಿ ಮೂಡಿಸಲು ಇದನ್ನು ಮಾಡಲಾಗಿದೆ ಎಂದು ಕೆಲವರು ವರದಿ ಮಾಡಿದ್ದಾರೆ.

    ಕೆಂಡ ಹಾಯ್ದ ಪೊಲೀಸ್​ ಸಿಬ್ಬಂದಿಗೆ ಇದೀಗ ಸಂಕಷ್ಟ ಎದುರಾಗಿದೆ. ವಿಡಿಯೋ ವೈರಲ್ ಆದ ನಂತರ ಇಲಾಖಾ ಮಟ್ಟದಲ್ಲಿ ತನಿಖೆ ಆರಂಭಿಸಲಾಗಿದೆ ಎಂಬ ಮಾತುಗಳು ಕೇಳಿಬರುತ್ತಿದೆ. ಆದರೆ, ಇದಕ್ಕೂ ಇಲಾಖೆಗೂ ಯಾವುದೇ ಸಂಬಂಧವಿಲ್ಲ, ಇದು ಅವರ ವೈಯಕ್ತಿಕ ವಿಚಾರ ಎಂದು ಉನ್ನತ ಪೊಲೀಸ್ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಹೀಗಾಗಿ ಕೆಂಡ ಹಾಯ್ದ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.

    ಅಂದಹಾಗೆ ಕೆಂಡ ಹಾಯುವುದು ಅಥವಾ ಕೊಂಡ ಹಾಯುವುದು ಎನ್ನುವ ಆಚರಣೆ ಕರ್ನಾಟಕ ರಾಜ್ಯದ ಅನೇಕ ಕಡೆಗಳಲ್ಲಿಯೂ ಆಚರಿಸಲ್ಪಡುತ್ತದೆ. ದೇಶದ ಬೇರೆ ಬೇರೆ ರಾಜ್ಯಗಳಲ್ಲೂ ಈ ರೀತಿಯ ಆಚರಣೆ ನಡೆಯುತ್ತದೆ. ದೇವರ ಪ್ರೀತ್ಯರ್ಥವಾಗಿ, ನಮ್ಮ ಕಷ್ಟ ಕಳೆಯಲಿ ಅಂತ ಜನರು ಈ ರೀತಿಯ ಆಚರಣೆ ಮಾಡುತ್ತಾರೆ. ಕೊಂಡ ಹಾಯುವುದಾಗಿ ಕೆಲವರು ಹರಕೆ ಸಹ ಹೊತ್ತುಕೊಂಡಿರುತ್ತಾರೆ. (ಏಜೆನ್ಸೀಸ್​)

    ಮೈಕಲ್​ ಜಾಕ್ಸನ್​ ಇನ್ನೂ ಸತ್ತಿಲ್ಲ! ರೀ ಎಂಟ್ರಿ ಕೊಡಲು ರಹಸ್ಯವಾಗಿ ನಡೆಯುತ್ತಿದೆ ಭರ್ಜರಿ ತಯಾರಿ?

    ನಿಮ್ಮ ಫೋಟೋ ನನ್ನ ಆಟೋದಲ್ಲಿ ಏಕಿದೆ ಗೊತ್ತಾ? ಅನುಪಮಾ ವಿರುದ್ಧ ರೊಚ್ಚಿಗೆದ್ದ ಅಭಿಮಾನಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts