More

    ಸಹಕಾರ ರಂಗದಲ್ಲಿ ಬೇಡ ರಾಜಕೀಯ

    ಹಿರೇಬಾಗೇವಾಡಿ: ಸಹಕಾರ ರಂಗದಲ್ಲಿ ರಾಜಕೀಯ ಬೆರೆಸಿದರೆ ರೈತರಿಗೆ ಮೋಸ ಮಾಡಿದಂತಾಗುತ್ತದೆ. ರೈತರ ಒಳತಿಗೋಸ್ಕರ ಪ್ರಧಾನಿ ಮೋದಿ ಅವರು ಕೃಷಿ ಮಸೂದೆ ಜಾರಿಗೊಳಿಸಿದ್ದಾರೆ. ಆದರೆ, ದಲ್ಲಾಳಿಗಳು ಮುಗ್ಧ ರೈತರನ್ನು ಬಳಸಿಕೊಂಡು ಕೃಷಿ ಮಸೂದೆ ವಿರೋಧಿಸಿ ಪ್ರತಿಭಟನೆ ಮಾಡುತ್ತಿದ್ದಾರೆ. ಇದಕ್ಕೆ ರೈತರು ಬೆಂಬಲ ನೀಡಬಾರದು ಎಂದು ಬಿಡಿಸಿಸಿ ಬ್ಯಾಂಕ್ ನಿರ್ದೇಶಕ ರಾಜೇಂದ್ರ ಅಂಕಲಗಿ ಹೇಳಿದರು.

    ಸಮೀಪದ ಬೆಂಡಿಗೇರಿ ಗ್ರಾಮದಲ್ಲಿ ಸಂಗಮೇಶ್ವರ ಕೃಷಿ ಪತ್ತಿನ ಸಹಕಾರ ಸಂಘದ ವತಿಯಿಂದ ಬಿಡಿಸಿಸಿ ಬ್ಯಾಂಕ್ ನಿರ್ದೇಶಕರು, ಟಿಎಪಿಸಿಎಂಎಸ್ ಅಧ್ಯಕ್ಷರು ಹಾಗೂ ನಿರ್ದೇಶಕರು, ಬೆಂಡಿಗೇರಿ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷರು, ನಿರ್ದೇಶಕರು ಮತ್ತು ಬೆಂಡಿಗೇರಿ ಗ್ರಾಪಂಗೆ ಸದಸ್ಯರಿಗೆ ಮಂಗಳವಾರ ಏರ್ಪಡಿಸಿದ್ದ ಸನ್ಮಾನ ಸಮಾರಂಭದಲ್ಲಿ ಅವರು ಮಾತನಾಡಿದರು.

    ಸಹಕಾರಿ ಸಂಘ ಸ್ವಂತ ಜಾಗ ಹೊಂದಿದ್ದರೆ ಸಂಘದ ಕಚೇರಿ, ಗೋದಾಮು ನಿರ್ಮಿಸಿಕೊಳ್ಳಲು ಕೇಂದ್ರ ಸರ್ಕಾರ 1 ಕೋಟಿ ರೂ. ಅನುದಾನ ನೀಡುತ್ತದೆ. ಅದರಲ್ಲಿ 25 ಲಕ್ಷ ರೂ. ಸಹಾಯಧನ ಹಾಗೂ ಉಳಿದ ಹಣ ಶೇ. 4ರ ಬಡ್ಡಿದರಲ್ಲಿ ಬಳಸಿಕೊಳ್ಳಬಹುದು ಎಂದು ಮಾಹಿತಿ ನೀಡಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಹಾಗೂ ಟಿಎಪಿಸಿಎಂಎಸ್ ಅಧ್ಯಕ್ಷ ಶಂಕರಗೌಡ ಪಾಟೀಲ ಮಾತನಾಡಿ, ಈ ವರ್ಷ ರೈತರಿಗೆ ಬೇಕಾಗುವಷ್ಟು ರಸಗೊಬ್ಬರ ಮುಂಗಡವಾಗಿ ಶೇಖರಿಸಿ ರಿಯಾಯಿತಿ ದರದಲ್ಲಿ ವಿತರಿಸಲಾಗುವುದುಎಂದರು. ಸಂಗಮೇಶ್ವರ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸಂತೋಷ ಅಂಗಡಿ ಮಾತನಾಡಿದರು.

    ಟಿಎಪಿಸಿಎಂಎಸ್ ನಿರ್ದೇಶಕರಾದ ಮಹಾಂತೇಶ ಅಲಾಬದಿ, ಉಳವಪ್ಪ ನಂದಿ, ಶಂಕರ ಶಿಂತ್ರಿ, ಗ್ರಾಪಂ ಅಧ್ಯಕ್ಷೆ ನೀಲವ್ವ ಹುಲಿಕವಿ, ದುಂಡಪ್ಪ ಮೆಳೇದ, ನೀಲಪ್ಪ ಅರಗಂಜಿ, ಮಲ್ಲಪ್ಪ ಮಲ್ಲಕ್ಕನವರ, ಮಲ್ಲಪ್ಪ ಕರೆಪ್ಪನವರ, ರಮೇಶ ಅಕ್ಕಿ, ಶ್ರೀಕಾಂತಗೌಡ ಪಾಟೀಲ, ಶಿವನಗೌಡ ಮೆಳೇದ, ಕೀರ ಬಾಳೆಕುಂದರಗಿ, ಚೇತನ್ ಅಂಗಡಿ ಇತರರನ್ನು ಸನ್ಮಾನಿಸಲಾಯಿತು. ಬಿಜೆಪಿ ಬೆಳಗಾವಿ ಗ್ರಾಮೀಣ ಮಂಡಲ ಪ್ರಧಾನ ಕಾರ್ಯದರ್ಶಿ ಬಸವರಾಜ ಡಮ್ಮಣಗಿ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಶಿವಾನಂದ ಹುಕ್ಕೇರಿ ಸ್ವಾಗತಿಸಿ, ವಂದಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts