More

    ಮಣಿಪುರದಲ್ಲಿ ಮೈತೇಯಿಗಳ ಮೇಲೆ ದೌರ್ಜನ್ಯ ನಿರಂತರ, ಕುಕಿ ಸಮುದಾಯದಿಂದ ಅತ್ಯಾಚಾರ, ಕೊಲೆ, ಸುಲಿಗೆ- ಮೇಜರ್ ಮೋತಿಮಾಲಾ ಗ್ಯಾಂಗೋಮ್ ಹೇಳಿಕೆ

    ಮಂಗಳೂರು: ಮಣಿಪುರದಲ್ಲಿ ಮೈತೇಯಿ ಸಮುದಾಯದ ಮೇಲೆ ನಿರಂತರ ದೌರ್ಜನ್ಯ ನಡೆಯುತ್ತಿದ್ದರೂ ಹೊರಜಗತ್ತಿಗೆ ಇದರ ಅರಿವೇ ಇಲ್ಲದಾಗಿದೆ ಎಂದು ಮಣಿಪುರದ ಪ್ರಥಮ ರಕ್ಷಾಮಂತ್ರಿ ಪದಕ ವಿಜೇತ (ಎನ್‌ಸಿಸಿ) ಮೇಜರ್ ಮೋತಿಮಾಲಾ ಗ್ಯಾಂಗೋಮ್ ಹೇಳಿದರು.

    ನಮೋ 2.0 ವತಿಯಿಂದ ಡೊಂಗರಕೇರಿಯಲ್ಲಿ ಶುಕ್ರವಾರ ‘ಮಣಿಪುರದ ಹಿಂದಿನ ಕಥೆ, ವಾಸ್ತವದ ವ್ಯಥೆ ಸತ್ಯ ಅರಿಯುವತ್ತ ಹೆಜ್ಜೆ’ ಎಂಬ ವಿಷಯದ ಸಂವಾದದಲ್ಲಿ ಮಣಿಪುರದ ಸ್ಥಿತಿಯ ಬಗ್ಗೆ ಬೆಳಕು ಚೆಲ್ಲಿದರು.

    ಮೈತೇಯಿ ಸಮುದಾಯದ ಮೇಲೆ ಕುಕಿ ಭಯೋತ್ಪಾದಕರಿಂದ ನಿರಂತರ ಹಲ್ಲೆ, ಅತ್ಯಾಚಾರ, ಕೊಲೆ, ಸುಲಿಗೆ ನಡೆಯುತ್ತಿದೆ. ಆಯುಧಗಳನ್ನು ಹಿಡಿದು ಮನೆಗಳ ಮೇಲೆ ದಾಳಿ ಮಾಡಿ ಸುಟ್ಟು ಹಾಕಲಾಗುತ್ತಿದೆ. ಮಣಿಪುರದಲ್ಲಿ ಪೋಪಿ ಎಂಬ ಗಾಂಜಾ ಅಫೀಮು ಬೆಳೆಸಲಾಗುತ್ತಿದೆ. ಅಲ್ಲಿನ ಯುವ ಸಮುದಾಯ ಅದರ ಬೆನ್ನ ಹಿಂದೆ ಬಿದ್ದಿದೆ. ಮೈತೇಯಿ ಸಮುದಾಯದ ಸಂಪ್ರದಾಯ ಮತ್ತು ಸಂಸ್ಕೃತಿಗಳ ಮೇಲೂ ದಾಳಿ ಮಾಡಲಾಗುತ್ತಿದೆ. ಮಣಿಪುರ ಗಡಿ ಮ್ಯಾನ್ಮಾರ್ ದೇಶದೊಂದಿಗೆ ಹಂಚಿಕೊಂಡಿದೆ. ಇದರಿಂದ ವಲಸಿಗರೂ ಮಣಿಪುರ ಪ್ರವೇಶಿಸಿ ಮೂಲ ನಿವಾಸಿಗಳಾದ ಮೈತೇಯಿ ಸಮುದಾಯದ ಮೇಲೆ ದಾಳಿ ಮಾಡುತ್ತಿದ್ದಾರೆ ಎಂದು ವಿವರಿಸಿದರು.

    ಕಾರ್ಯಕ್ರಮ ಸಂಯೋಜಕಿ ಭಾರತಿ ಸಂಜಯ್ ಪ್ರಭು ಸ್ವಾಗತಿಸಿದರು. ಅರುಣ್ ಜಿ.ಶೇಟ್ ವಂದಿಸಿದರು.

    ಇಂಫಾಲದಲ್ಲಿ ಪ್ರತಿದಿನವೂ ಬುಲೆಟ್ ಸದ್ದು

    ಮೈತೇಯಿ ಸಮುದಾಯದ ಬಳಿ ಹಣ ಇಲ್ಲ. 2011ರಲ್ಲಿ ಜನಸಂಖ್ಯೆಯ ಗಣತಿ ಆಧಾರದಲ್ಲಿ 30 ಲಕ್ಷ ಜನಸಂಖ್ಯೆ ಇತ್ತು. ಹತ್ತು ವರ್ಷಗಳಲ್ಲಿ ಬೇರೆ ಬೇರೆ ಪ್ರದೇಶಗಳಿಂದ ಕುಕಿ ಸಮುದಾಯದವರು ದೊಡ್ಡ ಸಂಖ್ಯೆಯಲ್ಲಿ ವಲಸೆ ಬಂದಿದ್ದು, ಈಗ ಅವರ ಸಂಖ್ಯೆ ಅಧಿಕವಾಗಿದೆ ಎಂದು ಮಣಿಪುರ ಸಂಸ್ಕೃತಿ ವಿದ್ಯಾಲಯದ ಕಲಾ ಅಕಾಡೆಮಿ ಯುವ ಪ್ರತಿಭಾ ಪ್ರಶಸ್ತಿ ಪುರಸ್ಕೃತೆ ಡಾ.ಉರ್ಮಿಕಾ ಮಯ್ಬಮ ಹೇಳಿದರು. ಇಂಫಾಲದಲ್ಲಿ ಬುಲೆಟ್ ಸದ್ದು ನಿತ್ಯ ಕೇಳುತ್ತಿರುತ್ತದೆ. ಅಂತಾರಾಷ್ಟ್ರೀಯ ಮಾಧ್ಯಮಗಳಿಂದ ಏಕಪಕ್ಷೀಯ ವಿಷಯಗಳು ಮಾತ್ರ ಹೊರಪ್ರಪಂಚಕ್ಕೆ ತಿಳಿಯುತ್ತಿದೆ. ಮೇ 3ರ ಮೊದಲೇ ಸರ್ಕಾರಿ ಹುದ್ದೆಯಲ್ಲಿರುವ ಕುಕಿ ಅಧಿಕಾರಿಗಳು ರಜೆ ಮೇಲೆ ತೆರಳಿದ್ದಾರೆ. 10 ಕುಕಿ ಶಾಸಕರು ಮಣಿಪುರದ ಪಕ್ಕದ ಮಿಜೋರಾಂಗೆ ಹೋಗಿದ್ದಾರೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts