More

    ಸಮಾಜಕ್ಕೆ ಕೊಡುಗೆ ನೀಡಿ ಋಣ ತೀರಿಸಿ

    ಶೃಂಗೇರಿ: ಶಿಕ್ಷಣ ಜೀವನದ ಆಸ್ತಿಯಾಗಿದ್ದು, ವಿದ್ಯಾರ್ಥಿಗಳು ಶಿಕ್ಷಣದೊಂದಿಗೆ ಸಂಸ್ಕಾರ ಬೆಳೆಸಿಕೊಂಡು ಉತ್ತಮ ಪ್ರಜೆಗಳಾಗಬೇಕು ಎಂದು ತಾಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಅಗೊಸೊಳ್ಳಿ ನಾರಾಯಣ ಹೇಳಿದರು.

    ಶನಿವಾರ ಆರ್ಯ ಈಡಿಗರ ಸಂಘದಿಂದ ಏರ್ಪಡಿಸಿದ್ದ ಕ್ಷೇತ್ರ ಮಟ್ಟದ ವಿದ್ಯಾರ್ಥಿ ವೇತನ ವಿತರಣೆ ಮತ್ತು ಗಣ್ಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
    ಬೆಂಗಳೂರಿನ ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದಿಂದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ. ಉದ್ಯೋಗ ಪಡೆದ ನಂತರ ಸಮಾಜಕ್ಕೆ ಕೊಡುಗೆ ನೀಡುವ ಮೂಲಕ ಋಣ ತೀರಿಸಬೇಕು. ನಮ್ಮ ಸಮಾಜದಿಂದ ಮನೆಯಿಲ್ಲದೆ ತೊಂದರೆಗೆ ಒಳಗಾಗಿದ್ದ ಅಂಗವಿಕಲೆ ಬೋಳೂರು ಶಶಿಕಲಾ ಕುಟುಂಬಕ್ಕೆ ಮನೆ ನಿರ್ಮಿಸಿಕೊಡಲಾಗಿದೆ. ಇಬ್ಬರು ರೋಗಿಗಳಿಗೆ ಆರೋಗ್ಯ ನಿಧಿ ನೀಡಲಾಗಿದೆ. ಸಂಘದ ಸದಸ್ಯರು ಸಂಘದ ಚಟುವಟಿಕೆಯಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಸಂಘವನ್ನು ಸದೃಢಗೊಳಿಸಬೇಕು ಎಂದು ಹೇಳಿದರು.
    ಜೆ.ಪಿ.ನಾರಾಯಣಸ್ವಾಮಿ ಪ್ರತಿಷ್ಠಾನದ ಎಂ.ಆರ್.ಪೂರ್ಣೇಶ್ ಮಾತನಾಡಿ, ಛಲದಿಂದ ಸಾಧಿಸಿ ತೋರಿಸಿದ ಜೆ.ಪಿ.ನಾರಾಯಣ ಸ್ವಾಮಿ ಸ್ಮರಣೆಯಲ್ಲಿ ಪ್ರತಿಷ್ಠಾನ ಸ್ಥಾಪಿಸಲಾಗಿದೆ. ಪ್ರತಿಷ್ಠಾನದಿಂದ ಪ್ರತಿ ವರ್ಷ ಸಮಾಜದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುತ್ತಿದೆ. ರಾಜ್ಯಾದ್ಯಂತ ಇರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಆರ್ಥಿಕ ಸಹಕಾರ ನೀಡಲಾಗುತ್ತಿದೆ. ವೃದ್ಧರಿಗೆ ಪ್ರತಿ ತಿಂಗಳೂ ನೆರವು ಸೇರಿದಂತೆ, ವಿದ್ಯಾರ್ಥಿ ನಿಲಯಗಳಿಗೆ ನೆರವು ನೀಡಲಾಗಿದೆ ಎಂದರು.
    ವಿದ್ಯಾರ್ಥಿಗಳಿಗೆ ಸಹಾಯಧನದ ಚೆಕ್ ವಿತರಿಸಲಾಯಿತು. ವಿದ್ಯಾರಣ್ಯಪುರ ಗ್ರಾಪಂ ಅಧ್ಯಕ್ಷ ಪ್ರವೀಣ ಪೂಜಾರಿ, ಧರೆಕೊಪ್ಪ ಗ್ರಾಪಂ ಅಧ್ಯಕ್ಷೆ ರಂಜಿತಾ ಮಹೇಶ್ , ಮರ್ಕಲ್ ಗ್ರಾಪಂ ಸದಸ್ಯೆ ಪ್ರಿಯಾ ಮಂಜುನಾಥ್ ಅವರನ್ನು ಗೌರವಿಸಲಾಯಿತು. ವಿದ್ಯಾರ್ಥಿಗಳಾದ ಆಶಿಕ್ ಮತ್ತು ಸ್ಫ್ಪೂರ್ತಿ ಅನಿಸಿಕೆ ವ್ಯಕ್ತಪಡಿಸಿದರು.
    ಸಮಾಜದ ಮುಖಂಡರಾದ ಕೊಪ್ಪ ಬಿ.ಟಿ.ನಾರಾಯಣ, ಲಕ್ಷ್ಮಣನಾಯ್ಕ, ಜಿ.ಎನ್.ಸುಬ್ರಹ್ಮಣ್ಯ, ಕೃಷ್ಣ, ಅನಿತಾ ಗುಬ್ಬಗೋಡು, ಕಿಕ್ರೆ ಚಿನ್ನಯ್ಯನಾಯ್ಕ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts