More

    ಗುತ್ತಿಗೆದಾರರಿಂದ ಆಸ್ತಿ ದುರುಪಯೋಗ

    ಮೂಡಲಗಿ: ಸ್ಥಳೀಯ ಪುರಸಭೆ ವ್ಯಾಪ್ತಿಯಲ್ಲಿ ನಿರ್ಮಾಣವಾಗಿರುವ ವ್ಯಾಪಾರ ಮಳಿಗೆ ಕಟ್ಟಡಗಳನ್ನು ನಿಯಮಾವಳಿ ಪ್ರಕಾರ ಗುತ್ತಿಗೆ ಪಡೆದು ಹಣದಾಸೆಗೆ ಇತರರಿಗೆ ಬಾಡಿಗೆ ನೀಡಿರುವ ಗುತ್ತಿಗೆದಾರರ ಕ್ರಮವನ್ನು ಖಂಡಿಸಿ ಕರ್ನಾಟಕ ನವನಿರ್ಮಾಣ ಸೇನೆ ಮೂಡಲಗಿ ಘಟಕದಿಂದ ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಿ.ಬಿ.ಪಾಟೀಲಗೆ ಸೋಮವಾರ ಮನವಿ ಸಲ್ಲಿಸಲಾಯಿತು.

    ಸೇನೆಯ ತಾಲೂಕಾಧ್ಯಕ್ಷ ಸಚಿನ ಲೆಂಕೆಣ್ಣವರ ಮಾತನಾಡಿ, ವ್ಯಾಪಾರಸ್ಥರಿಗೆ ಅನುಕೂಲವಾಗುವಂತೆ ಹಾಗೂ ಸರ್ಕಾರಕ್ಕೆ ಆದಾಯ ಬರುವಂತೆ ಪೂರಕವಾಗಿ ನಿರ್ಮಾಣಗೊಂಡು ಗುತ್ತಿಗೆ ನೀಡಲಾಗಿರುವ ಮಳಿಗೆಗಳನ್ನು ಗುತ್ತಿಗೆದಾರರು ವ್ಯಾಪಾರಕ್ಕೆ ಬಳಸದೆ ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ. ಸೂಕ್ತ ಕ್ರಮಕ್ಕೆ ಮುಂದಾಗಬೇಕಿರುವ ಸ್ಥಳೀಯ ಅಧಿಕಾರಿಗಳು ಕಣ್ಣುಮುಚ್ಚಿ ಕುಳಿತಿದ್ದಾರೆ ಎಂದು ಆರೋಪಿಸಿದರು. ಅಧಿಕಾರಿಗಳು ಶೀಘ್ರ ಕ್ರಮಕ್ಕೆ ಮುಂದಾಗದಿದ್ದರೆ ಉಗ್ರ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

    ಪುರಸಭೆ ಪ್ರಭಾರಿ ಮುಖ್ಯಾಧಿಕಾರಿ ಸಿ.ಬಿ.ಪಾಟೀಲ ಮನವಿ ಸ್ವೀಕರಿಸಿ ಮಾತನಾಡಿ, ಈ ವಿಚಾರವಾಗಿ ಮೇಲಾಧಿಕಾರಿಗಳಿಗೆ ಮನವಿ ರವಾನಿಸುವುದಾಗಿ ಹಾಗೂ ಹಿರಿಯ ಅಧಿಕಾರಿಗಳ ಆದೇಶದ ಮೇರೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು ಎಂದರು.

    ಮಹಾಂತೇಶ ಮುಗಳಖೋಡ, ಶಾನೂರ ಕುರಬೇಟ, ಮಲಗೌಡ ಪಾಟೀಲ, ಸಾಗರ ಢವಳೇಶ್ವರ, ಶಶಿಕುಮಾರ ದೊಡಮನಿ, ಸಂತೋಷ ದೊಡಮನಿ, ಸುಭಾಷ ಝಂಢೇಕುರುಬರ, ದೇವರಾಜ ಝಂಢೇಕುರುಬರ ಮತ್ತಿತರರು ಉಪಸ್ಥಿತರಿದ್ದರು.

    ಖಾನಾಪುರ ವರದಿ: ಧಾರವಾಡ ತಾಲೂಕು ಬೋಗೂರಿನ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ ಆರೋಪಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಎಂದು ಆಗ್ರಹಿಸಿ ಭಾರತೀಯ ಜನತಾ ಪಕ್ಷದ ತಾಲೂಕು ಘಟಕದ ಪದಾಧಿಕಾರಿಗಳು ಸೋಮವಾರ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿದರು. ಪಕ್ಷದ ಬ್ಲಾಕ್ ಅಧ್ಯಕ್ಷ ಸಂಜಯ ಕುಬಲ, ಜಿಪಂ ಸದಸ್ಯರಾದ ಜೀತೇಂದ್ರ ಮಾದಾರ, ಸುರೇಶ ಮ್ಯಾಗೇರಿ, ಜಿಲ್ಲಾ ಉಪಾಧ್ಯಕ್ಷ ಪ್ರಮೋದ ಕೊಚೇರಿ, ಲೈಲಾ ಶುಗರ್ಸ್ ಎಂಡಿ ಸದಾನಂದ ಪಾಟೀಲ ನೇತೃತ್ವದಲ್ಲಿ ತಹಸೀಲ್ದಾರ್‌ಗೆ ಮನವಿ ಸಲ್ಲಿಸಿ ಕೂಡಲೇ ಮನವಿಯನ್ನು ಸರ್ಕಾರಕ್ಕೆ ರವಾನಿಸುವ ಮೂಲಕ ತಾಲೂಕಿನ ಬಿಜೆಪಿ ಕಾರ್ಯಕರ್ತರ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿದರು. ಪಕ್ಷದ ಮಂಡಳ ಉಪಾಧ್ಯಕ್ಷ ಸಂತೋಷ ಹಡಪದ, ಜಿಲ್ಲಾ ಯುವಮೋರ್ಚಾ ಪ್ರಧಾನ ಕಾರ್ಯದರ್ಶಿ ಸುನೀಲ ಮಡ್ಡಿಮನಿ, ಬಾಬುರಾವ ದೇಸಾಯಿ, ಮಲ್ಲಪ್ಪ ಮಾರಿಹಾಳ, ಅಶೋಕ ಚಲವಾದಿ, ರಾಜೇಂದ್ರ ರಾಯ್ಕ, ಸಂಜಯ ಕಂಚಿ, ಗುಂಡು ತೋಪಿನಕಟ್ಟಿ, ರುದ್ರಪ್ಪ ತುಳಜಿ ಮತ್ತಿತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts