More

    ಮುನಿರತ್ನ ವಿರುದ್ಧ 40% ಆರೋಪ ಮಾಡಿದ್ದ ಗುತ್ತಿಗೆದಾರರ ಸಂಘದ ಕೆಂಪಣ್ಣ ಅರೆಸ್ಟ್; ಸದ್ಯ ಒಟ್ಟು ನಾಲ್ವರ ಬಂಧನ

    ಬೆಂಗಳೂರು: ತೋಟಗಾರಿಕೆ ಮತ್ತು ಯೋಜನಾ ಸಚಿವ ಮುನಿರತ್ನ ವಿರುದ್ಧ ಶೇ.40 ಕಮಿಷನ್ ಆರೋಪ ಮಾಡಿದ ಪ್ರಕರಣದ ಸಂಬಂಧ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಸೇರಿ 19 ಮಂದಿಗೆ ಬೆಂಗಳೂರಿನ ಮ್ಯಾಜಿಸ್ಟ್ರೇಟ್ ನ್ಯಾಯಾಲಯ ನಿನ್ನೆಯಷ್ಟೇ ಜಾಮೀನುರಹಿತ ವಾರಂಟ್ (ಎನ್‌ಬಿಡಬ್ಲ್ಯು) ಜಾರಿ ಮಾಡಿತ್ತು. ಅದರ ಬೆನ್ನಿಗೇ ಮಹತ್ವದ ಬೆಳವಣಿಗೆಯಾಗಿದ್ದು, ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣ ಬಂಧನ ಕೂಡ ಆಗಿದೆ.

    ಸಂಘದ ಅಧ್ಯಕ್ಷ ಕೆಂಪಣ್ಣ ಮಾತ್ರವಲ್ಲದೆ ಕೃಷ್ಣಾ ರೆಡ್ಡಿ, ನಟರಾಜು, ಗುರುಸಿದ್ದಪ್ಪ ಕೂಡ ಬಂಧಿಸಲ್ಪಟ್ಟಿದ್ದಾರೆ. ಬೆಂಗಳೂರಿನ ವೈಯಾಲಿಕಾವಲ್ ಪೊಲೀಸರು ಈ ನಾಲ್ವರನ್ನು ಪತ್ತೆ ಹಚ್ಚಿ ಬಂಧಿಸಿದ್ದಾರೆ. ಕೆಂಪಣ್ಣ ಆರೋಪಕ್ಕೆ ಪ್ರತಿಯಾಗಿ ಸಚಿವ ಮುನಿರತ್ನ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಯ ಹಿನ್ನೆಲೆಯಲ್ಲಿ ಜಾಮೀನುರಹಿತ ವಾರಂಟ್ ಜಾರಿಯಾಗಿತ್ತು. ಅದರ ಮುಂದುವರಿದ ಭಾಗವಾಗಿ ಈಗ ಬಂಧನವಾಗಿದೆ.

    ಕೆಂಪಣ್ಣ ಮತ್ತಿತರರ ವಿರುದ್ಧ ಮುನಿರತ್ನ ದಾಖಲಿಸಿದ್ದ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಕುರಿತಂತೆ ನಿನ್ನೆ ವಿಚಾರನೆ ನಡೆಸಿದ 8ನೇ ಎಸಿಎಂಎಂ ಕೋರ್ಟ್‌ನ ನ್ಯಾಯಾಧೀಶ ಕೆ.ಎನ್. ಶಿವಕುಮಾರ್ ಅವರು ಎಲ್ಲ ಆರೋಪಿಗಳಿಗೆ ಎನ್‌ಬಿಡಬ್ಲ್ಯು ಜಾರಿಗೊಳಿಸಿ, ವಿಚಾರಣೆಯನ್ನು 2023ರ ಜ.19ಕ್ಕೆ ಮುಂದೂಡಿದ್ದರು.

    ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ.ಕೆಂಪಣ್ಣ, ಉಪಾಧ್ಯಕ್ಷರಾದ ವಿ.ಕೃಷ್ಣ ರೆಡ್ಡಿ, ಕಾರ್ಯದರ್ಶಿ ಜಿ.ಎಂ. ರವೀಂದ್ರ ಮತ್ತು ಖಜಾಂಚಿ ಎಚ್.ಎಸ್. ನಟರಾಜ್ ಸೇರಿ ಪ್ರಕರಣದ ಇನ್ನಿತರ ಆರೋಪಿಗಳು ದೂರುದಾರ ಮುನಿರತ್ನ ವಿರುದ್ಧ ನೀಡಿರುವ ಹೇಳಿಕೆಗಳು ಮಾಧ್ಯಮಗಳಲ್ಲಿ ಪ್ರಕಟವಾಗಿದೆ. ಅದು ದೂರುದಾರರ ವರ್ಚಸ್ಸಿಗೆ ಮೇಲ್ನೋಟಕ್ಕೆ ಧಕ್ಕೆ ಉಂಟು ಮಾಡಿದೆ ಎಂದು 2022ರ ನ.16ರಂದು ನ್ಯಾಯಾಲಯ ಅಭಿಪ್ರಾಯಪಟ್ಟಿತ್ತು.

    ಜತೆಗೆ, ಕೆಂಪಣ್ಣ ಸೇರಿ ಎಲ್ಲ 19 ಆರೋಪಿಗಳಿಗೆ ಸಮನ್ಸ್ ಜಾರಿಗೊಳಿಸಿ, ವಿಚಾರಣೆಯನ್ನು ಡಿ.22ಕ್ಕೆ ಮುಂದೂಡಿತ್ತು. ಗುರುವಾರ (ಡಿ.22ರಂದು) ಮತ್ತೆ ಪ್ರಕರಣ ವಿಚಾರಣೆಗೆ ಬಂದಾಗ ಆರೋಪಿಗಳು ವಿಚಾರಣೆಗೆ ಗೈರಾಗಿದ್ದರು. ಇದರಿಂದ, ನ್ಯಾಯಾಲಯ ಎನ್‌ಬಿಡಬ್ಲ್ಯು ಜಾರಿ ಮಾಡಿತ್ತು.

    ಶಾಲಾ ಬಸ್​ನ ಪ್ರಥಮ ಚಿಕಿತ್ಸಾ ಡಬ್ಬದಲ್ಲಿ ಕಾಂಡಂ​, ಅವಧಿ ಮುಗಿದ ಔಷಧ, ಪೇನ್​ ಕಿಲ್ಲರ್ಸ್​ ಪತ್ತೆ!

    ಚಾಲಕನಿಗೆ 33 ಕೋಟಿ ರೂ. ಬಂಪರ್ ಬಹುಮಾನ; ನಂಬೋಕೇ ಆಗ್ತಿಲ್ಲ ಅಂದವ ‘ಟ್ರಸ್ಟ್’ ಮಾಡ್ತೇನೆ ಎಂದ!

    ಶಾಸಕ ರೇಣುಕಾಚಾರ್ಯ ಇದ್ದ ವೇದಿಕೆಯತ್ತ ಕುರಿಗಳನ್ನು ನುಗ್ಗಿಸಿ ತರಾಟೆಗೆ ತೆಗೆದುಕೊಂಡ ಜನರು; ಕಾರಣವಿದು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts