More

    ನಿರಂತರ ಮುಸಲಧಾರೆ; ಹಳ್ಳ-ಕೊಳ್ಳಗಳಿಗೆ ಜೀವಕಳೆ

    ಹೊಸನಗರ: ಮಲೆನಾಡಿನ ನಡುಮನೆ ಅಂತಲೇ ಕರಿಸಿಕೊಳ್ಳುವ ಹೊಸನಗರ ತಾಲೂಕಿನಲ್ಲಿ ಮಳೆಯ ಆರ್ಭಟ ಮುಂದುವರಿದಿದ್ದು ನಿರಂತರ ಮುಸಲಧಾರೆಯಿಂದ ಹಳ್ಳ-ಕೊಳ್ಳಗಳಿಗೆ ಮತ್ತೆ ಜೀವಕಳೆ ಬಂದಿದೆ. ನಿಟ್ಟೂರು, ಕೋಡೂರು, ಹುಂಚಾ, ಆರೋಡಿ, ನಗರ, ಕಾನಗೋಡು ಭಾಗದಲ್ಲಿ ಒಂದೇ ದಿನ 100 ಮಿಮೀ ಮಳೆ ಸುರಿದಿದೆ.

    ಹುಲಿಕಲ್ ಪ್ರದೇಶದಲ್ಲಿ ಕಳೆದ 24 ಗಂಟೆ ಅವಧಿಯಲ್ಲಿ 114 ಮಿಮೀ ಮಳೆ ಸುರಿದಿದೆ. ಮಾಸ್ತಿಕಟ್ಟೆ ಭಾಗದಲ್ಲಿ 100 ಮಿಮೀ ಮಳೆಯಾಗಿದೆ. ಮಾಣಿ, ಚಕ್ರಾ, ಸಾವೇಹಕ್ಲು ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು ಜಲಾಶಯಗಳ ಒಳಹರಿವು ಹೆಚ್ಚಿದೆ. ಮಾಣಿ ಜಲಾಶಯದ ಒಳಹರಿವು 2442 ಕ್ಯೂಸೆಕ್ಸ್, ಪಿಕಪ್ ಜಲಾಶಯದ ಒಳಹರಿವು 775 ಕ್ಯೂಸೆಕ್ ಇದೆ.
    ಹುಲಿಕಲ್ ಪ್ರದೇಶದಲ್ಲಿ ಕಳೆದ ಮೂರು ದಿನದಿಂದ ನಿತ್ಯ 100 ಮಿಮೀಗಿಂತ ಹೆಚ್ಚು ಮಳೆ ಸುರಿಯುತ್ತಿದ್ದು, ಹುಲಿಕಲ್(ಬಾಳೆಬರೆ) ಜಲಪಾತ ಮೈದುಂಬಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts