More

  ನಿರಂತರ ವಿದ್ಯುತ್‌ಗೆ ಒತ್ತಾಯಿಸಿ ಬಿಜೆಪಿಯಿಂದ ಮನವಿ

  ಮಾನ್ವಿ: ಕಾಲುವೆಗೆ ನೀರು ಬರುತ್ತಿಲ್ಲ ಮಳೆಯಿಲ್ಲ ಇದರಿಂದ ರೈತರ ಬೆಳೆಗಳು ಸಂಪೂರ್ಣ ಬಾಡಿ ಹೋಗುತ್ತಿದ್ದು ಬೆಳೆಗಳ ರಕ್ಷಣೆಗೆ ನಿರಂತರ ವಿದ್ಯುತ್ ನೀಡಬೇಕು ಎಂದು ಒತ್ತಾಯಿಸಿ ಬಿಜೆಪಿ ರೈತ ಮೋರ್ಚ ತಾಲೂಕು ಘಟಕದಿಂದ ತಹಸೀಲ್ದಾರ್ ರಾಜು ಪಿರಂಗಿಗೆ ಶುಕ್ರವಾರ ಮನವಿ ಸಲ್ಲಿಸಿದರು.

  ಇದನ್ನೂ ಓದಿ: ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

  ತಾಲೂಕಿನಲ್ಲಿ ಮಳೆಯ ಅಭಾವದಿಂದ ಬರಗಾಲ ಬಂದಿದ್ದು ರೈತರು ಸಂಕಷ್ಟ ಎದುರಿಸುವಂತಾಗಿದೆ ಸರ್ಕಾರ ರೈತರ ಪಂಪ್‌ಸೆಟ್‌ಗಳಿಗೆ ನಿರಂತರವಾಗಿ 7ಗಂಟೆ ವಿದ್ಯುತ್ ಪೂರೈಸಿ.

  ದಿನ ಸರ್ಕಾರ ಅವಧಿಯಲ್ಲಿ ರೈತರಿಗಾಗಿ ಕಿಸಾನ್ ಸಮ್ಮಾನ ನಿಧಿ ಯೋಜನೆ, ರೈತ ವಿಧ್ಯಾನಿದಿ ಯೋಜನೆ, ಭೂ ಸಿರಿ, ರೈತ ಸಂಪದ, ಗೋಶಾಲೆ, ಕ್ಷೀರ ಸಮೃದ್ದಿ ಸಹಕಾರ ಬ್ಯಾಂಕ್‌ಗಳು ಸೇರಿ ಹಲವು ಯೋಜನೆಗಳನ್ನು ರದ್ದು ಮಾಡದೆ ಪುನಃ ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.

  ಬಿಜೆಪಿ ರೈತ ಮೋರ್ಚ ತಾಲೂಕು ಘಟಕ ಅಧ್ಯಕ್ಷ ವೀರಭದ್ರಗೌಡ ಗವಿಗಟ್ಟು,
  ಮಾನ್ವಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಜಕ್ಕಲದಿನ್ನಿ, ಟಿಎಪಿಸಿಎಮ್‌ಎಸ್ ಅಧ್ಯಕ್ಷ ತಿಮ್ಮರೆಡ್ಡಿ ಭೋಗವತಿ, ಮುಖಂಡರಾದ ಗುರುಸಿದ್ದಪ್ಪ ಕಣ್ಣೂರು, ವೀರೇಶನಾಯಕ, ಅಯ್ಯಪ್ಪನಾಯಕ ಮ್ಯಾಕಲ್ ಸುಧಾಕರ್, ಶ್ರೀಕಾಂತಗೂಳಿ, ಚಂದ್ರಶೇಖರನಾಯಕ,
  ಶಿವಲಿಂಗಯ್ಯ ಸ್ವಾಮಿ, ಶರಣಪ್ಪಗೌಡ ಮೇಟಿ, ನಾಗಲಿಂಗಸ್ವಾಮಿ, ವೀರನಗೌಡ ಗಣದಿನ್ನಿ, ಕುಮಾರಮೇದಾ ಇದ್ದರು.

  ರಾಜ್ಯೋತ್ಸವ ರಸಪ್ರಶ್ನೆ - 24

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts