More

    ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

    ರಾಯಚೂರು: ರಾಜ್ಯ ಸರ್ಕಾರ ರೈತ ವಿರೋ ನೀತಿಯನ್ನು ಕೈಬಿಡಬೇಕು ಎಂದು ಆಗ್ರಹಿಸಿ ಬಿಜೆಪಿ ರೈತ ಮೋರ್ಚಾದಿಂದ ಸ್ಥಳೀಯ ತಹಸೀಲ್ ಕಚೇರಿ ಮುಂದೆ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
    ನಂತರ ತಹಸೀಲ್ದಾರ್ ಸುರೇಶ ವರ್ಮಾ ಮನವಿ ಸಲ್ಲಿಸಿ, ಬಿಜೆಪಿ ಸರ್ಕಾರ ಅವಯಲ್ಲಿ ಜಾರಿಗೆ ತಂದ ರೈತ ಪರ ಯೋಜನೆಗಳನ್ನು ರದ್ದುಪಡಿಸಲು ಕಾಂಗ್ರೆಸ್ ಸರ್ಕಾರ ಮುಂದಾಗಿರುವುದನ್ನು ಖಂಡಿಸಿದರು.
    ರಾಜ್ಯ ಸರ್ಕಾರ ಎಪಿಎಂಸಿ ತಿದ್ದುಪಡಿ ಕಾನೂನು ರದ್ದುಪಡಿಸಲು ಮುಂದಾಗಿದ್ದು, ಕೃಷಿ ಸಮ್ಮಾನ್ ಯೋಜನೆಯ ಕಂತು ತಡೆಹಿಡಿಯಲಾಗಿದೆ. 11 ಲಕ್ಷ ರೈತರ ಮಕ್ಕಳಿಗೆ ಕೊಡುತ್ತಿದ್ದು 468 ಕೋಟಿ ವಿದ್ಯಾನಿ ಯೋಜನೆ ರದ್ದುಪಡಿಸಲಾಗಿದೆ.. 50 ಲಕ್ಷ ರೈತರಿಗೆ ಕೊಡುತ್ತಿದ್ದ 10 ಸಾವಿರ ರೂ.ಗಳನ್ನು ರದ್ದು ಮಾಡಲಾಗಿದೆ.
    ಕೃಷಿ ಭೂಮಿ ಮಾರಾಟ ಕಾಯ್ದೆ ಹಿಂಪಡೆಯುವ ಹುನ್ನಾರ ನಡೆಸಿದ್ದು, ನೀರಾವರಿ ಯೋಜನೆಯ ಗಾತ್ರವನ್ನು 23 ಕೋಟಿ ರೂ.ನಿಂದ 10 ಕೋಟಿ ರೂ.ಗೆ ಇಳಿಸಲಾಗಿದೆ. ಕೆರೆ ಸಮೃದ್ಧಿ ಸಹಕಾರ ಬ್ಯಾಂಕ್ ರದ್ದುಪಡಿಸಲು ನಿರ್ಧರಿಸಿದ್ದು, ಜಿಲ್ಲೆಗೊಂದು ಗೋಶಾಲೆ ತೆರೆಯುವುದನ್ನು ಹಿಂಪಡೆಯಲಾಗಿದೆ,.
    ಜೀವನ ಜ್ಯೋತಿ ವಿಮಾ ಯೋಜನೆ ರದ್ದು ಮಾಡಿದ್ದು, 56 ಲಕ್ಷ ರೈತರಿಗೆ ಕೊಡುತ್ತಿದ್ದ 180 ಕೋಟಿ ರೂ. ಅನುದಾನ ಕಡಿತಗೊಳಿಸಲಾಗಿದೆ. ಮೀನುಗಾರರ ವಸತಿ ಯೋಜನೆ ಕೈಬಿಟ್ಟಿದ್ದು, ಬೆಂಬಲ ಬೆಲೆಯಲ್ಲಿ ಆಹಾರಧಾನ್ಯ ಖರೀದಿಗೆ ಮೀಸಲಿಟ್ಟ 3,500 ಕೋಟಿ ರೂ. ಹಣವನ್ನು ಹಿಂಪಡೆಯಲಾಗಿದೆ. ಟಿಎಲ್‌ಬಿಸಿ, ಎನ್‌ಆರ್‌ಬಿಸಿ ಕೊನೆ ಭಾಗಕ್ಕೆ ನೀರು ಹರಿಸುವಲ್ಲಿ ವಿಲವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
    ಪ್ರತಿಭಟನೆಯಲ್ಲಿ ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್, ಡಾ.ಶಿವರಾಜ ಪಾಟೀಲ್, ಸಂಸದ ರಾಜಾ ಅಮರೇಶ್ವರ ನಾಯಕ, ಮಾಜಿ ಶಾಸಕ ಬಸನಗೌಡ ಬ್ಯಾಗವಾಟ್, ಮಾಜಿ ಎಂಎಲ್ಸಿ ಎನ್.ಶಂಕ್ರಪ್ಪ, ಬಿಜೆಪಿ ರೈತ ಮೋರ್ಚಾ ಜಿಲ್ಲಾಧ್ಯಕ್ಷ ಸಿದ್ದನಗೌಡ ನೆಲಹಾಳ, ಮುಖಂಡರಾದ ರವೀಂದ್ರ ಜಲ್ದಾರ್, ಸುಲೋಚನಾ ಆಲ್ಕೂರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts