More

    ಪಿಡಿಒಗಳ ಅಸಹಕಾರ ಚಳವಳಿ ಮುಂದುವರಿಕೆ

    ಬೆಂಗಳೂರು: ತಮ್ಮ ಬೇಡಿಕೆ ಈಡೇರಿಸುವಂತೆ ನ.8 ರಿಂದ ಪಿಡಿಒಗಳು ನಡೆಸುತ್ತಿರುವ ಅಸಹಕಾರ ಚಳವಳಿ ಮುಂದುವರಿದಿದೆ.
    ಇಲಾಖೆಗೆ ಸಂಬಂಧಿಸಿದ ಎಲ್ಲ ಆನ್‌ಲೈನ್ ಸೇವೆಗಳನ್ನು ಸ್ಥಗಿತಗೊಳಿಸಿರುವ ಪಿಡಿಒಗಳು ಮೇಲಧಿಕಾರಿಗಳು ಕರೆದ ಸಭೆಗಳಿಗೂ ಗೈರು ಹಾಜರಾಗಿದ್ದಾರೆ. ಆದರೆ ಜನರ ಮೂಲಭೂತ ಸೇವೆಗಳನ್ನು ಮಾತ್ರ ನೀಡುತ್ತಿದ್ದಾರೆ.

    ಬೇಡಿಕೆಗಳೇನು?:
    ಪಿಡಿಒಗಳ ಜೇಷ್ಠತಾ ಪಟ್ಟಿಯನ್ನು ಪ್ರಕಟಿಸಬೇಕು, ತಾಲೂಕು ಪಂಚಾಯಿತಿಗಳಲ್ಲಿ ಖಾಲಿ ಇರುವ ಸಹಾಯಕ ನಿರ್ದೇಶಕ ಹುದ್ದೆಗೆ ಬಡ್ತಿ ನೀಡಬೇಕು, ಎಲ್ಲ ಪಿಡಿಒಗಳ ಹುದ್ದೆಗಳನ್ನು ಬಿ ವೃಂದಕ್ಕೆ ಮೇಲ್ದರ್ಜೆಗೇರಿಸಬೇಕು, ಅವಧಿ ಮುಗಿದ ಬಳಿಕ ವರ್ಗಾವಣೆ ಮಾಡಬಾರದು ಮತ್ತು ಬಾಧಿತ ನೌಕರರಿಗೆ ಸ್ಥಳ ನಿಯುಕ್ತಿ ಮಾಡಬೇಕು ಹಾಗೂ ವೇತನ ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿ ಈ ಅಸಹಕಾರ ಚಳವಳಿ ನಡೆಸಲಾಗುತ್ತಿದೆ.

    ಬೇಡಿಕೆಗಳ ಬಗ್ಗೆ ಎರಡು ತಿಂಗಳ ಹಿಂದೆಯೇ ಕರ್ನಾಟಕ ರಾಜ್ಯ ಪಂಚಾಯತಿ ಅಭಿವೃಧ್ಧಿ ಅಧಿಕಾರಿಗಳ ಕ್ಷೇಮಾಭಿವೃದ್ಧಿ ಸಂಘ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಮನವಿ ಸಲ್ಲಿಸಿತ್ತು. ಆಗ ಸಚಿವರು ಸಭೆ ಕರೆದು ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದರು. ಸಚಿವರು ನೀಡಿದ ಭರವಸೆ ಈಡೇರಿಲ್ಲ ಎಂದು ಆರೋಪಿಸಿ ಪಿಡಿಒಗಳು ಈಗ ಅಸಹಕಾರ ಚಳವಳಿ ನಡೆಸುತ್ತಿದ್ದಾರೆ.

    ಈ ನಡುವೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಎಸಿಎಸ್ ಉಮಾ ಮಹದೇವನ್ ಹಾಗೂ ಕರ್ನಾಟಕ ಪಂಚಾಯತ್ ರಾಜ್ ಆಯುಕ್ತಾಲಯದ ಆಯುಕ್ತೆ ಪ್ರಿಯಾಂಕಾ ಮೇರಿ ್ರಾನ್ಸಿಸ್ ಅವರು ಪಿಡಿಒಗಳ ಸಂಘದ ಪ್ರತಿನಿಧಿಗಳ ಜತೆ ಸಭೆ ನಡೆಸಿ ಚರ್ಚಿಸಿದ್ದಾರೆ. ಆದರೆ ಸಭೆಯ ನಡವಳಿಕೆ ನೀಡಬೇಕು ಎಂದು ಪಿಡಿಒಗಳ ಸಂಘ ಪಟ್ಟು ಹಿಡಿದಿರುವುದರಿಂದ ಅಸಹಕಾರ ಚಳವಳಿ ಮುಂದುವರಿದಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts