More

    ಅಕ್ಕಿ ಬದಲು ಹಣ ವ್ಯವಸ್ಥೆ ಮುಂದುವರಿಕೆ:ನ್ಯಾಯಬೆಲೆ ಅಂಗಡಿ ವರ್ತಕರು ವಿರೋಧ

    ಬೆಂಗಳೂರು: ಅನ್ನಭಾಗ್ಯ ಯೋಜನೆಯಡಿ ಕಾರ್ಡ್‌ದಾರರಿಗೆ ಅಕ್ಕಿ ಬದಲು ಹಣ ನೀಡುವ ವ್ಯವಸ್ಥೆಯನ್ನು ಇನ್ನಷ್ಟು ತಿಂಗಳು ಮುಂದುವರಿಸಲು ತೆಗೆದುಕೊಂಡಿರುವ ರಾಜ್ಯ ಸರ್ಕಾರದ ತೀರ್ಮಾನವನ್ನು ರಾಜ್ಯ ಸರ್ಕಾರಿ ಪಡಿತರ ವಿತರಕ ಸಂಘ ಖಂಡಿಸಿದೆ.

    ಕೇಂದ್ರ ಸರ್ಕಾರದ ಯೋಜನೆಗೆ ರಾಜ್ಯ ಸರ್ಕಾರ ಮನಬಂದಂತೆ ಹೊರಡಿಸಿರುವ ಹಲವು ಆದೇಶಗಳಲ್ಲಿ ಲೋಪವಿದೆ. ದಿನದಿಂದ ದಿನಕ್ಕೆ ಪಡಿತರ ಯೋಜನೆಯ ಮಹತ್ವವೇ ಕಳೆದುಕೊಳ್ಳುವಂತಾಗಿದೆ. ಚುನಾವಣೆ ವೇಳೆ 10 ಕೆಜಿ ಅಕ್ಕಿ ಕೊಡುವುದಾಗಿ ಕಾಂಗ್ರೆಸ್ ವಾಗ್ದಾನ ಮಾಡಿತ್ತು. ಅಧಿಕಾರಕ್ಕೆ ಬಂದು ಐದೂವರೆ ತಿಂಗಳಾದರೂ ಅಕ್ಕಿ ನೀಡಲು ಸರ್ಕಾರಕ್ಕೆ ಸಾಧ್ಯವಾಗಿಲ್ಲ. ನಮಗೆ ಸಿಗಬೇಕಿದ್ದ ಕಮಿಷನ್ ಹಣವೂ ಖೋತವಾಯಿತು. ಅಕ್ಕಿ ವಿತರಿಸಲು ಒಂದಿಲ್ಲೊಂದು ನೆಪ ಹೇಳುತ್ತಿರುವ ಸರ್ಕಾರ, ಅಕ್ಕಿ ಸಿಗುವವರೆಗೂ ಹಣ ನೀಡುವ ಯೋಜನೆ ಮುಂದುವರಿಸುವುದಾಗಿ ಹೇಳುತ್ತಿರುವುದು ಸರಿಯಲ್ಲ. ಹಲವು ತಾಂತ್ರಿಕ ಕಾರಣಗಳಿಂದ ಲಕ್ಷಾಂತರ ಮಂದಿಗೆ ನೇರ ನಗದು ವ್ಯವಸ್ಥೆ ಸಿಗದಂತಾಗಿದೆ. ಈ ವ್ಯವಸ್ಥೆ ಬಗ್ಗೆ ಈಗಾಗಲೇ ಕಾರ್ಡ್‌ದಾರರೂ ದೂರುತ್ತಿದ್ದಾರೆ. ಹೀಗಾಗಿ, ಅಕ್ಕಿಯನ್ನೇ ವಿತರಿಸಬೇಕೆಂದು ಸಂಘದ ಅಧ್ಯಕ್ಷ ಟಿ. ಕೃಷ್ಣಪ್ಪ ಒತ್ತಾಯಿಸಿದ್ದಾರೆ.

    ಇದನ್ನೂ ಓದಿ: 9ತಿಂಗಳಲ್ಲಿ ಭಾರತೀಯರು ವಿದೇಶ ಪ್ರವಾಸಕ್ಕೆ ಮಾಡಿದ ಖರ್ಚು 10 ಶತಕೋಟಿ ಡಾಲರ್!

    ಮುಕ್ತ ಮಾರುಕಟ್ಟೆ ವ್ಯವಸ್ಥೆಯಡಿ ಮಿಲ್ಲರ್ಸ್‌ಗಳಿಂದ ಅಕ್ಕಿ ಮತ್ತು ಗೋಧಿ ಖರೀದಿಸಲು ಸರ್ಕಾರ ಮುಂದಾಗಿದೆ. ಅದೇರೀತಿ, ಅಕ್ಕಿ ಖರೀದಿಸಿ ಕಾರ್ಡ್‌ದಾರರಿಗೆ ಹಂಚಿಕೆ ಮಾಡಲು ನ್ಯಾಯಬೆಲೆ ಅಂಗಡಿ ಮಾಲೀಕರಿಗೂ ಅನುಮತಿ ನೀಡಬೇಕು. ಆಹಾರಧಾನ್ಯ ವಿತರಣೆ ವೇಳೆ ಕಾರ್ಡ್‌ದಾರರಿಗೆ ಮುದ್ರಿತ ರಸೀದಿ ನೀಡುವಂತೆ ಹೊರಡಿಸಿರವ ಆದೇಶವನ್ನು ತಕ್ಷಣ ರದ್ದುಪಡಿಸಬೇಕು. ಸರ್ಕಾರದ ವತಿಯಿಂದಲೇ ಪ್ರಿಂಟರ್ ಯಂತ್ರ ನೀಡಬೇಕು. ಇಲ್ಲದಿದ್ದರೆ, ಈ ಆದೇಶವನ್ನು ಪಾಲಿಸುವುದಿಲ್ಲ ಎಂದು ಕೃಷ್ಣಪ್ಪ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts