ಪ್ರಥಮ ಪಿಯು ಪರೀಕ್ಷೆಯಲ್ಲಿಯೂ ಮುಸ್ಲಿಂ, ಕ್ರೈಸ್ರರ ಓಲೈಕೆ: ಏನೆಲ್ಲ ಪ್ರಶ್ನೆಗಳಿವೆ ನೋಡಿ

Vidhanasoudha

ಬೆಂಗಳೂರು ರಾಜ್ಯದ ಕಾಂಗ್ರೆಸ್ ಸರ್ಕಾರವು ಪ್ರತಿ ಹಂತದಲ್ಲಿ ಮುಸ್ಲಿಂ ಮತ್ತು ಕ್ರಿಶ್ಚಿಯನ್ ತುಷ್ಟೀಕರಣ ಮಾಡುತ್ತಿದೆ. ಅದರಲ್ಲಿಯೂ ಶಿಕ್ಷಣ ಕ್ಷೇತ್ರದಲ್ಲಿ ಅವಕಾಶ ಸಿಕ್ಕಲೆಲ್ಲಾ ತನ್ಮ ಸಿದ್ಧಾಂತವನ್ನು ತುರುಕುವ ಮತ್ತು ಮುಗ್ಧ ಮಕ್ಕಳ ಮೇಲೆ ಬಲವಂತವಾಗಿ ಹೇರುವ ಪ್ರಯತ್ನವಾಗುತ್ತಿದೆ ಎಂದ ಆಕ್ರೋಶ ವ್ಯಕ್ತವಾಗುತ್ತಿದೆ.

ಒಂದು ಸರ್ಕಾರ ನೇರಾನೇರ ಒಂದು ಪಂಗಡದವರ ಪರವಾಗಿ ಓಲೈಕೆಗೆ ನಿಂತುಬಿಟ್ಟರೆ ಎಷ್ಟೆಲ್ಲ ಅಧ್ವಾನಗಳಾಗಬಹುದು ಎಂಬುದಕ್ಕೆ ಕಾಂಗ್ರೆಸ್ ಸರ್ಕಾರವು ಉದಾಹರಣೆಯಾಗಿದೆ. ಅಲ್ಪಸಂಖ್ಯಾತರ ಓಲೈಕೆ ಎನ್ನುವುದು ರಾಜಕೀಯದಲ್ಲಿ ಮಾತ್ರ ಅಲ್ಲದೇ ಹಿಂದುಗಳ ಧಾರ್ಮಿಕ ಭಾವನೆ, ಶಿಕ್ಷಣ, ಅನುದಾನ ಹೀಗೆ ಅನೇಕ ವಿಭಾಗಗಳಲ್ಲಿ ಪರಿಣಾಮ ಬೀರುತ್ತದೆ. ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದ 8 ತಿಂಗಳಲ್ಲಿ ಈ ದಿಸೆಯಲ್ಲಿ ಆದ ಪ್ರಯತ್ನಗಳೇನು ಒಂದೆರಡಲ್ಲ ಎಂಬ ಅಸಮಾಧಾನ ಸಾಮಾಜಿಕ ತಾಣಗಳಲ್ಲಿ ವ್ಯಕ್ತವಾಗುತ್ತಿದೆ.

ಶಾಲೆಗಳಲ್ಲಿ ಸರಸ್ವತಿ ಪೂಜೆ ನಿಲ್ಲಿಸುವ ಪ್ರಯತ್ನವಾಯಿತು, ಕೈಮುಗಿದು ಒಳಗೆ ಬನ್ನಿ ಎಂಬ ಘೋಷ ವಾಕ್ಯ ಬದಲಾವಣೆಯ ಪ್ರಯತ್ನವಾಯಿತು. ಶಾಲೆಯ ಪಠ್ಯ ಪುಸ್ತಕಗಳಲ್ಲಿ ಭಗವದ್ಗೀತೆಯನ್ನು ಸೇರಿಸಲೂ ವಿರೋಧ ಮಾಡಿದರು ಹೀಗೆ ಪಟ್ಟಿ ಬೆಳೆಯುತ್ತಲೇ ಇದೆ.

ಅದಕ್ಕೆ ಮತ್ತೊಂದು ಸೇರ್ಪಡೆ ಎಂದರೆ ೆ.24ರಂದು ನಡೆದ ಮೊದಲ ಪಿಯುಸಿ ಇತಿಹಾಸ ವಾರ್ಷಿಕ ಪರೀಕ್ಷೆಯಲ್ಲಿ ಕ್ರಿಶ್ಚಿಯನ್ ಹಾಗೂ ಇಸ್ಲಾಂ ಧರ್ಮ ಬೋಧನೆಗಳ ಕುರಿತಾದ ಪ್ರಶ್ನೆಗಳಿವೆ. ಆದರೆ, ಸನಾತನ ಹಿಂದೂ ಧರ್ಮದ ಕುರಿತಾಗಲೀ, ಅದರ ಹಿರಿಮೆ, ಗರಿಮೆಗಳ ಕುರಿತಾಗಲೀ, ನಮ್ಮ ಆಚರಣೆಗಳಲ್ಲಿರುವ ವೈಜ್ಞಾನಿಕತೆಗಳ ಕುರಿತಾಗಲೀ ಒಂದೇ ಒಂದು ಅಂಕದ ಪ್ರಶ್ನೆಗಳೂ ಇಲ್ಲ. ’ತಾರತಮ್ಯ’ ’ಓಲೈಕೆ’ ಎನ್ನುವ ಶಬ್ದಗಳಿಗೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೇ? ಎಂಬ ಪ್ರಶ್ನೆ ಉದ್ಭವವಾಗಿದೆ.

Share This Article

ಇತ್ತೀಚೆಗೆ ಜನಪ್ರಿಯತೆ ಗಳಿಸುತ್ತಿರುವ ಬ್ಲೂ ಝೋನ್ ಡಯಟ್​ ಅಂದ್ರೆ ಏನು? ತೂಕ ಇಳಿಕೆಗೆ ಹೇಗೆ ಸಹಕಾರಿ? Blue Zone Diet

Blue Zone Diet : ಬ್ಲೂ ಝೋನ್ ಆಹಾರ ಪದ್ಧತಿ ಇತ್ತೀಚೆಗೆ ಭಾರಿ ಜನಪ್ರಿಯತೆ ಗಳಿಸುತ್ತಿದೆ.…

ನಿಮ್ಮ ನೆಚ್ಚಿನ ಹಣ್ಣುನ್ನು ಆಯ್ಕೆ ಮಾಡಿ.. ನಿಮ್ಮ ವ್ಯಕ್ತಿತ್ವವನ್ನು ತಿಳಿದುಕೊಳ್ಳಿ!.. Personality Test

Personality Test : ಒಬ್ಬ ವ್ಯಕ್ತಿ ಹೇಗಿದ್ದಾನೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ತುಂಬಾ ಕಷ್ಟ. ವ್ಯಕ್ತಿಯ ವ್ಯಕ್ತಿತ್ವವನ್ನು…

ಚಾಣಕ್ಯ ನೀತಿಯಲ್ಲಿನ ಈ 4 ವಿಷಯಗಳನ್ನು ನೆನಪಿನಲ್ಲಿಡಿ; ಸಂಬಂಧದಲ್ಲಿ ಮೋಸ ಹೋದ ನೋವನ್ನು ನೀವು ಅನುಭವಿಸಬೇಕಿಲ್ಲ.. | Chanakya Niti

ಕಾಲಾನಂತರದಲ್ಲಿ ಜನರ ಬದಲಾಗುತ್ತಿರುವ ಆಲೋಚನೆಗಳಲ್ಲಿ ನಿಜವಾದ ಪ್ರೀತಿ ಕಳೆದುಹೋಗುತ್ತಿದೆ. ಈ ಜಗತ್ತಿನಲ್ಲಿ ನಿಮ್ಮನ್ನು ಉತ್ಸಾಹದಿಂದ ಪ್ರೀತಿಸುವ…