More

    121 ಕೋಟಿ ರೂ. ಮೌಲ್ಯದ ಚಿನ್ನವಿದ್ದ ಕಂಟೈನರ್​ ಏರ್ಪೋಟ್​ನಲ್ಲಿ ಕಳವು! ಸಿಗದ ಸುಳಿವು, ಪೊಲೀಸರಿಗೆ ತಲೆನೋವು

    ಟೊರೆಂಟೋ: ಚಿನ್ನ ಮತ್ತು ಇತರೆ ಬೆಲೆ ಬಾಳುವ ವಸ್ತುಗಳನ್ನು ಸಾಗಿಸುತ್ತಿದ್ದ ಐದು ಚದರ ಅಡಿಯ ಕಂಟೈನರ್​ ಕೆನಡಾದ ಟೊರೆಂಟೋ ವಿಮಾನ ನಿಲ್ದಾಣದಲ್ಲಿ ನಾಪತ್ತೆಯಾಗಿದೆ. ಕೆನಡಾ ಇತಿಹಾಸದಲ್ಲೇ ಇದು ಅತಿದೊಡ್ಡ ದರೋಡೆಯಾಗಿದೆ.

    ಘಟನೆ ನಡೆದ ಸಮೀಪದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದರೂ ಕಂಟೈನರ್‌ನ ದೃಶ್ಯಾವಳಿಗಳು ಸ್ಪಷ್ಟವಾಗಿಲ್ಲ. ಘಟನೆಗೆ ಪ್ರತ್ಯಕ್ಷದರ್ಶಿಗಳು ಸಹ ಯಾರೂ ಇಲ್ಲ ಎಂದು ತಿಳಿದುಬಂದಿದೆ. ಟೊರೊಂಟೊದ ಪಿಯರ್ಸನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಕಂಟೈನರ್​ ಕಾಣೆಯಾಗಿದೆ.

    ಇದನ್ನೂ ಓದಿ: ‘ಬಡವರ ಬಂಧು’ ಜನರಿಗೆ ವರದಾನ; ಜೆಡಿಎಸ್ ಅಭ್ಯರ್ಥಿ ಮಂಜುನಾಥ್

    ಸುಮಾರು 14.8 ಮಿಲಿಯನ್​ ಯುಎಸ್​ ಡಾಲರ್​ ಅಂದರೆ, ಭಾರತೀಯ ಕರೆನ್ಸಿಯ ಪ್ರಕಾರ 121.4 ಕೋಟಿ ರೂಪಾಯಿ ನಷ್ಟವಾಗಿದೆ. ವಿಮಾನ ನಿಲ್ದಾಣಕ್ಕೆ ಬಂದ ಕಂಟೈನರ್ ಅನ್ನು ಇಳಿಸಿ ಸರಕು ಸಂಗ್ರಹಣಾ ಕೇಂದ್ರಕ್ಕೆ ಸ್ಥಳಾಂತರಿಸಲಾಯಿತು. ದರೋಡೆ ಇಲ್ಲಿ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ. ಇದು ಕೆನಡಾದ ಇತಿಹಾಸದಲ್ಲಿ ಅತಿದೊಡ್ಡ ದರೋಡೆಗಳಲ್ಲಿ ಒಂದಾಗಿದೆ ಎಂದು ವರದಿಯಾಗಿದೆ.

    ಭದ್ರತಾ ಕ್ಯಾಮೆರಾಗಳು ದರೋಡೆಯ ದೃಶ್ಯವನ್ನು ಸೆರೆಹಿಡಿದಿದೆಯೇ? ಯಾವ ವಿಮಾನಯಾನ ಕಂಪನಿ ಕಂಟೈನರ್ ಸಾಗಿಸಿದೆ ಅಥವಾ ಕಂಟೈನರ್ ಯಾರದ್ದು ಎಂಬುದರ ಬಗ್ಗೆ ಪೊಲೀಸರು ಮಾಹಿತಿ ನೀಡಿಲ್ಲ. ಇದು ತುಂಬಾ ಅಪರೂಪದ ಘಟನೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಟೊರೆಂಟೋ ಪೊಲೀಸರು ತನಿಖೆ ಆರಂಭಿಸಿದ್ದಾರೆ. (ಏಜೆನ್ಸೀಸ್​)

    ಸಿದ್ದರಾಮಯ್ಯ ಅಸಮಾಧಾನದ ಬೆನ್ನಲ್ಲೆ ಎಚ್ಚೆತ್ತ ಡಿಕೆಶಿ: ಖಾಸಗಿ ಕಾರ್ಯಕ್ರಮದಲ್ಲಿ ಒಗ್ಗಟ್ಟು ಪ್ರದರ್ಶನ

    ನಮಗೆ ಸಿದ್ದರಾಮಯ್ಯ ಜತೆ ಒಳ ಒಪ್ಪಂದದ ಅವಶ್ಯಕತೆ ಇಲ್ಲ: ಬಿ.ವೈ. ವಿಜಯೇಂದ್ರ

    ಕಳುವಾಗಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಕ್ರಿಕೆಟ್ ಕಿಟ್ ಪತ್ತೆ; ಬೆಂಗಳೂರಿನಲ್ಲಿ ಇಬ್ಬರ ಬಂಧನ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts