More

    ನಮಗೆ ಸಿದ್ದರಾಮಯ್ಯ ಜತೆ ಒಳ ಒಪ್ಪಂದದ ಅವಶ್ಯಕತೆ ಇಲ್ಲ: ಬಿ.ವೈ. ವಿಜಯೇಂದ್ರ

    ಮೈಸೂರು: ವರುಣ ಜನ ನನ್ನನ್ನು ರಾಜ್ಯಕ್ಕೆ ಪರಿಚಯ ಮಾಡಿಸಿದವರು. ಆದರೆ, ಶಿಕಾರಿಪುರದಲ್ಲಿ ನಿಲ್ಲುವುದು ನನ್ನ ಹಾಗೂ ಯಡಿಯೂರಪ್ಪ ತೀರ್ಮಾನ ಅಲ್ಲ, ಅದು ಕಾರ್ಯಕರ್ತರ ಒತ್ತಾಯವಾಗಿತ್ತು ಎಂದು ಬಿಜೆಪಿ ರಾಜ್ಯ ಉಪಾಧ್ಯಕ್ಷ ವಿಜಯೇಂದ್ರ ಹೇಳಿದರು.

    ಯಡಿಯೂರಪ್ಪ ತೀರ್ಮಾನ ಅಲ್ಲ

    ಇಂದು ವರುಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಜಯೇಂದ್ರ, ವರುಣ ಕ್ಷೇತ್ರದಲ್ಲಿ ಪ್ರಚಾರ ಕಾರ್ಯಕರ್ತರ ಸಭೆ ನಡೆಸಿದ್ದೇನೆ. ಈ ಬಾರಿ ವರುಣ ಮತದಾರರು ಬದಲಾವಣೆ ಬಯಸಿದ್ದಾರೆ. ವರುಣ ಜನ ನನ್ನನ್ನು ರಾಜ್ಯಕ್ಕೆ ಪರಿಚಯ ಮಾಡಿಸಿದವರು. ಶಿಕಾರಿಪುರದಲ್ಲಿ ನಿಲ್ಲುವುದು ನನ್ನ ಹಾಗೂ ಯಡಿಯೂರಪ್ಪ ತೀರ್ಮಾನ ಅಲ್ಲ. ಅದು ಕಾರ್ಯಕರ್ತರ ಒತ್ತಾಯವಾಗಿತ್ತು. ಯಡಿಯೂರಪ್ಪ ಏನೇ ಆಗಿದ್ದರು ಅದು ಶಿಕಾರಿಪುರದಿಂದ. ವರುಣ ಕ್ಷೇತ್ರದಲ್ಲಿ ಕೆಲಸ ಮಾಡುವುದು ನನ್ನ ಕರ್ತವ್ಯ. ಮುಂದಿನ ದಿನದಲ್ಲಿ ಅದನ್ನು ಮಾಡುತ್ತೇನೆ ಎಂದರು.

    ನಿಜಕ್ಕೂ ದುರಂತ

    ಜಗದೀಶ್ ಶೆಟ್ಟರ್ ಪಕ್ಷ ಬಿಟ್ಟ ವಿಚಾರಕ್ಕೆ ಪ್ರತಿಕ್ರಿಯಿಸಿ, ವೀರೇಂದ್ರ ಪಾಟೀಲ್ ಅವರನ್ನು ಕಾಂಗ್ರೆಸ್ ಸರಿಯಾಗಿ ನಡೆಸಿಕೊಂಡಿಲ್ಲ. ಹಿರಿಯರ ಬಗ್ಗೆ ಕೀಳಾಗಿ ನಾನು ಮಾತನಾಡುವುದಿಲ್ಲ. ಆದರೆ, ಅವರು ಹೋಗಿರುವುದು ತುಂಬಾ ನೋವಾಗಿದೆ. ವೀರಶೈವ ಲಿಂಗಾಯತ ಅಂತಾ ಒಡೆಯಲು ಹೋದ ಕಾಂಗ್ರೆಸ್ ಪಕ್ಷ ಸೇರಿದ್ದು ನೋವಾಗಿದೆ. ಕಾಂಗ್ರೆಸ್ ಸೇರುವ ಬದಲು ಪಕ್ಷೇತರರಾಗಿ ಸ್ಪರ್ಧಿಸಬಹುದಿತ್ತು. ಬೇರೆ ಬೇರೆ ಜಾತಿಗಳನ್ನು ಒಡೆಯಲು ಪ್ರಯತ್ನಿಸಿದ್ದು ಕಾಂಗ್ರೆಸ್. ಜಗದೀಶ್ ಶೆಟ್ಟರ್ ಕಾಂಗ್ರೆಸ್ ಪಕ್ಷ ಸೇರಿದ್ದು ನಿಜಕ್ಕೂ ದುರಂತ ಎಂದರು.

    ಹೊಂದಾಣಿಕೆ ರಾಜಕಾರಣ ಮಾಡಿಲ್ಲ

    ಸಮಾಜ ಸಮಾಜಗಳನ್ನು ಒಡೆದು, ಬೆಂಕಿ ಹಾಕುವ ಪಕ್ಷ ಕಾಂಗ್ರೆಸ್. ಅವರಿಗೆ ವೀರಶೈವ ಅಥವಾ ದಲಿತ ಸಮಾಜದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ. ನಮಗೆ ಸಿದ್ದರಾಮಯ್ಯ ಜೊತೆ ಒಳ ಒಪ್ಪಂದದ ಅವಶ್ಯಕತೆ ಇಲ್ಲ. ಶಿಕಾರಿಪುರದಲ್ಲಿ ಹಿಂದಿನಿಂದಲೂ ಸುಲಭವಾಗಿ ಗೆಲುವು ಸಾಧಿಸುತ್ತಿದ್ದೇವೆ. ಹಿಂದೆ ಇಡೀ ಮಂತ್ರಿ ಮಂಡಲ ಬಂದರು ರಾಘವೇಂದ್ರನನ್ನು ಸೋಲಿಸಲು ಸಾಧ್ಯವಾಗಿರಲಿಲ್ಲ. ಯಡಿಯೂರಪ್ಪ ಜೀವನದಲ್ಲಿ ಯಾವತ್ತೂ ಹೊಂದಾಣಿಕೆ ರಾಜಕಾರಣ ಮಾಡಿಲ್ಲ ಎಂದರು. ಮತ್ತೆ ವರುಣಗೆ ನಾನು ಪ್ರಚಾರಕ್ಕೆ ಬರುತ್ತೇನೆ. ಶಿಕಾರಿಪುರ ಬಿಜೆಪಿ ಭದ್ರಕೋಟೆ ಫಲಿತಾಂಶ ಬಂದಾಗ ಸುಭದ್ರ ಕೋಟೆಯಾಗುತ್ತದೆ ಎಂದು ಮೈಸೂರಿನಲ್ಲಿ ಹೇಳಿದರು. (ದಿಗ್ವಿಜಯ ನ್ಯೂಸ್​)

    ಕೇರಳದಲ್ಲಿ ಪ್ರಧಾನಿ ಮೋದಿ ಕೊಲ್ಲುವುದಾಗಿ ಬೆದರಿಕೆ ಪತ್ರ: ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

    ಕಾಂಗ್ರೆಸ್​ನ ಗುಂಡಿಯೊಳಗೆ ನೀರಿಲ್ಲ! ಡಿಕೆಶಿ ಟೀಕೆಗೆ ಟಾಂಗ್ ನೀಡಿದ ಸಿಎಂ

    ವೇಶ್ಯಾವಾಟಿಕೆ ದಂಧೆ ಭೇದಿಸಿದ ಪೊಲೀಸರು; ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ನಟಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts