More

    ಕೇರಳದಲ್ಲಿ ಪ್ರಧಾನಿ ಮೋದಿ ಕೊಲ್ಲುವುದಾಗಿ ಬೆದರಿಕೆ ಪತ್ರ: ಸರ್ಕಾರದ ವಿರುದ್ಧ ಬಿಜೆಪಿ ಆಕ್ರೋಶ

    ತಿರುವನಂತಪುರಂ: ಕೇರಳದಲ್ಲಿ ಪ್ರಧಾನಿ ಮೋದಿ ಕೊಲ್ಲಲು ಸಂಚು ನಡೆಸಲಾಗಿದೆ ಎಂಬ ಬರಹವುಳ್ಳ ಬೆದರಿಕೆಯ ಪತ್ರವನ್ನು ಕೇರಳದ ಬಿಜೆಪಿ ಮುಖ್ಯಸ್ಥ ಕೆ. ಸುರೇಂದ್ರನ್ ಅವರಿಗೆ ಕಳುಹಿಸಲಾಗಿದೆ.

    ಆತ್ಮಾಹುತಿ ಬಾಂಬ್​ ದಾಳಿ

    ಕೊಚ್ಚಿ ನಿವಾಸಿ ಹೆಸರಿನಲ್ಲಿ ಪತ್ರವನ್ನು ಬರೆಯಲಾಗಿದ್ದು, ಪ್ರಧಾನಿ ಮೋದಿ ಅವರ ಕೇರಳ ಪ್ರವಾಸದ ವೇಳೆ ಆತ್ಮಾಹುತಿ ಬಾಂಬ್​ ದಾಳಿ ನಡೆಯಲಿದೆ ಎಂಬ ಸುಳಿವು ಪತ್ರದಲ್ಲಿದೆ. ಮಲಯಾಳಂ ಭಾಷೆಯಲ್ಲಿ ಬರೆದಿರುವ ಬೆದರಿಕೆ ಪತ್ರವನ್ನು ಸುರೇಂದ್ರನ್​ ಅವರು ಕಳೆದ ವಾರ ಸ್ವೀಕರಿಸಿದ್ದು, ಅದನ್ನು ಡಿಜಿಪಿ ಅನಿಲ್​ ಕಾಂತ್​ ಅವರಿಗೆ ಹಸ್ತಾಂತರ ಮಾಡಿದ್ದಾರೆ. ಪತ್ರದ ಸತ್ಯಾಸತ್ಯತೆ ಮತ್ತು ಅದರ ಮೂಲದ ಬಗ್ಗೆ ಪೊಲೀಸರು ಇದೀಗ ತನಿಖೆ ನಡೆಸುತ್ತಿದ್ದಾರೆ.

    ಇದನ್ನೂ ಓದಿ: ಟ್ರಕ್‌ಗೆ ಬಸ್ ಡಿಕ್ಕಿ ; 7 ಜನ ಮೃತ್ಯು, 40 ಮಂದಿಗೆ ಗಂಭೀರ ಗಾಯ!

    ಲಘುವಾಗಿ ಪರಿಗಣಿಸಲಾಗುವುದಿಲ್ಲ

    ಪ್ರಧಾನಿ ಮೋದಿ ಅವರ ಪ್ರವಾಸಕ್ಕೆ ಮುನ್ನ ಗುಪ್ತಚರ ಎಡಿಜಿಪಿ ಟಿ.ಕೆ. ವಿನೋದ್ ಕುಮಾರ್ ಅವರು ರವಾನಿಸಿರುವ ವರದಿಯು ಕೇರಳದಲ್ಲಿ ಭದ್ರತಾ ಬೆದರಿಕೆಯ ಬಗ್ಗೆ ಎಚ್ಚರಿಕೆ ನೀಡಿದೆ. ವರದಿಯಲ್ಲಿ ಬೆದರಿಕೆ ಪತ್ರವನ್ನು ಉಲ್ಲೇಖಿಸಲಾಗಿದೆ. ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮೇಲಿನ ನಿಷೇಧದ ನಡುವೆ ಭದ್ರತಾ ಬೆದರಿಕೆಯನ್ನು ಲಘುವಾಗಿ ಪರಿಗಣಿಸಲಾಗುವುದಿಲ್ಲ ಎಂದು ವರದಿ ಹೇಳಿದೆ.

    ಭದ್ರತಾ ವ್ಯವಸ್ಥೆಯ ಕುರಿತಾದ ವರದಿ ಸೋರಿಕೆ ಹಿನ್ನೆಲೆಯಲ್ಲಿ ಬಿಜೆಪಿಯು ಕೇರಳ ಸರ್ಕಾರ ಮತ್ತು ಪೊಲೀಸರನ್ನು ತರಾಟೆಗೆ ತೆಗೆದುಕೊಂಡಿದೆ.

    ಯುವ ಸಮ್ಮೇಳನ

    ಅಂದಹಾಗೆ ಪ್ರಧಾನಿ ಮೋದಿ ಏಪ್ರಿಲ್​ 24ರಂದು ಬಿಜೆಪಿ ಪರ ಸಂಘಟನೆ ಆಯೋಜಿಸಿರುವ ಯುವಂ 2023 ಯುವ ಸಮ್ಮೇಳನದಲ್ಲಿ ಭಾಗಿಯಾಗಲು ಕೇರಳಕ್ಕೆ ಬರುತ್ತಿದ್ದಾರೆ. ಕೊಚ್ಚಿಯಲ್ಲಿ ಬೃಹತ್ ರೋಡ್ ಶೋನಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿದು ಬಂದಿದೆ.

    ಇದನ್ನೂ ಓದಿ: ನಿಮ್ಮನ್ನು ಎಂದಾದರೂ ಅರ್ಜುನ್​ ಔಟ್​ ಮಾಡಿದ್ದಾರೆಯೇ? ಸಚಿನ್​ ಕೊಟ್ಟ ಉತ್ತರ ವೈರಲ್​

    ಏಪ್ರಿಲ್ 25 ರಂದು ಉದ್ಘಾಟನೆಯಾಗಲಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಧಾನಿಯವರು ತಿರುವನಂತಪುರದಿಂದ ಕೊಲ್ಲಂಗೆ ಪ್ರಯಾಣಿಸುವ ನಿರೀಕ್ಷೆಯಿದೆ. ಬೆದರಿಕೆ ಹಿನ್ನೆಲೆಯಲ್ಲಿ ಕೇರಳ ಪೊಲೀಸರು ಭದ್ರತಾ ವ್ಯವಸ್ಥೆಯನ್ನು ತೀವ್ರಗೊಳಿಸಿದ್ದಾರೆ ಮತ್ತು ಬೆದರಿಕೆ ಪತ್ರದ ಕುರಿತು ತನಿಖೆ ಪ್ರಾರಂಭಿಸಿದ್ದಾರೆ. (ಏಜೆನ್ಸೀಸ್​)

    ವೇಶ್ಯಾವಾಟಿಕೆ ದಂಧೆ ಭೇದಿಸಿದ ಪೊಲೀಸರು; ರೆಡ್​ ಹ್ಯಾಂಡ್​ ಆಗಿ ಸಿಕ್ಕಿಬಿದ್ದ ನಟಿ

    ಹೊಟ್ಟೆಪಾಡಿಗಾಗಿ ಸಾಬೂನು ಮಾರಲು ಬಿಡದ ಕಾಮುಕರು: ವಿಡಿಯೋ ಮೂಲಕ ನಟಿ ಐಶ್ವರ್ಯಾ ಬೇಸರ

    ‘ಮಳೆಯಲ್ಲಿ ಸಾಂಗ್​ ಶೂಟಿಂಗ್​ ವೇಳೆ ಒಳ ಉಡುಪು ಧರಿಸಿರಲಿಲ್ಲ: ಮೇಲಕ್ಕೆತ್ತಿದಾಗ ರಜನಿ ಸರ್ ಗಲಿಬಿಲಿಗೊಂಡಿದ್ದರು’

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts