More

    ಗ್ರಹಣದ ಸಮಯದಲ್ಲೇ ಆಹಾರ ಸೇವನೆ; ಮೂಢನಂಬಿಕೆ ನಿವಾರಣೆ ನಿಟ್ಟಿನಲ್ಲಿ ಪ್ರತಿಭಟನೆ..

    ಬೆಂಗಳೂರು: ಖಗ್ರಾಸ ಸೂರ್ಯಗ್ರಹಣ ಸಂಭವಿಸಿದ್ದು, ರಾಜ್ಯದ ಹಲವೆಡೆ ದೇವಸ್ಥಾನದಲ್ಲಿ ದರ್ಶನಕ್ಕೆ ನಿರ್ಬಂಧ, ಗ್ರಹಣಾವಧಿಯಲ್ಲಿ ಆಹಾರ ಸೇವನೆ ವರ್ಜ್ಯ ಇತ್ಯಾದಿ ಕಟ್ಟಳೆಗಳು ನಡೆಯುತ್ತಿರುವ ನಡುವೆಯೇ ರಾಜಧಾನಿ ಬೆಂಗಳೂರಿನ ಪುರಭವನ ಬಳಿ ಪ್ರತಿಭಟನೆಯೊಂದು ನಡೆದಿದೆ.

    ಮೂಢನಂಬಿಕೆ ವಿರೋಧಿ ಒಕ್ಕೂಟ ಈ ವಿನೂತನ ಪ್ರತಿಭಟನೆ ಆಯೋಜಿಸಿದ್ದು, ಗ್ರಹಣ ಇರುವ ಸಮಯವಾದ ಐದರಿಂದ ಆರು ಗಂಟೆ ಅವಧಿಯಲ್ಲಿ ಆಹಾರ ವಿತರಣೆ ಹಾಗೂ ಸೇವನೆ ಕೈಗೊಂಡಿದೆ. ಗ್ರಹಣದ ಸಮಯದಲ್ಲಿ ಕೆಲವೊಂದು ಮೂಢನಂಬಿಕೆಗಳನ್ನು ಆಚರಿಸಲಾಗುತ್ತಿದ್ದು, ಅದನ್ನು ತೊಲಗಿಸುವ ಹಾಗೂ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಆಯೋಜಕರು ಹೇಳಿಕೊಂಡಿದ್ದಾರೆ.

    ವೈಜ್ಞಾನಿಕವಾಗಿ ಸೂರ್ಯಗ್ರಹಣವನ್ನು ನೋಡಬೇಕು ಎಂಬ ಉದ್ದೇಶದಿಂದ ಅವರು ಇದನ್ನು ಆಚರಿಸಿದ್ದು, ಈ ಸಂದರ್ಭದಲ್ಲಿ ಹಣ್ಣು, ಸಿಹಿ ತಿನಿಸು ಇತ್ಯಾದಿ ವಿತರಿಸಿ ಸೇವನೆ ಮಾಡಲಾಗಿದೆ. ರಾಜ್ಯದ ಕೆಲವು ಭಾಗಗಳಲ್ಲೂ ಇದೇ ರೀತಿ ಮಾಡಿರುವುದು ಕಂಡುಬಂದಿದೆ.

    ಗ್ರಹಣದ ಸಮಯದಲ್ಲೇ ಆಹಾರ ಸೇವನೆ; ಮೂಢನಂಬಿಕೆ ನಿವಾರಣೆ ನಿಟ್ಟಿನಲ್ಲಿ ಪ್ರತಿಭಟನೆ..

    ‘ಕಾಂತಾರ’ಕ್ಕೀಗ ಕಾನೂನುಕ್ರಮದ ‘ಕಿರಿಕ್​’: ಯಶಸ್ಸಿನ ಓಟಕ್ಕೆ ಬ್ರೇಕ್​ ಹಾಕುವ ಯತ್ನವೋ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts