ಬೆಳಗಾವಿ: ಜಿಲ್ಲೆಯಲ್ಲಿ ಹೆಸ್ಕಾಂನ ಮೀಟರ್ (ಮಾಪಕ) ಸಿಬ್ಬಂದಿ ನೇರವಾಗಿ ಗ್ರಾಹಕರ ಮನೆಗಳಿಗೆ ತೆರಳಿ ಮಾಪಕ ಓದಿ ರೀಡಿಂಗ್ ಪ್ರಕಾರ ಬಿಲ್ ನೀಡುತ್ತಿದ್ದಾರೆ. ಏಪ್ರಿಲ್ ತಿಂಗಳಿನಲ್ಲಿ 3 ತಿಂಗಳಿನ ಸರಾಸರಿ ವಿದ್ಯುತ್ ಬಳಕೆಯ ಆಧಾರದ ಮೇಲೆ ಏಪ್ರಿಲ್ ತಿಂಗಳ ಬಿಲ್ ಮಾಡಲಾಗಿತ್ತು. ಅಲ್ಲದೆ, ಮೇ ತಿಂಗಳಿನ ಬಿಲ್ ಹೊಂದಾಣಿಕೆ ಮಾಡಿ ನೀಡಲಾಗುತ್ತಿದೆ.
ಮೇ ತಿಂಗಳಿನ ಬಿಲ್ ಒಟ್ಟು ಎರಡು ತಿಂಗಳ ಬಳಕೆಯ ಬಿಲ್ ಆಗಿದ್ದು, ನೈಜ ವಿದ್ಯುತ್ ಬಳಕೆ ಆಧಾರದ ಪ್ರಕಾರ ಬಿಲ್ ನೀಡಲಾಗಿದೆ. ಏಪ್ರಿಲ್ ತಿಂಗಳಿನ ಸರಾಸರಿ ಬಿಲ್ ಪಾವತಿಸಿದ್ದಲ್ಲಿ ಮೇ ತಿಂಗಳಿನ ಬಿಲ್‌ನಲ್ಲಿ ಆ ಮೊತ್ತ ಕಡಿತಗೊಳಿಸಿ ಬಾಕಿ ಇಲ್ಲವೆಂದು ನಮೂದಿಸಲಾಗಿರುತ್ತದೆ. ಗ್ರಾಹಕರಿಗೆ ಅನುಮಾನಗಳಿದ್ದರೆ ಸಮೀಪದ ಹೆಸ್ಕಾಂ ಕಚೇರಿಗೆ ಭೇಟಿ ನೀಡಬಹುದು. ಇಲ್ಲವೆ, 1912ಕ್ಕೆ ಕರೆ ಮಾಡಿ ಪೋನ್ ನಂಬರ್, ಇ-ಮೇಲ್ ಐಡಿ ನೊಂದಾಯಿಸಿಕೊಳ್ಳಬೇಕು.
ಹೆಸ್ಕಾಂ ನಗದು ಪಾವತಿ ಕೌಂಟರ್‌ಗಳಲ್ಲಿ ವಿದ್ಯುತ್ ಬಿಲ್ಲ ಪಾವತಿಗೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ಸದುಪಯೋಗ ಪಡೆಯಬೇಕು ಎಂದು ಹೆಸ್ಕಾಂ ತಿಳಿಸಿದೆ.