More

    ಗ್ರಾಹಕರನ್ನು ವಂಚಿಸಿದರೆ ಕಠಿಣ ಶಿಕ್ಷೆ: ಸಿವಿಲ್ ನ್ಯಾಯಾಧೀಶೆ ನಿರ್ಮಲ ಎಚ್ಚರಿಕೆ

    ಮೊಳಕಾಲ್ಮೂರು: ಲಾಭದಾಸೆಗೆ ಕಳಪೆ ವಸ್ತುಗಳನ್ನು ಮಾರಾಟ ಮಾಡಿ ಗ್ರಾಹಕರನ್ನು ವಂಚಿಸಿದರೆ ಕಠಿಣ ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ವ್ಯಾಪಾರಿಗಳಿಗೆ ಸಿವಿಲ್ ನ್ಯಾಯಾಧೀಶೆ ಎಸ್.ನಿರ್ಮಲ ಎಚ್ಚರಿಕೆ ನೀಡಿದ್ದಾರೆ.

    ಗ್ರಾಹಕರ ಹಕ್ಕುಗಳ ದಿನಾಚರಣೆ ಅಂಗವಾಗಿ ಪಟ್ಟಣದ ನ್ಯಾಯಾಲಯದ ಸಭಾಂಗಣದಲ್ಲಿ ವಕೀಲರ ಸಂಘದ ಸಹಭಾಗಿತ್ವದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ ಏರ್ಪಡಿಸಿದ್ದ ‘ಕಾನೂನು ಅರಿವು’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಗ್ರಾಹಕರು ಗುಣಮಟ್ಟ ಮತ್ತು ಪಾರದರ್ಶಕತೆಯನ್ನು ಖಾತ್ರಿಪಡಿಸಿಕೊಂಡು ವಸ್ತುಗಳನ್ನು ಖರೀದಿಸಬೇಕು. ಅವುಗಳಿಗೆ ಕಡ್ಡಾಯವಾಗಿ ರಸೀದಿ ಪಡೆಯಬೇಕು. ಕಳಪೆ ಅಥವಾ ಅವಧಿ ಮೀರಿದ ವಸ್ತುಗಳೆಂದು ಕಂಡುಬಂದಲ್ಲಿ ಪರಿಹಾರಕ್ಕೆ ಗ್ರಾಹಕರ ವೇದಿಕೆ ಮೊರೆ ಹೋಗಬಹುದು. ಜಿಲ್ಲಾ ಹಂತದಲ್ಲಿ ಒಂದು ಕೋಟಿ ರೂಪಾಯಿವರೆಗೆ, ಅದಕ್ಕಿಂತ ಹೆಚ್ಚಿನ ಮೊತ್ತದ ಪ್ರಕರಣಗಳಿದ್ದರೆ ರಾಜ್ಯ ಮಟ್ಟದ ಗ್ರಾಹಕರ ನ್ಯಾಯಾಲಯದ ವ್ಯಾಪ್ತಿಗೆ ಬರುತ್ತದೆ ಎಂದು ತಿಳಿಸಿದರು.

    ವಕೀಲ ಟಿ.ಆರ್.ಷಮಿವುಲ್ಲಾ ಮಾತನಾಡಿ, ಹಿಂದಿನ ಕಾಲದಲ್ಲಿದ್ದ ವಸ್ತುಗಳ ವಿನಿಮಯ ಪದ್ಧತಿ ಕಾಲಕ್ರಮೇಣ ನಿಂತು ಹೋಯಿತು. ಇದೀಗ ಬಹುರಾಷ್ಟ್ರೀಯ ಕಂಪನಿಗಳು ಲಾಭಕ್ಕಾಗಿ ಕಳಪೆ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಿವೆ. ವಂಚನೆ ಜಾಲಗಳ ಕಡಿವಾಣಕ್ಕೆ 1956 ರಲ್ಲಿ ಗ್ರಾಹಕರ ವೇದಿಕೆ ನ್ಯಾಯಾಲಯದ ಕಾಯ್ದೆ ಜಾರಿಗೆ ತರಲಾಗಿದೆ. ವಂಚನೆಗೆ ಒಳಗಾದವರು ಷರತ್ತುಗಳ ಅನ್ವಯ ಕಾಲಮಿತಿಯಲ್ಲಿ ಸೂಕ್ತ ಪರಿಹಾರ ಪಡೆಯಬಹುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts