More

    ಜನಸಾಮಾನ್ಯನಿಗೂ ಅಧಿಕಾರ ಸಿಗಲು ಸಂವಿಧಾನ ಕಾರಣ

    ಲಿಂಗದಹಳ್ಳಿ: ಕೆಲವೇ ವರ್ಗಗಗಳಿಗೆ ಸೀಮಿತವಾಗಿದ್ದ ರಾಜಕೀಯ ಮತ್ತಿತರ ಅಧಿಕಾರಗಳು ಇಂದು ದೇಶದ ಪ್ರತಿಯೊಬ್ಬ ಜನಸಾಮಾನ್ಯನೂ ಅನುಭವಿಸುತ್ತಿದ್ದಾನೆ ಎಂದರೆ ಅದಕ್ಕೆ ಸಂವಿಧಾನ ಕಾರಣ ಎಂದು ನಂದಿಬಟ್ಟಲು ಗ್ರಾಪಂ ಅಧ್ಯಕ್ಷ ಅಬುಬಕರ್ ಕುಟ್ಟಿ ಹೇಳಿದರು.

    ಮಂಗಳವಾರ ನಂದಿಬಟ್ಟಲು ಗ್ರಾಪಂ ಆವರಣಕ್ಕೆ ಆಗಮಿಸಿದ ಸಂವಿಧಾನ ಜಾಗೃತಿ ಜಾಥಾವನ್ನು ಗ್ರಾಪಂ ಆಡಳಿತ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಮತ್ತಿತರ ಸರ್ಕಾರಿ ಶಾಲೆಗಳ ಮಕ್ಕಳು ಪೂರ್ಣಕುಂಭದೊಂದಿಗೆ ಸ್ವಾಗತಿಸಿದ ನಂತರ ಮಾತನಾಡಿದರು.
    ಸಾಮಾನ್ಯ ಮನುಷ್ಯ ತನ್ನ ಸಾಮರ್ಥ್ಯಕ್ಕೆ ತಕ್ಕಂತೆ ಉನ್ನತ ಸ್ಥಾನಕ್ಕೂ ಏರಬಹುದು. ಸಾಮಾನ್ಯ ವ್ಯಕ್ತಿಯಾಗಿದ್ದ ನರೇಂದ್ರ ಮೋದಿ ಪ್ರಧಾನಿಯಾಗಿ ಮತ್ತು ಬುಡಕಟ್ಟು ಸಮುದಾಯದ ದ್ರೌಪದಿ ಮುರ್ಮು ಅವರು ರಾಷ್ಟ್ರಪತಿಯಾಗಿರುವುದೇ ಇದಕ್ಕೆ ಸಾಕ್ಷಿ. ಮೀಸಲಾತಿಯಿಂದಾಗಿ ಗ್ರಾಪಂ, ತಾಪಂ, ಜಿಪಂ ವಿಧಾನಸಭಾ ಹಾಗೂ ಲೋಕಸಭಾ ಸದಸ್ಯರಾಗಲು ಸಾಧ್ಯವಿದೆ. ಪ್ರತಿಯೊಬ್ಬರು ಒಂದಲ್ಲಾ ಒಂದು ಅವಕಾಶ, ಸರ್ಕಾರಿ ಸೌಲಭ್ಯ ಪಡೆಯಬಹುದು ಎಂದು ಹೇಳಿದರು.
    ಉಪಾಧ್ಯಕ್ಷೆ ಲಕ್ಷ್ಮಮ್ಮ, ಸದಸ್ಯರಾದ ಎನ್.ಜೆ.ಭದ್ರೇಗೌಡ, ಎನ್.ರಮೇಶ್, ಕೃಷ್ಣನಾಯ್ಕ, ಸೌಮ್ಯಾ, ವಾಣಿ, ಅನ್ನಪೂರ್ಣಮ್ಮ, ತುಂಗಾಬಾಯಿ, ಮಾರ್ಗದರ್ಶಿ ಅಧಿಕಾರಿ ಡಿ.ದೇವೇಂದ್ರಪ್ಪ, ಪಿಡಿಒ ಎನ್.ಎಸ್.ನಾಗರಾಜಪ್ಪ, ಮೊರಾರ್ಜಿ ವಸತಿ ಶಾಲಾ ಪ್ರಾಚಾರ್ಯ ಇತರರಿದ್ದರು.
    ತಿಗಡ ಗ್ರಾಪಂ: ಭಾರತದ ಸಂವಿಧಾನ ಜಾರಿಗೆ ಬಂದ 75ನೇ ವರ್ಷದ ಸಂಭ್ರಮಾಚರಣೆ ಅಂಗವಾಗಿ ರಾಜ್ಯಾದ್ಯಂತ ಸಂವಿಧಾನ ಜಾಗೃತಿ ರಥ ಸಂಚರಿಸುತ್ತಿದೆ. ಡಾ. ಬಿ.ಆರ್.ಅಂಬೇಡ್ಕರ್ ಅವರ ಸಾಧನೆ ಅಪ್ರತಿಮ. ಕಡು ಬಡತನದಲ್ಲಿ ವಿದ್ಯಾಭ್ಯಾಸ ಮಾಡಿ ಉನ್ನತ ಸ್ಥಾನಗಳೊಂದಿಗೆ ದೇಶದ ದೀನದಲಿತರ, ನಿರ್ಗತಿಕರ ಏಳಿಗೆಗಾಗಿ ಶ್ರಮಿಸಿದ ಮಹಾನ್ ನಾಯಕ ಎಂದು ತಿಗಡ ಗ್ರಾಪಂ ಅಧ್ಯಕ್ಷೆ ಶ್ರೀದೇವಿ ಸತೀಶ್ ಬಣ್ಣಿಸಿದರು.
    ಜಾಗೃತಿ ರಥಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು, ನಾನು ಗ್ರಾಪಂ ಅಧ್ಯಕ್ಷೆಯಾಗಿ ಕಾರ್ಯನಿರ್ವಹಿಸಲು ಸಹ ಸಂವಿಧಾನವೇ ಪ್ರಮುಖ ಕಾರಣ ಎಂದರು. ಗ್ರಾಪಂ ಉಪಾಧ್ಯಕ್ಷ ಆರ್.ಮುರುಗ, ಸದಸ್ಯರಾದ ರಮೇಶ್, ಗೋವಿಂದೇಗೌಡ, ಲಕ್ಷ್ಮೀಬಾಯಿ, ಮಂಜುಳಮ್ಮ, ಮಂಜುಳಾ, ಪಿಡಿಒ ಶಿವಮೂರ್ತಿ, ಕಾರ್ಯದರ್ಶಿ ಜಯಣ್ಣ, ಮಾರ್ಗದರ್ಶಿ ಅಧಿಕಾರಿ ಡಿ.ದೇವೇಂದ್ರಪ್ಪ, ಕಂದಾಯ ಅಧಿಕಾರಿ ರಮೇಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts