More

    ನೆಮ್ಮದಿಯ ಬದುಕು ನಡೆಸಲು ಸಂವಿಧಾನ ಕಾರಣ

    ಕೆ.ಆರ್.ನಗರ: ಸಮಾಜದಲ್ಲಿ ನೆಮ್ಮದಿಯ ಬದುಕು ನಡೆಸಲು ಡಾ.ಬಿ.ಆರ್.ಅಂಬೇಡ್ಕರ್ ಅವರು ನೀಡಿದ ಸಂವಿಧಾನವೇ ಕಾರಣವಾಗಿದೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

    ಪಟ್ಟಣದ ಮೈಸೂರು ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ 133ನೇ ಜಯಂತಿ ಅಂಗವಾಗಿ ಭಾನುವಾರ ಅವರ ಪುತ್ಥಳಿಗೆ ಮಾಲಾರ್ಪಣೆ ಮಾಡಿ ಮಾತನಾಡಿದ ಅವರು, ಇಂದು ದೇಶದಲ್ಲಿ ಹಲವು ಜಾತಿ, ಧರ್ಮ, ಭಾಷಿಕರಿಗೂ ಸಮಾನ ಅವಕಾಶ ಸಿಗಬೇಕು. ಹಕ್ಕುಗಳೂ ಇರಬೇಕು ಎಂಬ ಉದ್ದೇಶದಿಂದ ನಮ್ಮ ಸಂವಿಧಾನ ರಚನೆಯಾಗಿದ್ದು, ನಮ್ಮ ಸಂವಿಧಾನವನ್ನು ನೋಡಿ ಹಲವು ರಾಷ್ಟ್ರಗಳು ಸಂವಿಧಾನವನ್ನು ಅಳವಡಿಸಿಕೊಂಡಿರುವುದು ನಮಗೆ ಹಿರಿಮೆಯಾಗಿದೆ ಎಂದರು.

    ಎಲ್ಲರು ಶಿಕ್ಷಿತರಾಗಿ, ಸಂಘಟಿತರಾಗಿ ಪ್ರಗತಿ ಸಾಧಿಸುತ್ತಿರುವುದು ಹಾಗೂ ರಾಜಕೀಯ ಸ್ಥಾನಮಾನಗಳನ್ನು ಹೊಂದಿರುವುದು ಸಂವಿಧಾನದಡಿಯಲ್ಲೇ ಆಗಿದ್ದು ನಾವೆಲ್ಲ ಅದರಂತೆಯೇ ನಡೆಯಬೇಕಾಗಿದೆ. ಪ್ರತಿಯೊಬ್ಬರಿಗೂ ಅಧಿಕಾರ ಮತ್ತು ಸವಲತ್ತುಗಳಲ್ಲಿ ಸಮಾನತೆ ಇರಬೇಕು ಎಂಬ ಬಾಬಾ ಸಾಹೇಬರ ಉದ್ದೇಶದಂತೆ ನಾವು ತಾಲೂಕಿನಲ್ಲಿ ಅಭಿವೃದ್ಧಿ ಕಾಣದೆ ಹಿಂದಳಿದ ಗ್ರಾಮಗಳು, ಸಮುದಾಯಗಳಿಗೆ ಹೆಚ್ಚು ಒತ್ತು ನೀಡುವ ಮೂಲಕ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

    ಅಂಬೇಡ್ಕರ್ ಅವರ ತತ್ವ ಸಿದ್ಧಾಂತಗಳನ್ನು ಅವರ ಜಯಂತಿಯಂದು ಮಾತ್ರ ಅರಿಯದೇ ಪ್ರತಿನಿತ್ಯ ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ನಡೆದರೆ ಸಮಾಜ ಮತ್ತು ದೇಶ ಮತ್ತಷ್ಟು ಅಭಿವೃದ್ಧಿ ಪಥದಲ್ಲಿ ಸಾಗಲಿದೆ ಎಂದು ತಿಳಿಸಿದರು.

    ಜಿಪಂ ಮಾಜಿ ಸದಸ್ಯ ಅರ್ಜುನಹಳ್ಳಿ ರಾಜಯ್ಯ, ತಾಪಂ ಮಾಜಿ ಅಧ್ಯಕ್ಷ ಎಂ.ಎಚ್.ಸ್ವಾಮಿ, ಪುರಸಭಾ ಸದ್ಯಸರಾದ ಕೋಳಿಪ್ರಕಾಶ್, ಶಂಕರ್‌ಸ್ವಾಮಿ, ಮಿಕ್ಸರ್ ಶಂಕರ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ನಗರಾಧ್ಯಕ್ಷ ಎಂ.ಜೆ.ರಮೇಶ್, ಎಸ್‌ಸಿ ಘಟಕದ ಅಧ್ಯಕ್ಷ ನಂದೀಶ್, ಎಂಎಸ್‌ಎಸ್ ತಾಲೂಕು ಅಧ್ಯಕ್ಷ ಮಧುವನಹಳ್ಳಿ ರವಿಕುಮಾರ್, ವಕೀಲರಾದ ಮೂರ್ತಿ, ಕಾಂತರಾಜ್, ಮುಖಂಡರಾದ ಕಂಚುಗಾರಕೊಪ್ಪಲು ಸ್ವಾಮಿ, ಗೀತಾಮಹೇಶ್, ಮಂಜುರಾಜ್, ಎಂ.ಎಸ್.ನಂಜುಂಡಸ್ವಾಮಿ, ರವಿ ಪೂಜಾರಿ, ಕಂಟ್ರಾಕ್ಟ್‌ರ್ ಕುಮಾರ್, ರಾಜಯ್ಯ, ಸಿದ್ದಾಪುರ ರಮೇಶ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts