More

    ಪಾಂಡವಪುರದಲ್ಲಿ ಸಂವಿಧಾನ ಜಾಗೃತಿ ರಥ ಸಂಚಾರ

    ಪಾಂಡವಪುರ: ಸಂವಿಧಾನ ಜಾಗೃತಿ ಜಾಥಾ ರಥವನ್ನು ತಾಲೂಕಿನ ಗಡಿ ಗ್ರಾಮ ಡಿಂಕಾದಲ್ಲಿ ಶಾಸಕ ದರ್ಶನ್ ಪುಟ್ಟಣ್ಣಯ್ಯ ನೇತೃತ್ವದಲ್ಲಿ ಗುರುವಾರ ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.


    ವಿವಿಧ ಜಾನಪದ ಕಲಾತಂಡಗಳಾದ ಪೂಜಾ ಕುಣಿತ, ಡೊಳ್ಳು ಕುಣಿತ, ಕಂಸಾಳೆ ನೃತ್ಯ, ಕಳಸ ಹೊತ್ತ ಮಹಿಳೆಯರು ಸಂವಿಧಾನ ಜಾಗೃತಿ ರಥಕ್ಕೆ ಮೆರುಗು ನೀಡಿದರು. ವಿವಿಧ ಶಾಲೆಯ ವಿದ್ಯಾರ್ಥಿಗಳು ರಾಷ್ಟ್ರ ನಾಯಕರ ವೇಷ ಭೂಷಣದಲ್ಲಿ ಭಾಗವಹಿಸಿದ್ದರು. ಸಂವಿಧಾನ ಪೀಠಿಕೆಯನ್ನು ಓದುವ ಮೂಲಕ ಜನರಿಗೆ ಅರಿವು ಮೂಡಿಸುವ ಜತೆಗೆ ಮುದ್ರಿತ ಪ್ರತಿಗಳನ್ನು ಹಂಚಲಾಯಿತು.


    ತಾಲೂಕಿನಾದ್ಯಂತ ಜಾಥಾ ಮೂರು ದಿನ ಸಂಚರಿಸಲಿದ್ದು, ತಾಲೂಕಿನ ಡಿಂಕಾ, ಬನ್ನಂಗಾಡಿ, ಕಟ್ಟೇರಿ, ಅರಳಕುಪ್ಪೆ, ಹೊನಗಾನಹಳ್ಳಿ, ಗುಮ್ಮನಹಳ್ಳಿ, ಚಿನಕುರಳಿ, ನಾರಾಯಣಪುರ, ಬಳಿಘಟ್ಟ, ಕೆನ್ನಾಳು ಪಂಚಾಯಿತಿ ವ್ಯಾಪ್ತಿಗಳಲ್ಲಿ ಸಂಚರಿಸಿದ ಬಳಿಕ ರೈಲ್ವೆ ನಿಲ್ದಾಣದ ಮಾರ್ಗವಾಗಿ ಶ್ರೀರಂಗಪಟ್ಟಣಕ್ಕೆ ತೆರಳಲಿದೆ.


    ತಹಸೀಲ್ದಾರ್ ಜಿ.ಎಸ್.ಶ್ರೇಯಸ್, ತಾಲೂಕು ಪಂಚಾಯಿತಿ ಇಒ ಲೋಕೇಶ್‌ಮೂರ್ತಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮಲ್ಲೇಶ್, ಅಧಿಕಾರಿಗಳಾದ ಲೋಕೇಶ್, ಕೋಮಲಾ, ಅರುಣ್, ಜಯರಾಮು, ಹಂಸವೇಣಿ, ರೂಪಾ, ಉಪತಹಸೀಲ್ದಾರ್ ಲಕ್ಷ್ಮೀಕಾಂತ್, ದಸಂಸ ಮುಖಂಡ ಡಿ.ಕೆ.ಅಂಕಯ್ಯ, ಬನ್ನಂಗಾಡಿ ಸ್ವಾಮಿ, ಎ.ಜಿ.ಬಸವರಾಜು, ಕೆ.ಬಿ.ರಾಮು, ಟಿ.ಎಸ್.ಹಾಳಯ್ಯ, ಬ್ಯಾಡರಹಳ್ಳಿ ಪ್ರಕಾಶ್, ಕನಗನಮರಡಿ ಬೊಮ್ಮರಾಜು, ಅಲ್ಪಹಳ್ಳಿ ಗೋವಿಂದಯ್ಯ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts