More

    ಮೈದುಂಬಿ ಹರಿಯುತ್ತಿವೆ ತುಂಗಭದ್ರಾ, ವರದಾ; ನದಿಪಾತ್ರದ ಗ್ರಾಮಸ್ಥರು, ರೈತರಲ್ಲಿ ಆತಂಕ

    ಹಾವೇರಿ: ರಾಣೆಬೆನ್ನೂರ ಸೇರಿ ಜಿಲ್ಲಾದ್ಯಂತ ಕಳೆದ ಒಂದು ವಾರದಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ಥಗೊಂಡಿದೆ. ಜಿಲ್ಲೆಯಲ್ಲಿ ಹರಿದಿರುವ ವರದಾ, ಕುಮುದ್ವತಿ ಹಾಗೂ ತುಂಗಭದ್ರಾ ನದಿಗಳು ಮೈದುಂಬಿ ಹರಿಯುತ್ತಿದ್ದು, ಮಳೆ ಇದೇ ರೀತಿ ಮುಂದುವರಿದರೆ ನದಿ ಅಂಚಿನ ಗ್ರಾಮಗಳು, ಜಮೀನುಗಳು ಜಲಾವೃತವಾಗುವ ಸಾಧ್ಯತೆಯಿದೆ.
    ಮಳೆಗಾಲ ಆರಂಭವಾಗಿದ್ದರೂ ಕಳೆದ 8 ದಿನದ ಹಿಂದೆ ಮಳೆ ಕೊರತೆಯಿಂದ ಬರೀದಾಗಿ ಕಾಣಿಸುತ್ತಿದ್ದ ಜಿಲ್ಲೆಯ ತುಂಗಭದ್ರಾ, ವರದಾ ಹಾಗೂ ಕುಮುದ್ವತಿ ನದಿಗಳು ಇದೀಗ ಶಿವಮೊಗ್ಗ, ಉತ್ತರ ಕನ್ನಡ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿರುವ ಕಾರಣ ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಆದ್ದರಿಂದ ನದಿಗಳು ಮೈದುಂಬಿಕೊಂಡು ಹರಿಯತೊಡಗಿವೆ.
    ಸೇತುವೆ ಮುಳುಗಡೆ…
    ಸವಣೂರ ತಾಲೂಕಿನ ಕಳಸೂರು-ಕೋಳೂರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಬ್ರೀಜ್ ಕಮ್ ಬ್ಯಾರೇಜ್ ವರದಾ ನದಿಯಲ್ಲಿ ಸಂಪೂರ್ಣ ಮುಳಗಿ ಹೋಗಿದ್ದು, ಗ್ರಾಮಸ್ಥರು ಜಿಲ್ಲಾ ಕೇಂದ್ರ ಹಾವೇರಿಗೆ ಬರಬೇಕಾದರೆ 35 ಕಿ.ಮೀ. ಸುತ್ತುವರೆದು ಬರುವ ಸ್ಥಿತಿ ಎದುರಾಗಿದೆ.
    ನದಿಪಾತ್ರದ ರೈತರಲ್ಲಿ ಆತಂಕ…
    ಸದ್ಯ ತುಂಗಭದ್ರಾ, ವರದಾ, ಕುಮುದ್ವತಿ ನದಿಗಳು ತಮ್ಮ ವ್ಯಾಪ್ತಿಯ ಅಂಚಿಗೆ ಹೊಂದಿಕೊಂಡು ಹರಿಯುತ್ತಿವೆ. ಮಳೆ ಇದೇ ರೀತಿ ಮುಂದುವರಿದರೆ ನದಿ ನೀರು ಅಕ್ಕಪಕ್ಕದ ಜಮೀನು, ಭತ್ತದ ಗದ್ದೆಗಳಿಗೆ ನುಗ್ಗಲಿದೆ. ಇನ್ನೂ ಹೆಚ್ಚಿನ ಮಳೆಯಾದರೆ ಹಾವೇರಿ ತಾಲೂಕಿನ ಗುಹಿಲಗುಂದಿ, ಕಂಚಾರಗಟ್ಟಿ, ಹಳೆ ಹಳ್ಳಳ್ಳಿ, ಗಳಗನಾಥ ಹಾಗೂ ವರದಾ ನದಿ ಪಾತ್ರದ ಬೆಳವಗಿ, ಅಂಬೇಡ್ಕರ್ ನಗರ, ನಾಗನೂರ, ವರದಹಳ್ಳಿ, ಕೆಸರಹಳ್ಳಿ ನೀರು ನುಗ್ಗುವ ಆತಂಕ ಎದುರಾಗಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts