More

    ವನ್ಯಜೀವಿಗಳ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ- ಚಿತ್ತಾಪುರ ತಾಪಂ ಇಒ ನೀಲಗಂಗಾ

    ಚಿತ್ತಾಪುರ: ಅರಣ್ಯ ಹಾಗೂ ವನ್ಯಜೀವಿಗಳ ಸಂಪತ್ತು ಉಳಿದಾಗಲೇ ಸಮೃದ್ಧ ವಾತಾವರಣ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಕಾಡು ಬೆಳೆಸಿ ಉಳಿಸಬೇಕು ಎಂದು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ನೀಲಗಂಗಾ ಬಬಲಾದ ಕರೆ ನೀಡಿದರು.

    ಯಾಗಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬೆಳಗೇರಾದಲ್ಲಿ ಶನಿವಾರ ಹಮ್ಮಿಕೊಂಡಿದ್ದ ರಾಷ್ಟಿçÃಯ ವನ್ಯಜೀವಿ ಸಪ್ತಾಹ ಮತ್ತು ಜಾನುವಾರುಗಳಿಗೆ ಕಾಲುಬಾಯಿ ಲಸಿಕೆ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ಅವರು, ವನ್ಯಜೀವಿಗಳ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ. ಮಾನವನ ದುರಾಸೆಯಿಂದಾಗಿ ಅರಣ್ಯ ಸಂಪತ್ತು ನಾಶವಾಗುತ್ತಿದೆ. ಇದರಿಂದ ವನ್ಯಜೀವಿಗಳು ಬದುಕುವುದು ಕಷ್ಟವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದರು.

    ವಲಯ ಅರಣ್ಯಾಧಿಕಾರಿ ವಿಜಯಕುಮಾರ ಮಾತನಾಡಿ, ಭೂಮಿ, ಪರಿಸರ ಮನುಷ್ಯನಿಗಷ್ಟೇ ಸೇರಿದ್ದಲ್ಲ. ಪ್ರಾಣಿ-ಪಕ್ಷಿಗಳಿಗೂ ಸೇರಿದ್ದು. ಹೀಗಾಗಿ ಅರಣ್ಯ, ವನ್ಯಜೀವಿಗಳ ರಕ್ಷಣೆಯಲ್ಲಿ ಎಲ್ಲರೂ ಪಾಲುದಾರರಾಗಬೇಕು. ಇಂದಿನ ಮಕ್ಕಳಿಗೆ ಅರಣ್ಯ ರಕ್ಷಣೆ ಬಗ್ಗೆ ಅರಿವು ಮೂಡಿಸಬೇಕು. ಅಂದಾಗಲೇ ಸಸ್ಯ ಸಂಪತ್ತು ಉಳಿಯಲು ಸಾಧ್ಯ ಎಂದರು.

    ಪಶು ವೈದ್ಯಕೀಯ ಅಧಿಕಾರಿ ಶಂಕರ ಕಣ್ಣಿ ಮಾತನಾಡಿ, ಜಾನುವಾರುಗಳಿಗೆ ಕಾಲುಬಾಯಿ ಸಾಂಕ್ರಾಮಿಕ ಕಾಯಿಲೆ ಹರಡುತ್ತಿದ್ದು, ರೈತರು ಎಚ್ಚರಿಕೆ ವಹಿಸಬೇಕು. ಯಾವುದೇ ರೋಗ ಕಾಣಿಸಿಕೊಂಡರೆ ತಕ್ಷಣ ಹತ್ತಿರದ ಪಶು ಆಸ್ಪತ್ರೆಗೆ ಜಾನುವಾರುಗಳನ್ನು ಕರೆತಂದು ಚಿಕಿತ್ಸೆ ಕೊಡಿಸಬೇಕು ಎಂದು ಸಲಹೆ ನೀಡಿದರು.

    ಗ್ರಾಪಂ ಅಧ್ಯಕ್ಷೆ ಶಾಂತಿಬಾಯಿ ಚವ್ಹಾಣ್, ಉಪಾಧ್ಯಕ್ಷ ಗೋವಿಂದ ಚವ್ಹಾಣ್, ಪ್ರಮುಖರಾದ ಸಂತೋಷ, ಅನೀಲಕುಮಾರ, ನಾಗಪ್ಪ, ರಮೇಶ, ಜಾಫರ್, ಬೋರು ರಾಠೋಡ್, ದಶರಥ ರಾಠೋಡ್, ಮದನ್ ರಾಠೋಡ್, ಅನಂತರೆಡ್ಡಿ ಪಾಟೀಲ್, ಧನರಾಜ ಸಾಹುಕಾರ, ರಾಮು ಚವ್ಹಾಣ್, ಶಾಂತಪ್ಪ ಜ್ಞಾನಮಿತ್ರ, ಪೋಮು ರಾಠೋಡ್, ಕಿಶನ್ ರಾಠೋಡ್, ರವಿ ರಾಠೋಡ್, ವಿಜಯಕುಮಾರ ಚವ್ಹಾಣ್, ಕುಮಾರ ಚವ್ಹಾಣ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts