More

    ರಾಯರು ಇಷ್ಟಾರ್ಥ ಪೂರೈಸುವ ಕಾಮಧೇನು

    ಸೇಡಂ: ಮಂತ್ರಾಲಯದ ಗುರು ಶ್ರೀ ರಾಘವೇಂದ್ರ ಸ್ವಾಮಿಗಳು ಭಕ್ತರ ಇಷ್ಟಾರ್ಥ ಪೂರೈಸುವ ಕಾಮಧೇನು ಆಗಿದ್ದಾರೆ ಎಂದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ನುಡಿದರು.

    ಪಟ್ಟಣದ ಕೋಡ್ಲಾ ರಸ್ತೆಯ ಲಕ್ಷ್ಮೀನಗರ ಬಡಾವಣೆಯಲ್ಲಿ ನಿರ್ಮಾಣಗೊಂಡ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಶುಕ್ರವಾರ ಗುರುರಾಯರ ಮೃತ್ತಿಕಾ ವೃಂದಾವನ ಪ್ರತಿಷ್ಠಾಪನಾ ಪೂಜೆ ನೆರವೇರಿಸಿದ ಅವರು, ಆಕಳನ್ನು ನಾವು ಗೋ ಮಾತೆ ಎನ್ನುತ್ತೇವೆ. ಅಲ್ಲಲ್ಲಿ ಹುಲ್ಲು ತಿಂದು ನಮಗೆ ಅಮೃತ ಸಮಾನ ಹಾಲು ನೀಡುತ್ತದೆ. ಅದನ್ನು ಕಡಿಯುವವನಿಗೆ ಎಂದಿಗೂ ವಿಷ ನೀಡುವುದಿಲ್ಲ. ಅದರ ಸಂತಾನವಾದ ಎತ್ತುಗಳ ಹೆಗಲ ಮೇಲೆ ನೊಗ ಇಡುವವರಿಗೆ ಅದೇ ಅಮೃತ ಸಮಾನ ಹಾಲು ನೀಡಿ ತನ್ನಲ್ಲಿನ ಮಾತೃತ್ವ ತಿಳಿಸುವ ಗುಣ ಹೊಂದಿದೆ ಎಂದರು.

    ಸದಾ ಭಕ್ತರ ಸಂಕಷ್ಟಕ್ಕೆ ಮಿಡಿಯುವ ಗುರುರಾಯರು ಇಂದು ಸೇಡಂನಲ್ಲಿ ನೆಲೆಸಿದ್ದಾರೆ. ಮಠದಲ್ಲಿ ನಿತ್ಯ ವಿಧಿವತ್ತಾದ ಪೂಜಾ ಕೈಂಕರ್ಯಗಳು ಜರುಗಲಿದ್ದು, ಮುದೊಂದು ದಿನ ದೊಡ್ಡ ಧಾರ್ಮಿಕ ಕೇಂದ್ರವಾಗಿ ಅಭಿವೃದ್ಧಿ ಹೊಂದಲಿದೆ. ಇದಕ್ಕೆ ಈ ತಾಲೂಕು ಅಲ್ಲದೆ ಸುತ್ತಲಿನ ಊರಿನ ಭಕ್ತರ ಸಹಕಾರ ಸದಾ ಇರಬೇಕು ಎಂದು ಆಶಿಸಿದರು.

    ಗುರುವಾರ ರಾತ್ರಿ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ನಿವೃತ್ತ ಪ್ರಾಧ್ಯಾಪಕ ಡಾ.ವಾಸುದೇವ ಅಗ್ನಿಹೋತ್ರಿ ಅವರ ದಾಸಧೇನು ಪುಸ್ತಕವನ್ನು ಪೂಜ್ಯರು ಲೋಕಾರ್ಪಣೆಗೊಳಿಸಿದರು.

    ಸಿಂಧನಮಡುವಿನ ಶ್ರೀ ಸಂತೋಷ ಮಹಾರಾಜರು, ಸಚಿವ ಡಾ.ಶರಣಪ್ರಕಾಶ ಪಾಟೀಲ್, ಮಾಜಿ ಶಾಸಕ ರಾಜಕುಮಾರ ಪಾಟೀಲ್ ತೆಲ್ಕೂರ, ಬ್ರಾಹ್ಮಣ ಸಮಾಜದ ತಾಲೂಕು ಅಧ್ಯಕ್ಷ ಕಾಶೀನಾಥರಾವ ಕುಲಕರ್ಣಿ, ಪ್ರಮುಖರಾದ ಡಾ.ಭಾಗ್ಯಶ್ರೀ ಪಾಟೀಲ್, ಕೃಷ್ಣಾಜಿ ಕುಲಕರ್ಣಿ, ವಾದಿರಾಜ ಆಚಾರ್ಯ, ಸಂತೋಷ ಕುಲಕರ್ಣಿ, ವೆಂಕಟೇಶ ಕುಲಕರ್ಣಿ, ಮೋಹನ ಓಂಕಾರ, ಪಾಂಡುರಂಗ ಜೋಶಿ, ಡಾ.ಮುರಳೀಧರ ದೇಶಪಾಂಡೆ, ಡಾ.ವಾಸುದೇವ ಅಗ್ನಿಹೋತ್ರಿ, ಪ್ರಭಾಕರ ಜೋಶಿ, ನಾರಾಯಣರಾವ ಕುರಕುಂಟಾ, ಶ್ರೀನಿವಾಸ ಸೇಡಂ, ಭಾಗ್ಯಶ್ರೀ ಸುಧಾಕರ, ಮಂಜುಳಾ ಸೇಡಂಕರ್, ರಘುನಂದನ ಕುಲಕರ್ಣಿ, ಪದ್ಮನಾಭ ಆಚಾರ್ಯ, ಗುಂಡೇರಾವ ಕುಲಕರ್ಣಿ, ವಿನಾಯಕ ಜೋಶಿ, ಜಗನ್ನಾಥ ದೇಶಕ್ ಇತರರಿದ್ದರು.

    ಅಲಂಕೃತ ಸಾರೋಟಿನಲ್ಲಿ ಶ್ರೀಗಳ ಭವ್ಯ ಮೆರವಣಿಗೆ: ಶ್ರೀಮಠದ ಮೃತ್ತಿಕಾ ವೃಂದಾವನ ಸ್ಥಾಪನೆಗೆ ಗುರುವಾರ ರಾತ್ರಿ ಪಟ್ಟಣಕ್ಕೆ ಆಗಮಿಸಿದ ಶ್ರೀ ಸುಬುಧೇಂದ್ರ ತೀರ್ಥರನ್ನು ರೈಲ್ವೆ ನಿಲ್ದಾಣ ಎದುರಿನ ಕರೋಡಗಿರಿ ಹನುಮಾನ ಮಂದಿರ ಬಳಿ ಅದ್ದೂರಿಯಾಗಿ ಸ್ವಾಗತಿಸಲಾಯಿತು. ನಂತರ ಪೂಜ್ಯರನ್ನು ಅಲಂಕೃತ ಸಾರೋಟಿನಲ್ಲಿ ಕೂಡಿಸಿ ಶ್ರೀ ಲಕ್ಷ್ಮೀನಾರಾಯಣ ದೇಗುಲವರೆಗೆ ಭವ್ಯ ಮೆರವಣಿಗೆ ನಡೆಸಲಾಯಿತು. ಡೊಳ್ಳು ಕುಣಿತ, ಸಾಂಪ್ರದಾಯಿಕ ಉಡುಗೆಯಲ್ಲಿ ಮಹಿಳೆಯರ ಕೋಲಾಟ ಮೆರುಗು ನೀಡಿತು.

    ಸೇಡಂನಲ್ಲಿ ಶ್ರೀ ರಾಘವೇಂದ್ರ ಸ್ವಾಮಿಗಳ ಮಠ ನಿರ್ಮಾಣವಾಗಬೇಕೆಂಬ ಭಕ್ತರ ಎರಡು ದಶಕದ ಕನಸು ಇಂದು ನನಸಾಗಿದೆ. ಈ ಮೊದಲು ರಾಯರ ಆರಾಧನೆ ಬ್ರಾಹ್ಮಣ ಓಣಿಯಲ್ಲಿರುವ ಶ್ರೀ ಪಾಂಡುರAಗ ಮಂದಿರದಲ್ಲಿ ನಡೆಯುತ್ತಿತ್ತು. ಇಂದಿನಿAದ ಮಠದಲ್ಲಿಯೇ ಆರಾಧನೆ ಜರುಗಲಿದೆ. ಅಸಂಖ್ಯ ಭಕ್ತರ ಶ್ರಮ ಮತ್ತು ದೇಣಿಗೆಯ ಫಲವಾಗಿ ಮಠ ತಲೆ ಎತ್ತಿದೆ.
    | ಶ್ರೀ ಸುಬುಧೇಂದ್ರ ತೀರ್ಥರು ಮಂತ್ರಾಲಯ

    ಗುರುರಾಯರ ಸನ್ನಿಧಾನ ಸರ್ವ ಕಷ್ಟಗಳ ನಿವಾರಣಾ ಕೇಂದ್ರವಿದ್ದಂತೆ. ಮೂಲ ಬೃಂದಾವನಕ್ಕೆ ಆಗಮಿಸಿ ಯಾರು ರಾಯರ ಸೇವೆ ಮಾಡುತ್ತಾರೆಯೋ ಅವರ ಕಷ್ಟಗಳೆಲ್ಲವೂ ದೂರವಾಗುತ್ತವೆ. ದೇವರ ಸೇವೆ ಮಾಡುವ ಕೆಲಸವನ್ನು ಮನುಷ್ಯ ಸದಾ ಮುಂದುವರಿಸಬೇಕು. ಇದರಿಂದ ಒಂದಿಲ್ಲೊಂದು ದಿನ ನಮಗೆ ಖಂಡಿತವಾಗಿ ಫಲ ಸಿಗಲಿದೆ.
    | ರಾಜಕುಮಾರ ಪಾಟೀಲ್ ತೆಲ್ಕೂರ ಮಾಜಿ ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts