More

    ಗಾಯತ್ರಿ ದೇವಿ ಪ್ರತಿಷ್ಠಾಪನೆ

    ಎನ್.ಆರ್.ಪುರ: ತಾಲೂಕು ಬ್ರಾಹ್ಮಣ ಮಹಾ ಸಭಾದಿಂದ ಅಗ್ರಹಾರದಲ್ಲಿ ಗಾಯತ್ರಿ ದೇವಿಯ ಪ್ರತಿಷ್ಠಾಪನೆ ಅಂಗವಾಗಿ ಶುಕ್ರವಾರ ವಿವಿಧ ಧಾರ್ಮಿಕ ಕಾರ್ಯ, ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.

    ಬೆಳಗ್ಗೆ 9 ಗಂಟೆಗೆ ಗಣಪತಿ ಪೂಜೆ, ಪುಣ್ಯಾಹವಾಚನ, ನಾಂದಿ, ಋತ್ವಿಗ್ವರಣ, ಮಹಾ ಸಂಕಲ್ಪ, ಮಹಾ ಗಣ ಹೋಮ ನಡೆಯಿತು. ಮದ್ಯಾಹ್ನ 12 ಗಂಟೆಗೆ ಪೂರ್ಣಾಹುತಿ, ಸಂಜೆ ರಾಕ್ಷೋಘ್ನ ಹೋಮ, ಕಲಶ ಪ್ರತಿಷ್ಠಾಪನೆ, ರಾತ್ರಿ ಅಷ್ಟಾವದಾನ ಸೇವೆ, ಮಹಾ ಮಂಗಳಾರತಿ ನಡೆಯಿತು.
    ಗಾಯತ್ರಿದೇವಿ ವಿಗ್ರಹವನ್ನು ವಿಗ್ರಹ ದಾನಿಗಳಾದ ನಾಗರಾಜ್ ಪುರಾಣಿಕ್ ಅವರ ಮನೆಯಿಂದ ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತರಲಾಯಿತು. ದೇವಸ್ಥಾನದ ಆವರಣದಲ್ಲಿ ಗಾಯತ್ರಿ ವಿಗ್ರಹಕ್ಕೆ ಭಕ್ತರು ಅಭಿಷೇಕ, ಪೂಜೆ ಮಾಡಲು ಅವಕಾಶ ಕಲ್ಪಿಸಲಾಗಿತ್ತು. ನೂರಾರು ಭಕ್ತರು ಅಭಿಷೇಕ ನೆರವೇರಿಸಿ ಪೂಜೆ ಸಲ್ಲಿಸಿದರು. ಬೆಳಗ್ಗೆ 10ರಿಂದ ಸಂಜೆ 6 ಗಂಟೆಯವರೆಗೆ ವಿವಿಧ ಮಹಿಳಾ ಭಜನಾ ಮಂಡಳಿಯವರಿಂದ ಭಜನೆ ನಡೆಯಿತು.
    ರಾತ್ರಿ ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ನಾರ್ವೆ ವಿದುಷಿ ಗಾಯತ್ರಿ ನಾಗರಾಜ್ ಅವರಿಂದ ಶಾಸ್ತ್ರೀಯ ಸಂಗೀತ ಕಾರ್ಯಕ್ರಮ ನಡೆಯಿತು. ಭಕ್ತರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು. ಬ್ರಾಹ್ಮಣ ಮಹಾಸಭಾದ ಪದಾಧಿಕಾರಿಗಳು, ಭಕ್ತರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts