More

    ಆಟಿಕೆಯ ಟ್ರ್ಯಾಕ್ಟರ್​ ಹಿಡಿದು ಹೋರಾಟ ನಡೆಸಿದ ಕಾಂಗ್ರೆಸ್​! ರಾಹುಲ್​ ಹೆಸರಿನ ಪಾಪುವನ್ನು ವಿದೇಶದಿಂದ ವಾಪಾಸು ಕರೆಸಲು ಈ ಆಟಿಕೆ ಎಂದ ಬಿಜೆಪಿ

    ಭೋಪಾಲ್​: ರೈತ ಹೋರಾಟಕ್ಕೆ ಬೆಂಬಲ ಸೂಚಿಸಿರುವ ಕಾಂಗ್ರೆಸ್​ ಇದೀಗ ಮತ್ತೊಂದು ಹಾಸ್ಯಸ್ಪದ ಕೆಲಸ ಮಾಡಿ, ಆಡಳಿತ ಪಕ್ಷದಿಂದ ವ್ಯಂಗ್ಯವಾಡಿಸಿಕೊಂಡಿದೆ. ಮಧ್ಯಪ್ರದೇಶ ಕಾಂಗ್ರೆಸ್ ಟ್ರ್ಯಾಕ್ಟರ್​ ಮೆರವಣಿಗೆ ಆಯೋಜನೆ ಮಾಡಿದ್ದು ಆದರೆ ಮೆರವಣಿಗೆಯ ದಿನ ಪ್ಲಾಸ್ಟಿಕ್​ ಟ್ರ್ಯಾಕ್ಟರ್​ ಪ್ರದರ್ಶಿಸುವ ಮೂಲಕ ನಗೆಪಾಟಲಿಗೆ ಸಿಲುಕಿಕೊಂಡಿದೆ.

    ಇದನ್ನೂ ಓದಿ: ಸರ್ಪೈಸ್​ ನೀಡಲು ಮನೆಗೆ ಬಂದ ಗಂಡನಿಗೆ ಕಾದಿತ್ತು ಬಿಗ್​ ಶಾಕ್​! ಹೆಂಡತಿಯ ಇನ್ನೊಂದು ರೂಪ ನೋಡಿದ ಗಂಡ ಮಾಡಿದ್ದೇನು?

    ಮಧ್ಯಪ್ರದೇಶದಲ್ಲಿ ಸೋಮವಾರದಂದು ವಿಧಾನಸಭಾ ಅಧಿವೇಶನ ನಿಗದಿ ಮಾಡಲಾಗಿತ್ತು. ಇದೇ ಸಮಯದಲ್ಲಿ ಟ್ರ್ಯಾಕ್ಟರ್​ ಮೆರವಣಿಗೆ ಮಾಡಿ, ವಿಧಾನಸಭೆಗೆ ಮುತ್ತಿಗೆ ಮಾಡಲು ಕಾಂಗ್ರೆಸ್​ ನಿರ್ಧರಿಸಿತ್ತು. ಆದರೆ ಅಧಿವೇಶನವನ್ನು ಮುಂದೂಡಲಾಗಿದೆ. ಅದೇ ಹಿನ್ನೆಲೆಯಲ್ಲಿ ಮೆರವಣಿಗೆಯನ್ನೂ ಮುಂದೂಡಲಾಗಿದೆ. ಆದರೆ ಮಕ್ಕಳ ಆಟಿಕೆಯ ಟ್ರ್ಯಾಕ್ಟರ್​ಗಳನ್ನು ಹಿಡಿದ ಕಾಂಗ್ರೆಸ್​ ನಾಯಕರು ವಿಧಾನಸಭೆಯ ಗಾಂಧಿ ಪ್ರತಿಮೆ ಮುಂದೆ ಕುಳಿತು ಆಟಿಕೆ ಪ್ರದರ್ಶಿಸಿದ್ದಾರೆ.

    ಇದನ್ನೂ ಓದಿ: ಇಡಿ ಕಚೇರಿಯೀಗ ಬಿಜೆಪಿ ಕಾರ್ಯಾಲಯ! ಇಡಿ ಕಚೇರಿ ಮುಂದೆ ಬಿಜೆಪಿ ಪೋಸ್ಟರ್​ ಹಾಕಿದ ಶಿವಸೇನೆ

    ಕಾಂಗ್ರೆಸ್​ನ ಈ ವಿಶೇಷ ಪ್ರದರ್ಶನವನ್ನು ಕಂಡ ಬಿಜೆಪಿ ವ್ಯಂಗ್ಯವಾಡಿದೆ. ಕಾಂಗ್ರೆಸ್​ನ ಹಿರಿಯ ಮಗ ರಾಹುಲ್​ ಗಾಂಧಿ ವಿದೇಶಕ್ಕೆ ಹೋಗಿ ಕುಳಿತಿದ್ದಾರೆ. ಅವರ ಮನವೊಲಿಸಲಿ ಮತ್ತು ವಾಪಾಸು ಕರೆಸಲು ಕಮಲ ನಾಥ ಅವರು ಹೊಸ ಮಾರ್ಗ ಕಂಡುಕೊಂಡಿದ್ದಾರೆ. ಈ ರೀತಿ ಆಟಿಕೆ ತೋರಿಸಿದರೆ ಆಲೂಗಡ್ಡೆಯನ್ನು ಇಷ್ಟಪಡುವ ರಾಹುಲ್​ ಗಾಂಧಿ ಅವರು ಇದನ್ನೂ ಇಷ್ಟ ಪಡುತ್ತಾರೆ ಎಂದು ಮಧ್ಯಪ್ರದೇಶದ ಗೃಹ ಸಚಿವ ನರೋತ್ತಮ್ ಮಿಶ್ರಾ ವ್ಯಂಗ್ಯವಾಡಿದ್ದಾರೆ. (ಏಜೆನ್ಸೀಸ್​)

    ಡಾಕ್ಟರ್​ ಕನಸು ಕಟ್ಟಿದ್ದ ಯುವತಿ ಆತ್ಮಹತ್ಯೆ; ಶೇ. 96 ಅಂಕ ತೆಗೆದರೂ ಸಿಗಲಿಲ್ಲ ಸರ್ಕಾರಿ ಸೀಟು!

    2021 ಇನ್ನೂ ಭೀಕರವಾಗಿರುತ್ತೆ! ಬಲ್ಗೇರಿಯನ್ ನಿಗೂಢ ಮಹಿಳೆ ಬಾಬಾ ವಂಗಾ ಭವಿಷ್ಯ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts