More

    ಮತ್ತೊಮ್ಮೆ ಕುಸ್ತಿಪಟುವಿನ ಕೈಬಿಟ್ಟ ಬರೋಡಾ ಮಂದಿ; ಕಾಂಗ್ರೆಸ್​ಗೆ ಗೆಲುವು

    ದೇಶದ ಬಹುತೇಕ ಉಪಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದ್ದರೂ ಹರ್ಯಾಣಾದ ಬರೋಡಾದಲ್ಲಿ ಕಮಲ ಬಾಡಿದೆ. ಇಲ್ಲಿ ಜಯ ಕೈ ಪಾಲಿಗೆ ದಕ್ಕಿದೆ.

    ಹರ್ಯಾಣದ ಸೋನಿಪತ್ ಜಿಲ್ಲೆಯ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್​ನ ಇಂದು ರಾಜ್​ ನರ್ವಾಲ್​ ಅವರು ಬಿಜೆಪಿಯ ಯೋಗೇಶ್ವರ್​ ದತ್​ (ಒಲಿಂಪಿಯನ್ ಕುಸ್ತಿಪಟು)ಅವರನ್ನು ಸೋಲಿಸಿದ್ದಾರೆ.
    ಈ ವಿಧಾನಸಭೆಯ ಕಾಂಗ್ರೆಸ್​ ಶಾಸಕರಾಗಿದ್ದ ಶ್ರೀಕೃಷ್ಣ ಹೂಡಾ ನಿಧನ ಹೊಂದಿದ ಕಾರಣ ಚುನಾವಣೆ ನಡೆಸಲಾಗಿತ್ತು. ಯೋಗೇಶ್ವರ್​ ದತ್​ ಅವರು 2019ರ ವಿಧಾನಸಭಾ ಚುನಾವಣೆಯಲ್ಲಿ ಕೂಡ ಶ್ರೀಕೃಷ್ಣ ಹೂಡಾ ವಿರುದ್ಧ ಸೋತಿದ್ದರು. ಇದೀಗ ಮತ್ತೆ ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಸೋಲುಂಡಿದ್ದಾರೆ.

    ಕೃಷಿ ಮಸೂದೆ ಪಾಸ್ ಆದಾಗ ಅತಿ ಹೆಚ್ಚು ಪ್ರತಿಭಟನೆ ಆಗಿದ್ದು ಹರ್ಯಾಣ ಮತ್ತು ಪಂಜಾಬ್​ಗಳಲ್ಲಿ. ಕಾಂಗ್ರೆಸ್ ಗೆಲುವಿಗೆ ಈ ಬಿಲ್ ಪಾಸ್​ ಆಗಿದ್ದು ವರವಾಯಿತು. ಬಿಜೆಪಿಗೆ ಅದೇ ಮುಳ್ಳಾಯಿತು ಎಂದು ರಾಜಕೀಯ ತಜ್ಞರು ವಿಶ್ಲೇಷಿಸಿದ್ದಾರೆ.

    ಕಳೆದ ವರ್ಷ ವಿಧಾನಸಭಾ ಚುನಾವಣೆಯ ಪೂರ್ವ ಬಿಜೆಪಿ ಸೇರ್ಪಡೆಯಾಗಿದ್ದ, 2012ರ ಒಲಿಂಪಿಕ್ ಕಂಚಿನ ಪದಕ ವಿಜೇತ ಕುಸ್ತಿಪಟು ದತ್​ ಅವರಿಗೆ ಈ ಬಾರಿಯೂ ನಿರಾಸೆಯೇ ಆಗಿದೆ. ಕಾಂಗ್ರೆಸ್​ ಪರ ಮಾಜಿ ಮುಖ್ಯಮಂತ್ರಿ ಭೂಪಿಂದರ್​ ಸಿಂಗ್​ ಹೂಡಾ, ಅವರ ಪುತ್ರ, ಮಾಜಿ ಸಂಸದ ದೀಪೇಂದರ್​ ಸಿಂಗ್ ಹೂಡಾ, ರಾಜ್ಯ ಕಾಂಗ್ರೆಸ್ ಮುಖ್ಯಸ್ಥರಾದ ಕುಮಾರಿ ಸೆಲ್ಜಾ ಭರ್ಜರಿ ಪ್ರಚಾರ ನಡೆಸಿದ್ದರು. (ಏಜೆನ್ಸೀಸ್​)

    ಪಟಾಕಿ ಹೊಡೆಯಿರಿ, ರಾಮ ಬಂದಿದ್ದನ್ನು ಸಂಭ್ರಮಿಸಿ! ಪಟಾಕಿ ಬ್ಯಾನ್​ ಮಾಡಲಾಗದು ಎಂದು ಸಿಎಂ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts